ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ
ಧರ್ಮಶಾಸ್ತ್ರದಲ್ಲಿ ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ ೧೬ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ. ೧೬ಉಪಚಾರಗಳಲ್ಲಿ ಗಂಧವನ್ನು ಹಚ್ಚುವುದು, ಹೂವುಗಳನ್ನು ಅರ್ಪಿಸುವುದು, ಧೂಪವನ್ನು ತೋರಿಸುವುದು, ದೀಪವನ್ನು ಬೆಳಗುವುದು, ನೈವೇದ್ಯವನ್ನು ತೋರಿಸುವುದು ಈ ಐದು ಉಪಚಾರಗಳಿಗೆ ‘ಪಂಚೋಪಚಾರ’ ಎನ್ನುತ್ತಾರೆ. ಹದಿನಾರು ಉಪಚಾರಗಳನ್ನು ಮಾಡಲು ಆಗದಿದ್ದರೆ ಈ ಐದು ಉಪಚಾರಗಳಿಂದಾದರೂ ದೇವರ ಪೂಜೆಯನ್ನು ಮಾಡಬೇಕು. ಈ ಲೇಖನ ಮಾಲಿಕೆಯಲ್ಲಿ ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಮಾಹಿತಿಯನ್ನು ನೀಡಲಾಗುತ್ತಿದೆ. (ಮುಂದುವರಿದ ಭಾಗ)
ಐದನೆಯ ಉಪಚಾರ: ನೈವೇದ್ಯವನ್ನು ಅರ್ಪಿಸುವುದು
೧.ನೈವೇದ್ಯವನ್ನು ಅರ್ಪಿಸುವವರ ಭಾವವು ಹೇಗಿರಬೇಕು?: ತಿನ್ನುವ ಪದಾರ್ಥಗಳನ್ನು ದೇವತೆಗಳಿಗೆ ಅರ್ಪಿಸುವಾಗ ಭಾವವು ಮಹತ್ವದ್ದಾಗಿರುತ್ತದೆ. ನೈವೇದ್ಯವನ್ನು ಅರ್ಪಿಸುವವರ ಭಾವವು ಎಷ್ಟು ಹೆಚ್ಚಿರುತ್ತದೆಯೋ ದೇವತೆಗಳು ನೈವೇದ್ಯವನ್ನು ಗ್ರಹಿಸುವ ಸಾಧ್ಯತೆಯೂ ಅಷ್ಟೇ ಹೆಚ್ಚಿರುತ್ತದೆ. ‘ನಾವು ಅರ್ಪಿಸುತ್ತಿರುವ ನೈವೇದ್ಯವು ದೇವತೆಗಳಿಗೆ ತಲುಪುತ್ತಿದೆ ಮತ್ತು ದೇವತೆಗಳು ಅದನ್ನು ಸೇವಿಸುತ್ತಿದ್ದಾರೆ’ ಎಂಬ ಭಾವವು ನೈವೇದ್ಯವನ್ನು ಅರ್ಪಿಸುವವರಲ್ಲಿ ಇರಬೇಕು. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೨.೧೧.೨೦೦೪, ಮಧ್ಯಾಹ್ನ ೧೨.೪೬)
೧ಅ.ಭಾವದಿಂದಾಗಿ ನೈವೇದ್ಯದಿಂದ ಪ್ರಕ್ಷೇಪಿತವಾಗುವ ಲಹರಿಗಳು ಕಾರ್ಯನಿರತವಾಗುವುದು ಮತ್ತು ಅದರಿಂದ ನೈವೇದ್ಯವು ಈಶ್ವರನ ತತ್ತ್ವದಿಂದ ತುಂಬಿಕೊಳ್ಳುವುದು: ಜೀವವು ಪಂಚಪ್ರಾಣಗಳನ್ನು ಜಾಗೃತಗೊಳಿಸಿ ಅವುಗಳ ಮೂಲಕ ಮನಃ ಶಕ್ತಿಯನ್ನು ಜಾಗೃತಗೊಳಿಸಿ ಆಹಾರವನ್ನು ದೇವರಿಗೆ ಅರ್ಪಿಸಿದರೆ ಜೀವದಲ್ಲಿ ಭಾವದ ಲಹರಿಗಳು ನಿರ್ಮಾಣವಾಗುತ್ತವೆ. ಅವುಗಳಿಂದ ವರ್ತುಲಾಕಾರ ಹೊದಿಕೆಯು ನಿರ್ಮಾಣವಾಗಿ ಆಹಾರದಿಂದ ಪ್ರಕ್ಷೇಪಿತವಾಗುವ ಲಹರಿಗಳು ಕಾರ್ಯನಿರತವಾಗಲು ಪ್ರಾರಂಭವಾಗುತ್ತವೆ. ಇದರಿಂದ ಆಹಾರದ ಮೇಲೆ ಸೂಕ್ಷ್ಮ ಆಕರ್ಷಣೆಯ ತತ್ತ್ವವು ನಿರ್ಮಾಣವಾಗಿ ಈಶ್ವರನ ಲಹರಿಗಳು ಆಹಾರದಲ್ಲಿ ಪ್ರಕ್ಷೇಪಿತವಾಗಿ ಆಹಾರವು ಈಶ್ವರನ ತತ್ತ್ವದಿಂದ ತುಂಬಿಕೊಳ್ಳುತ್ತವೆ.-ಓರ್ವ ಜ್ಞಾನಿ (ಶ್ರೀ.ನಿಷಾದ ದೇಶಮುಖರ ಮಾಧ್ಯಮ ದಿಂದ, ೧೩.೨.೨೦೦೭, ಮಧ್ಯಾಹ್ನ ೩.೧೮)
೨.ನೈವೇದ್ಯವನ್ನು ಅರ್ಪಿಸುವ ಹಂತಗಳು
ಅ.ಮೊದಲ ಹಂತ: ಕೇವಲ ಕರ್ತವ್ಯವೆಂದು ನೈವೇದ್ಯವನ್ನು ಅರ್ಪಿಸುವುದು.
ಆ.ದ್ವಿತೀಯ ಹಂತ: ದೇವರಿಗೆ ಅಪೇಕ್ಷಿತವಿರುವ ನೈವೇದ್ಯವನ್ನು ಅರ್ಪಿಸುವುದು. ಅಪೇಕ್ಷಿತದ ಅರ್ಥವನ್ನು ಭಾವಪೂರ್ಣವಾಗಿ ಎಂದು ತಿಳಿದುಕೊಳ್ಳಬೇಕು.
ಇ.ತೃತೀಯ ಹಂತ: ಸಾಧಕರ ಆಧ್ಯಾತ್ಮಿಕ ಉನ್ನತಿಯಾದಂತೆ ಅವರ ಅಹಂಭಾವವು ಕಡಿಮೆಯಾಗಿ ಅವರಲ್ಲಿ ಅವ್ಯಕ್ತ ಭಾವದ ಪ್ರಮಾಣವು ಹೆಚ್ಚಾಗ ತೊಡಗುತ್ತದೆ. ಇದರಿಂದ ‘ನಾನು ದೇವರಿಗೆ ನೈವೇದ್ಯವನ್ನು ಅರ್ಪಿಸುತ್ತೇನೆ’ ಎಂಬ ವಿಚಾರವು ಕಡಿಮೆಯಾಗಿ ಅವರಿಗೆ ದೇವತೆಗಳಿಂದ ಪ್ರಕ್ಷೇಪಿತವಾಗುವ ಚೈತನ್ಯದಿಂದ ಹೆಚ್ಚು ಲಾಭ ಸಿಗುತ್ತದೆ.
೩.ನೈವೇದ್ಯಕ್ಕಾಗಿ ತಯಾರಿಸಿದ ಅನ್ನ (ಆಹಾರ)
ಅ.ನೈವೇದ್ಯಕ್ಕೆಂದು ತಯಾರಿಸಿದ ಎಲೆಯಲ್ಲಿ ಉಪ್ಪನ್ನು ಏಕೆ ಬಡಿಸಬಾರದು?: ಉಪ್ಪು ಪೃಥ್ವಿ ಮತ್ತು ಆಪತತ್ತ್ವಗಳಿಗೆ ಸಂಬಂಧಿಸಿರುವುದರಿಂದ ಅದರಲ್ಲಿ ರಜ-ತಮಾತ್ಮಕ ಲಹರಿಗಳನ್ನು ಆಕರ್ಷಿಸುವ ಪ್ರಮಾಣವು ಹೆಚ್ಚಿರುತ್ತದೆ. ಆದುದರಿಂದ ನೈವೇದ್ಯಕ್ಕೆ ತಯಾರಿಸಿದ ಎಲೆಯಲ್ಲಿ ಉಪ್ಪನ್ನುಬಡಿಸಬಾರದು.
ಆ.ನೈವೇದ್ಯಕ್ಕೆ ಸಾತ್ತ್ವಿಕ ಪದಾರ್ಥಗಳನ್ನು ಏಕೆ ತಯಾರಿಸಬೇಕು?: ನೈವೇದ್ಯಕ್ಕೆ ತಯಾರಿಸುವ ಪದಾರ್ಥಗಳಲ್ಲಿ ಖಾರ, ಉಪ್ಪು ಮತ್ತು ಎಣ್ಣೆಗಳನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬೇಕು, ಏಕೆಂದರೆ ಈ ಪದಾರ್ಥಗಳು ರಾಜಸಿಕ- ತಾಮಸಿಕವಾಗಿರುತ್ತವೆ. ಶುದ್ಧ ತುಪ್ಪವನ್ನು ಹೆಚ್ಚಿಗೆ ಉಪಯೋಗಿಸಬೇಕು, ಏಕೆಂದರೆ ತುಪ್ಪವು ಸಾತ್ತ್ವಿಕವಾಗಿರುತ್ತದೆ. ಇದರಿಂದ ಇತರ ಪದಾರ್ಥಗಳೂ ಸಾತ್ತ್ವಿಕವಾಗುತ್ತವೆ. ನೈವೇದ್ಯಕ್ಕೆ ತಯಾರಿಸಿದ ಎಲೆಯಲ್ಲಿ ಸಾತ್ತ್ವಿಕ ಪದಾರ್ಥಗಳನ್ನು ಆದಷ್ಟು ಹೆಚ್ಚು ಬಡಿಸ ಬೇಕು, ಏಕೆಂದರೆ ಈ ಪದಾರ್ಥಗಳಲ್ಲಿ ದೇವತೆಗಳಿಂದ ಆಶೀರ್ವಾದದ ರೂಪದಲ್ಲಿ ಬರುವ ಸಾತ್ತ್ವಿಕ ಲಹರಿಗಳನ್ನು ಆಕರ್ಷಿಸುವ ಕ್ಷಮತೆಯು ಹೆಚ್ಚಿಗೆ ಇರುತ್ತದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೨.೧೧.೨೦೦೪, ಮಧ್ಯಾಹ್ನ ೧೨.೪೬)
೪.ದೇವರಿಗೆ ನೈವೇದ್ಯವನ್ನು ತೋರಿಸುವ ಮೊದಲು ಆಹಾರವನ್ನು ಏಕೆ ಮುಚ್ಚಿಡಬೇಕು?:
‘ಆಹಾರವನ್ನು ಮುಚ್ಚಿಡುವುದರಿಂದ ಆಹಾರದಿಂದ ಪ್ರಕ್ಷೇಪಿತವಾಗುವ ಲಹರಿಗಳಿಗೆ ನಿರ್ಬಂಧವುಂಟಾಗಿ ಅವು ಬಾಹ್ಯ ವಾಯುಮಂಡಲದಲ್ಲಿ ಪ್ರಕ್ಷೇಪಿಸುವುದಿಲ್ಲ.’ - ಓರ್ವ ಜ್ಞಾನಿ (ಶ್ರೀ.ನಿಷಾದ ದೇಶಮುಖರ ಮಾಧ್ಯಮದಿಂದ, ೧೩.೨.೨೦೦೭, ಮಧ್ಯಾಹ್ನ ೩.೧೮)
ವಿವರಣೆ: ನೈವೇದ್ಯದ ಆಹಾರವನ್ನು ಸಾತ್ತ್ವಿಕ ಪದಾರ್ಥಗಳಿಂದ ತಯಾರಿಸಿರುವುದರಿಂದ ಅದು ಸಾತ್ತ್ವಿಕವಾಗಿರುತ್ತದೆ. ನೈವೇದ್ಯವನ್ನು ತೆರೆದಿಟ್ಟರೆ ಇತ್ತೀಚಿನ ರಜ-ತಮ ಪ್ರಧಾನ ಕಲಿಯುಗದ ವಾತಾವರಣದಿಂದ ಆಹಾರವೂ ರಜ-ತಮ ಪ್ರಧಾನವಾಗುವ ಸಾಧ್ಯತೆಯು ಹೆಚ್ಚಾಗುತ್ತದೆ. ಆದುದರಿಂದ ಆಹಾರ ಮುಚ್ಚಿಡುವುದು ಶ್ರೇಯಸ್ಕರವಾಗಿದೆ.
೫.ದೇವರಿಗೆ ನೈವೇದ್ಯವನ್ನು ಅರ್ಪಿಸುವಾಗ ಎಲೆಯನ್ನು ಹೇಗಿಡಬೇಕು ಮತ್ತು ಅದರ ಹಿಂದಿನ ಕಾರಣವೇನು? (ಬಾಳೆಯ ಎಲೆಯ ತುದಿಯಲ್ಲಿ ಸಾತ್ತ್ವಿಕ ಲಹರಿಗಳನ್ನು ಪ್ರಕ್ಷೇಪಿಸುವ ಕ್ಷಮತೆಯು ತೊಟ್ಟಿಗಿಂತ ಹೆಚ್ಚಿರುವುದರಿಂದ ಆ ಬದಿಯು ಅಂದರೆ ಎಲೆಯ ಅಗ್ರಭಾಗವು ನಮ್ಮ ಕಡೆಗಿರಬೇಕು): ದೇವರಿಗೆ ಬಾಳೆ ಎಲೆಯ ಮೇಲೆ ನೈವೇದ್ಯವನ್ನು ಅರ್ಪಿಸುತ್ತಾರೆ. ಬಾಳೆಯ ಎಲೆಯ ತುದಿಯಲ್ಲಿ (ಅಗ್ರ ಭಾಗದಲ್ಲಿ) ಸಾತ್ತ್ವಿಕ ಲಹರಿಗಳನ್ನು ಪ್ರಕ್ಷೇಪಿಸುವ ಕ್ಷಮತೆಯು ತೊಟ್ಟಿಗಿಂತ (ದಂಟು) ಹೆಚ್ಚಿರುತ್ತದೆ. ಎಲೆಯ ತುದಿಯಿಂದ ಹೊರ ಬೀಳುವ ಸಾತ್ತ್ವಿಕ ಲಹರಿಗಳು ಕಾರಂಜಿಯಂತಿರುತ್ತವೆ. ಕಾರಂಜಿಯಂತೆ ಪ್ರಕ್ಷೇಪಿತವಾಗುವ ಈ ಲಹರಿಗಳಿಂದ ಜೀವದ ಸುತ್ತಲಿರುವ ವಾತಾವರಣದಲ್ಲಿನ ರಜ-ತಮಗಳ ಪ್ರಮಾಣವು ಕಡಿಮೆಯಾಗುತ್ತದೆ. ಆದುದರಿಂದ ದೇವರಿಗೆ ಅರ್ಪಿಸುವ ನೈವೇದ್ಯದ ಎಲೆಯ ಹಿಂದಿನ ಬದಿಯನ್ನು (ಅಂದರೆ ತೊಟ್ಟನ್ನು) ದೇವರ ಕಡೆಗೆ ಮತ್ತು ಮುಂದಿನ ಬದಿಯನ್ನು (ಎಲೆಯ ತುದಿಯನ್ನು) ನಮ್ಮ ಕಡೆಗೆ ಮಾಡಿಡುತ್ತಾರೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೦.೮.೨೦೦೪, ಸಾಯಂ. ೫.೫೭)
(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ’)

No comments:
Post a Comment