ಸಾಮೂಹಿಕ ಪ್ರಾರ್ಥನೆಗಳನ್ನು ಮಾಡುವಾಗ ಪ್ರತಿಯೊಂದು ಪ್ರಾರ್ಥನೆಯ...

ಸಾಮೂಹಿಕ ಪ್ರಾರ್ಥನೆಗಳನ್ನು ಮಾಡುವಾಗ ಪ್ರತಿಯೊಂದು ಪ್ರಾರ್ಥನೆಯ ಮೊದಲು ಶ್ರೀಕೃಷ್ಣನಲ್ಲಿ ಪ್ರಾರ್ಥಿಸಬೇಕು!

ನಾವು ಸಾಮೂಹಿಕ ಪ್ರಾರ್ಥನೆಗಳನ್ನು ಮಾಡುವಾಗ ಪ್ರತಿಯೊಂದು ಪ್ರಾರ್ಥನೆಯ ಮೊದಲು ‘ಹೇ ಶ್ರೀಕೃಷ್ಣಾ’ ಎಂದು ಹೇಳಿ ಪ್ರಾರ್ಥನೆಯನ್ನು ಮಾಡಬಹುದು. ಉದಾ. ‘ಹೇ ಶ್ರೀಕೃಷ್ಣಾ, ನಮ್ಮ ಸುತ್ತಲೂ ಬಂದಿರುವ ಕಪ್ಪು ಶಕ್ತಿಗಳ ಆವರಣವು ದೂರವಾಗಲಿ. ಹೇ ಶ್ರೀಕೃಷ್ಣಾ, ನಮ್ಮಲ್ಲಿ ಈಶ್ವರ ಪ್ರಾಪ್ತಿಯ ತಳಮಳವು ಹೆಚ್ಚಾಗಲಿ, ಹೇ ಶ್ರೀಕೃಷ್ಣಾ, ನನ್ನಲ್ಲಿ ನಿನ್ನ ಬಗ್ಗೆ ಸತತವಾಗಿ ಕೃತಜ್ಞತಾ ಭಾವವು ಜಾಗೃತವಾಗಿರಲಿ...’ ಇತ್ಯಾದಿ.ರಾಮನಾಥಿ ಆಶ್ರಮದಲ್ಲಿನ ಅಡುಗೆ ವಿಭಾಗದಂತೆಯೇ ಗ್ರಂಥ ವಿಭಾಗದಲ್ಲಿ ಈ ಪದ್ಧತಿಯಂತೆ ಪ್ರಾರ್ಥನೆಯನ್ನು ಆರಂಭಿಸಿದಾಗ ಪ್ರಾರ್ಥನೆಯಲ್ಲಿನ ಆರ್ತತೆ ಹೆಚ್ಚಾಗಿರುವುದರ ಅರಿವಾಯಿತು. ನಾವು ಕೃಷ್ಣನೊಂದಿಗೆ ಅನುಸಂಧಾನವಿಟ್ಟುಕೊಳ್ಳುತ್ತೇವೆ ಎಂಬುದರ ಅರಿವು ಹೆಚ್ಚಾಗತೊಡಗಿತು. ಭಾವವು ಬಹಳ ಕಾಲ ಉಳಿಯತೊಡಗಿತು. ಇದರಿಂದ ವೈಯಕ್ತಿಕ ಸ್ತರದಲ್ಲಿ ಪ್ರಾರ್ಥನೆಯನ್ನು ಮಾಡುವಾಗಲೂ ಲಾಭವಾಗತೊಡಗಿತು. - ಕು.ಯುವರಾಜ್ಞಿ ಶಿಂದೆ, ಸನಾತನ ಆಶ್ರಮ, ರಾಮನಾಥಿ.

No comments:

Post a Comment