‘ಸಲ್ವಾರ್-ಕುರ್ತಾ’ ಎಂಬ ಉಡುಪು ‘ಚುಡಿದಾರ-ಕುರ್ತಾ’ಕ್ಕಿಂತ ಕಡಿಮೆ ...

‘ಸಲ್ವಾರ್-ಕುರ್ತಾ’ ಎಂಬ ಉಡುಪು ‘ಚುಡಿದಾರ-ಕುರ್ತಾ’ಕ್ಕಿಂತ ಕಡಿಮೆ ರಜ-ತಮ ಪ್ರಧಾನವಾಗಿದೆ ಎಂಬುದು ಗಮನದಲ್ಲಿಡಿ!

‘ಸ್ತ್ರೀಯರಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಉಪಯುಕ್ತ ಉಡುಪುಗಳು’ ಎಂಬ ಸನಾತನದ ಗ್ರಂಥದಲ್ಲಿನ ‘೨ಅ’ ಈ ಅಂಶದಲ್ಲಿ ‘ಚುಡಿದಾರ’ ರಜ-ತಮವಾಗಿದೆ ಎಂದು ಹೇಳಲಾಗಿದೆ. ಚುಡಿದಾರ-ಕುರ್ತಾದಂತೆ ಪಂಜಾಬಿ ಉಡುಪು (ಸಲ್ವಾರ್-ಕುರ್ತಾ; ಇದರಲ್ಲಿ ಸಲ್ವಾರ್ ಸಡಿಲವಾಗಿರುತ್ತದೆ ಮತ್ತು ನೆರಿಗೆಯಿರುವಂತಹದ್ದಾಗಿದೆ.) ಕೂಡ ರಜ-ತಮ ಪ್ರಧಾನವಾಗಿದೆ. ಆದರೆ ಚುಡಿದಾರ-ಕುರ್ತಾದ ತುಲನೆಯಲ್ಲಿ ‘ಸಲ್ವಾರ್-ಕುರ್ತಾ’ ಎಂಬ ಉಡುಪು ಕಡಿಮೆ ರಜ-ತಮ ಪ್ರಧಾನವಾಗಿದೆ.
ಮೇಲೆ ವಿವರಿಸಿದ ಗ್ರಂಥದಲ್ಲಿನ ‘೨ಅ೧ಆ’ ಎಂಬ ಅಂಶದಲ್ಲಿ ‘ವಿದೇಶೀ ಸಂಸ್ಕೃತಿಯಲ್ಲಿನ ಇತರ ಉಡುಪುಗಳ ತುಲನೆಯಲ್ಲಿ ಚುಡಿದಾರ ಉಡುಪು ಸ್ವಲ್ಪ ಸಾತ್ತ್ವಿಕವಾಗಿದೆ.’ ಎಂದು ಹೇಳಲಾಗಿದೆ. ಅಲ್ಲಿ ‘ವಿದೇಶೀ ಸಂಸ್ಕೃತಿಯ ಇತರ ಉಡುಪುಗಳ ತುಲನೆಯಲ್ಲಿ ಪಂಜಾಬಿ ಉಡುಪು ಸ್ವಲ್ಪ ಸಾತ್ತ್ವಿಕವಾಗಿದೆ’ ಎಂದು ಓದಬೇಕು. ಹಾಗೆಯೇ ‘೨ಅ೧ಉ’ ಎಂಬ ಅಂಶದಲ್ಲಿ ಎಲ್ಲೆಡೆಯಲ್ಲಿ ‘ಚುಡಿದಾರ’ ಎಂಬ ಶಬ್ದವಿದ್ದಲ್ಲಿ ‘ಪಂಜಾಬಿ’ ಎಂಬ ಶಬ್ದವನ್ನು ಉಪಯೋಗಿಸಬೇಕು. ವಾಚಕರು ಮತ್ತು ಸಾಧಕರು ತಮ್ಮಲ್ಲಿದ್ದ ಗ್ರಂಥದಲ್ಲಿ ಈ ಬದಲಾವಣೆ ಮಾಡಿಕೊಳ್ಳಬೇಕು ಎಂದು ವಿನಂತಿ. ಅದರಂತೆ ಜಿಲ್ಲಾ ಪ್ರಸಾರ ಸೇವಕ/ ಜಿಲ್ಲಾ ಸಮನ್ವಯಕರು ಜಿಲ್ಲೆಯಲ್ಲಿ ವಿತರಣೆಗಿರುವ ಮೇಲಿನ ಗ್ರಂಥಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.
ಈ ನಿಮಿತ್ತದಲ್ಲಿ ಸ್ತ್ರೀಯರಿಗೆ ‘ಸೀರೆ-ರವಿಕೆ (ಬ್ಲೌಸ್)’ ಸಾತ್ತ್ವಿಕ ಉಡುಪಾಗಿದೆ ಎಂಬುದನ್ನು ಹೇಳಬೇಕೆನಿಸುತ್ತದೆ.

No comments:

Post a Comment