ಹಿಂದೂಗಳೇ, ದೇವತೆಗಳ ವಿಡಂಬನೆ ತಡೆಗಟ್ಟಿ!

 ಇತ್ತೀಚೆಗೆ ವಿವಿಧ ರೀತಿಯಲ್ಲಿ ದೇವತೆಗಳ ವಿಡಂಬನೆಯನ್ನು ಮಾಡಲಾಗುತ್ತಿದೆ. ಉದಾ.ಚಲನಚಿತ್ರಗಳ ಮೂಲಕ ದೇವತೆಗಳನ್ನು ಅಪಹಾಸ್ಯ ಮಾಡುವುದು, ಕಲಾ ಸ್ವಾತಂತ್ರ್ಯದ ಹೆಸರಿನಡಿಯಲ್ಲಿ ದೇವತೆಗಳ ನಗ್ನ ಚಿತ್ರವನ್ನು ಬಿಡಿಸುವುದು, ವ್ಯಾಖ್ಯಾನ, ಪುಸ್ತಕ ಇತ್ಯಾದಿಗಳ ಮಾಧ್ಯಮಗಳಿಂದ ದೇವತೆಗಳನ್ನು ಟೀಕಿಸುವುದು ಇತ್ಯಾದಿ. ವ್ಯಾಪಾರೀ ಉದ್ದೇಶಕ್ಕಾಗಿ ಜಾಹೀರಾತುಗಳಿಗಾಗಿ ದೇವತೆಗಳನ್ನು ಮಾಡೆಲ್ (ರೂಪದರ್ಶಿ) ಎಂದು ಉಪಯೋಗಿಸಲಾಗುತ್ತಿದೆ ಮತ್ತು ಉತ್ಪಾದನೆಗಳ ಮೇಲೆ ದೇವತೆಗಳ ಚಿತ್ರವನ್ನು ಮುದ್ರಿಸಲಾಗುತ್ತಿದೆ.

ದೇವತೆಗಳ ಅವಮಾನವನ್ನು ತಡೆ ಗಟ್ಟುವುದು ಸಮಷ್ಟಿ ಸ್ತರದ ಉಪಾಸನೆಯಾಗಿದೆ: ದೇವತೆಗಳ ಉಪಾಸನೆಯ ಹಿಂದೆ ಶ್ರದ್ಧೆಯಿರುತ್ತದೆ. ದೇವತೆಗಳನ್ನು ಮೇಲಿನಂತೆ ಅವಮಾನಿಸುವುದರಿಂದ ಶ್ರದ್ಧೆಯ ಮೇಲೆ ಪರಿಣಾಮವಾಗುತ್ತದೆ, ಹಾಗಾಗಿ ಇದು ಧರ್ಮಹಾನಿಯಾಗಿದೆ. ಧರ್ಮಹಾನಿಯನ್ನು ತಡೆಗಟ್ಟುವುದು ಕಾಲಾನುಸಾರ ಅವಶ್ಯಕ ಧರ್ಮಪಾಲನೆಯೇ ಆಗಿದೆ. ಅದು ದೇವತೆಗಳ ಸಮಷ್ಟಿಸ್ತರದ ಉಪಾಸನೆಯಾಗಿದೆ. ಆಗ ಮಾತ್ರ ದೇವತೆಗಳ ಉಪಾಸನೆಯು ಪೂರ್ಣವಾಗುತ್ತದೆ. ಹಾಗಾಗಿ ಶಿವಭಕ್ತರು ಈ ವಿಷಯದಲ್ಲಿ ಜಾಗರೂಕರಾಗಿದ್ದು ಧರ್ಮಹಾನಿಯನ್ನು ತಡೆಗಟ್ಟಬೇಕು. ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಗಳು ಈ ಬಗ್ಗೆ ಕಾನೂನುಮಾರ್ಗದಲ್ಲಿ ವಿರೋಧಿಸುತ್ತದೆ.

No comments:

Post a Comment