ಜಾಹೀರಾತಿನಲ್ಲಿ ದೇವತೆ, ಸಂತರು ಮತ್ತು ರಾಷ್ಟ್ರಪುರುಷರನ್ನು ಉಪಯೋಗಿಸಿಕೊಳ್ಳುವವರ...


ಪೊಲೀಸ್ ಮಹಾಸಂಚಾಲಕರಿಂದ ಮಹಾರಾಷ್ಟ್ರದಾದ್ಯಂತ 
ಪೊಲೀಸ್ ಠಾಣೆಗೆ ಪತ್ರ! ಜಾಹೀರಾತಿನಲ್ಲಿ ದೇವತೆ, ಸಂತರು 
ಮತ್ತು ರಾಷ್ಟ್ರಪುರುಷರನ್ನು ಉಪಯೋಗಿಸಿಕೊಳ್ಳುವವರ ವಿರುದ್ಧ ಕ್ರಮಕೈಗೊಳ್ಳಿ!

ಮುಂಬೈ : ದೇವತೆ, ಸಂತರು ಮತ್ತು ರಾಷ್ಟ್ರಪುರುಷರನ್ನು ಜಾಹೀರಾತಿಗಾಗಿ ಉಪಯೋಗಿಸಿ ಅವರನ್ನು ವಿಡಂಬನೆ ಮಾಡಲಾಗುತ್ತದೆ. ಅದರಿಂದ ಆಯಾ ಸಮಾಜ ಘಟಕದ ಭಾವನೆಯನ್ನು ನೋಯಿಸಲಾಗುತ್ತದೆ. ಪರಿಣಾಮ ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆ ನಿರ್ಮಾಣವಾಗುತ್ತದೆ. ಆದುದರಿಂದ ಇನ್ನುಮುಂದೆ ಇಂತಹ ವಿಡಂಬನಾತ್ಮಕ ಜಾಹೀರಾತು ತಯಾರಿಸುವವರ ಮೇಲೆ ಕ್ರಮಕೈಗೊಳ್ಳಿ ಎಂದು ರಾಜ್ಯದ ಪೊಲೀಸ್ ಮಹಾಸಂಚಾಲಕರು, ರಾಜ್ಯದಾದ್ಯಂತ ಎಲ್ಲ ಪೊಲೀಸ್ ಠಾಣೆಗಳಿಗೆ ನೇರವಾಗಿ ಆದೇಶಪತ್ರ ಕಳುಹಿಸಿದ್ದಾರೆ. (ತಡವಾಗಿ ಹೊಳೆದ ಜಾಣತನ! ಕಾನೂನು- ಸುವ್ಯವಸ್ಥೆ ಪ್ರಶ್ನೆ ಎದುರಾಗುತ್ತದೆ ಎಂಬ ಭಯದಿಂದಲ್ಲ ಶ್ರದ್ಧಾಸ್ಥಾನದ ಅವಮಾನವು ಧರ್ಮದ್ರೋಹವಾಗಿದೆ ಎಂಬುದು ಗಮನದಲ್ಲಿಟ್ಟುಕೊಂಡು ಪೊಲೀಸರು ತಾವೇ ಇಂತಹ ವಿಡಂಬನಾತ್ಮಕ ಜಾಹೀರಾತಿನ ಮೇಲೆ ಕ್ರಮ ಕೈಗೊಳ್ಳಬೇಕು! - ಸಂಪಾದಕರು) ಜಾಹೀರಾತುಗಳನ್ನು ಆಕರ್ಷಕವಾಗಿ ಮಾಡಲು ಅನೇಕ ಸಲ ದೇವತೆಗಳ ಮತ್ತು ರಾಷ್ಟ್ರೀಯ ಪುರುಷರ ಭೂಮಿಕೆಯಲ್ಲಿ ತೋರಿಸಲಾಗುತ್ತಿದೆ. ಇದರಿಂದ ವಾದ ವಿವಾದಗಳು ನಿರ್ಮಾಣವಾಗುತ್ತವೆ. ಹಾಗಾಗಿ ಈ ಆದೇಶವನ್ನು ಹೊರಡಿಸಲಾಗಿದೆ.

No comments:

Post a Comment