ಭಟ್ಕಳ: ದಿನಾಂಕ ೨೩.೧.೨೦೧೧ ರಂದು ಸಾಯಂ. ೫.೦೦ಗಂಟೆಗೆ ಇಲ್ಲಿನ ಶ್ರೀ.ತಿರುಮಲ ವೆಂಕಟರಮಣ ಸಭಾಭವನದಲ್ಲಿ ಹಿಂದೂ ಧರ್ಮಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಪ್ರಮುಖ ವಕ್ತಾರರಾದ ಶ್ರೀಶ್ರೀಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಸ್ವಾಮೀಜಿ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ವೆಂಕಟರಮಣ ನಾಯ್ಕ, ಸನಾತನ ಸಂಸ್ಥೆಯ ಸೌ. ವಾಸಂತಿ ಮುರ್ಡೇಶ್ವರ ಇವರು ವ್ಯಾಸಪೀಠದಲ್ಲಿ ಉಪಸ್ಥಿತರಿದ್ದರು. ಈ ಸಭೆಯಲ್ಲಿ ೬೦೦ ಕ್ಕೂ ಹೆಚ್ಚು ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು.
ಹಿಂದೂಗಳೇ ದೇವಸ್ಥಾನಗಳ ಸರಕಾರಿಕರಣ ವಿರೋಧಿಸಿ !- ಶ್ರೀ.ವೆಂಕಟರಮಣ ನಾಯ್ಕ
ಹಿಂದೂಗಳೇ ದೇವಸ್ಥಾನಗಳ ಸರಕಾರಿಕರಣ ವಿರೋಧಿಸಿ !- ಶ್ರೀ.ವೆಂಕಟರಮಣ ನಾಯ್ಕ
ಎನ್.ಸಿ.ಇ.ಆರ್.ಟಿ ಎಂಬ ಶಾಲಾ ಪಠ್ಯಕ್ರಮವನ್ನು ತಯಾರಿಸುವ ಸಂಸ್ಥೆಯ ಮಾಧ್ಯಮದಿಂದ ಕೇಂದ್ರ ಸರಕಾರ ೭ನೇ ತರಗತಿಯ ಇತಿಹಾಸ ಪಠ್ಯಪುಸ್ತಕದಲ್ಲಿ ಘಜ್ನಿ ಮಹಮ್ಮದ, ಔರಂಗಜೇಬ್ ರವರನ್ನು ಹೊಗಳಲು ೬೦ಪುಟಗಳನ್ನು ವ್ಯಯಸಿದೆ. ಕರ್ನಾಟಕ ಸರಕಾರ ಹಿಂದೂ ದೇವಾಲಯಗಳ ಸಂಪತ್ತು, ಅಪಾರ ಚಿನ್ನಾಭರಣ, ಭಕ್ತ ಜನರಿಂದ ಹರಿದು ಬರುತ್ತಿರುವ ಅಪಾರ ಆದಾಯದ ಮೇಲೆ ಕಣ್ಣಿಟ್ಟಿದೆ. ಸರಕಾರವು ಹಿಂದೂಗಳ ದೇವಸ್ಥಾನಗಳನ್ನು ಮಾತ್ರ ಸರಕಾರಿಕರಣ ಮಾಡುತ್ತಿದೆ. ಆದರೆ ಇತರ ಧರ್ಮೀಯರ ಪ್ರಾರ್ಥನಾ ಸ್ಥಳದ ಮೇಲೆ ನಿಯಂತ್ರಣ ಹೇರುವ ಗೋಜಿಗೆ ಹೋಗುವುದಿಲ್ಲ. ಇಂತಹ ಹಿಂದೂ ವಿರೋಧಿ ಸರಕಾರಿಕರಣ ವಿರೋಧಿಸಿ.
No comments:
Post a Comment