ಈಗ ದೊಡ್ಡ ದೊಡ್ಡ ನಗರಗಳಲ್ಲಿನ ಹಿಂದೂ ಧರ್ಮಜಾಗೃತಿ
ಸಭೆಗಳೊಂದಿಗೆ ಚಿಕ್ಕ ಚಿಕ್ಕ ಗ್ರಾಮಗಳಲ್ಲಿಯೂ ಹಿಂದೂ
ಸಭೆಗಳೊಂದಿಗೆ ಚಿಕ್ಕ ಚಿಕ್ಕ ಗ್ರಾಮಗಳಲ್ಲಿಯೂ ಹಿಂದೂ
ಜನಜಾಗೃತಿ ಸಮಿತಿಯ ‘ಹಿಂದೂ ಧರ್ಮಜಾಗೃತಿ ಸಭೆ’ಗಳು
![]() |
| ಗ್ರಂಥ ಬಿಡುಗಡೆ ಮಾಡುತ್ತಿರುವ ಶ್ರೀ ಷ||ಬ್ರ||ಒಡೆಯಾರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಎಡದಿಂದ ಸೌ.ಸುಮಾ ಮಂಜೇಶ ಮತ್ತು ಸೌ. ಕಾವೇರಿ ರಾಯ್ಕರ |
ನ್ಯಾಮತಿ : ೨೪.೧.೨೦೧೧ ರಂದು ಇಲ್ಲಿನ ಶ್ರೀ ಮಹಾಂತೇಶ್ವರ ವೀರಶೈವ ಕಲ್ಯಾಣ ಮಂದಿರದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ಧರ್ಮ ಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಷ||ಬ್ರ|| ಒಡೆಯಾರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹಿರೇಕಲ್ಮಠ ಹೊನ್ನಾಳಿ, ಸನಾತನ ಸಂಸ್ಥೆಯ ಸೌ. ಸುಮಾ ಮಂಜೇಶ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸೌ.ಕಾವೇರಿ ರಾಯ್ಕರವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ೩೦೦ಕ್ಕೂ ಹೆಚ್ಚು ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು.
ಶ್ರೀಷ||ಬ್ರ||ಒಡೆಯಾರ್ ಚಂದ್ರ ಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರು ಮಾತನಾಡುತ್ತಾ, ‘ಹಿಂದೂ ಧರ್ಮ ಶಾಸ್ತ್ರಕ್ಕನುಸಾರ ಆಚರಣೆ ಮಾಡಿದರೆ ಮಾತ್ರ ನಮಗೆ ಹಬ್ಬದ ಸಂಪೂರ್ಣ ಲಾಭಸಿಗಲು ಸಾಧ್ಯವಿದೆ ಮತ್ತು ಧರ್ಮದ ಮೇಲೆ ಶ್ರದ್ಧೆ ನಿರ್ಮಾಣವಾಗಲು ಸಾಧ್ಯ. ಹಾಗಾದರೆ ಮಾತ್ರ ನಾವು, ನಮ್ಮ ಧರ್ಮ ಮತ್ತು ನಮ್ಮ ಹಿಂದೂ ರಾಷ್ಟ್ರ ಉಳಿಯಲು ಸಾಧ್ಯ.
ಸ್ವಾಮೀಜಿಗಳು ಕೊನೆಯಲ್ಲಿ ಮಾತನಾಡುತ್ತಾ ‘ಸನಾತನ ಸಂಸ್ಥೆಯ ಗ್ರಂಥಗಳೆಂದರೆ ಹಿಂದೂ ಧರ್ಮಶಾಸ್ತ್ರಕ್ಕನುಸಾರವಿರುವ ಅತ್ಯಮೂಲ್ಯ ಗ್ರಂಥ ಸಂಪತ್ತಾಗಿದೆ. ಹಿಂದೂ ಧರ್ಮದಲ್ಲಿ ಹೇಳಲಾಗಿರುವ ಧರ್ಮಾಚರಣೆಯ ಮಾಹಿತಿ ಸನಾತನ ನಿರ್ಮಿತ ಗ್ರಂಥಗಳಲ್ಲಿ ನೀಡಲಾಗಿದೆ. ಇಂತಹ ಗ್ರಂಥ ಬೇರೆ ಎಲ್ಲಿಯೂ ಸಿಗುವುದಿಲ್ಲ. ಈ ಗ್ರಂಥಗಳನ್ನು ಓದಿ ಇದರ ಲಾಭ ಪಡೆದುಕೊಳ್ಳಿ' ಎಂದು ಧರ್ಮಾಭಿಮಾನಿಗಳಿಗೆ ಕರೆ ನೀಡಿದರು.
ಗಮನಾರ್ಹ ಅಂಶ
ಸಮಾಲೋಚನಾ ಸಭೆಯು ನಡೆಯುವಾಗ ಧರ್ಮಾಭಿಮಾನಿ ಶ್ರೀ.ಶಿವಕುಮಾರ್ ಮಾತನಾಡುತ್ತಾ, ‘ನಿಜವಾಗಿಯು ದೇವರು ಇದ್ದಾನೆ ಎಂದರೆ ಅದು ಹಿಂದೂ ಜನಜಾಗೃತಿ ಸಮಿತಿಯಲ್ಲಿ ಮಾತ್ರ. ನಿಸ್ವಾರ್ಥವಾಗಿ ಧರ್ಮಪ್ರಸಾರ ಮತ್ತು ಧರ್ಮರಕ್ಷಣಾ ಕಾರ್ಯವನ್ನು ಮಾಡುತ್ತಿರುವ ಸಂಘಟನೆಗಳೆಂದರೆ ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆ ಎಂದು ಹೇಳುತ್ತೇನೆ. ನಾನು ನಿಮ್ಮ ಜೊತೆ ಯಾವಾಗಲೂ ಇರುತ್ತೇನೆ’ ಎಂದರು.

No comments:
Post a Comment