ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಳಿಯಾಳದ ನಾಮದೇವ ಹರಿಮಂದಿರದಲ್ಲಿ ನಡೆದ....

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ
ಹಳಿಯಾಳದ ನಾಮದೇವ ಹರಿಮಂದಿರದಲ್ಲಿ ನಡೆದ ಸ್ನೇಹ ಸಮ್ಮೇಳನ

ಹಳಿಯಾಳ: ಜನವರಿ ೨೪ರಂದು ಇಲ್ಲಿನ ನಾಮದೇವ ಹರಿಮಂದಿರದಲ್ಲಿ ಸಂಜೆ ೫ಗಂಟೆಗೆ ಸ್ನೇಹ ಸಮ್ಮೇಳನವನ್ನು ಆಚರಿಸಲಾಯಿತು.
ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಾದ ಶ್ರೀ.ವಿಠೋಬಾ ಮ್ಹಾಳ್ಸೇಕರ ಇವರು ಮಕರ ಸಂಕ್ರಾಂತಿಯ ಮಹತ್ವ, ಎಳ್ಳು ಬೆಲ್ಲದ ಮಹತ್ವ, ಅರಿಶಿಣ ಕುಂಕುಮದ ಮಹತ್ವವನ್ನು ತಿಳಿಸಿದರು. ಫೆಬ್ರವರಿ ೧೪ರಂದು ವೆಲೆಂಟೈನ್ ದಿನ ಆಚರಿಸುವುದರಿಂದ ನೈತಿಕ ಅಧಃಪತನವಾಗುವ ಬಗ್ಗೆ ವಿವರಿಸಿದರು. ಧರ್ಮಾಚರಣೆಯ ಅವಶ್ಯಕತೆ, ಹಿಂದೂ ಸಂಘಟನೆಯ ಮಹತ್ವವನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸುಮಾರು ೮೦ಜಿಜ್ಞಾಸು ಹಾಗೂ ಧರ್ಮಾಭಿಮಾನಿಗಳಿಗೆ ಅರಿಶಿಣ ಕುಂಕುಮ ಕಾರ್ಯಕ್ರಮದಲ್ಲಿ ಸನಾತನದ ಸಾತ್ತ್ವಿಕ ವಸ್ತುವನ್ನು ಉಡುಗೊರೆಯಾಗಿ ನೀಡಲಾಯಿತು.

No comments:

Post a Comment