ಶಿವಮಂದಿರ


ಶಿವಮಂದಿರದ ವೈಶಿಷ್ಟ್ಯಗಳು

ಅ.ಶಿವನು ಜೋಡಿಯ ದೇವರು, ‘ಶಕ್ತ್ಯಾಸಹಿತಃ ಶಂಭುಃ’ ಹೀಗಿದೆ. ಶಕ್ತಿಯಿಲ್ಲದಿದ್ದರೆ, ಶಿವನು ಶವನಾಗುತ್ತಾನೆ. ಇತರ ದೇವರು ಒಬ್ಬರೇ ಇರುವುದರಿಂದ ಅವರ ಮೂರ್ತಿಗಳಲ್ಲಿ ಶಕ್ತಿಯು ಕಡಿಮೆ ಪ್ರಮಾಣದಲ್ಲಿ ನಿರ್ಮಾಣವಾಗುತ್ತದೆ, ಆದುದರಿಂದ ಅವರ ದೇವಸ್ಥಾನಗಳಲ್ಲಿ ಶೀತಲತೆಯ ಅರಿವಾಗುತ್ತದೆ. ಶಿವ ಮಂದಿರಗಳಲ್ಲಿ ಶಕ್ತಿಯು ಹೆಚ್ಚು ಪ್ರಮಾಣದಲ್ಲಿ ನಿರ್ಮಾಣವಾಗುವುದರಿಂದ ಉಷ್ಣತೆಯ ಅರಿವಾಗುತ್ತದೆ.
ಆ.ಶ್ರೀವಿಷ್ಣುವಿನ ದೇವಸ್ಥಾನದಲ್ಲಿ ಮಾಡುವ ಹಾಗೆ ಶಿವಾಲಯದಲ್ಲಿ ಇತರ ದೇವತೆಗಳ ಪ್ರತಿಷ್ಠಾಪನೆಯನ್ನು ಮಾಡುವುದಿಲ್ಲ: ಶಿವನು ಲಯದ ದೇವತೆಯಾಗಿದ್ದಾನೆ. ಶಿವನು ಲಯದ ದೇವತೆಯಾಗಿರುವುದರಿಂದ ಇತರ ದೇವತೆಗಳ ಅವಶ್ಯಕತೆಯಿರುವುದಿಲ್ಲ. ಆದುದರಿಂದ ಶಿವನ ದೇವಸ್ಥಾನದಲ್ಲಿ ಇತರ ದೇವತೆಗಳಿರುವುದಿಲ್ಲ. ಇದಕ್ಕೆ ವಿರುದ್ಧವಾಗಿ ಶ್ರೀವಿಷ್ಣುವು ಸ್ಥಿತಿಯ ದೇವನಾಗಿರುವುದರಿಂದ ಸ್ಥಿತಿಗೆ ಸಂಬಂಧಿಸಿದ ಕಾರ್ಯಕ್ಕಾಗಿ ಶ್ರೀವಿಷ್ಣುವಿನ ದೇವಸ್ಥಾನದಲ್ಲಿ ಇತರ ದೇವತೆಗಳೂ ಇರುತ್ತಾರೆ. ಹೀಗಿದ್ದರೂ ಕೆಲವು ಕಡೆಗಳಲ್ಲಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯು ಭಕ್ತರಿಗೆ ಒಂದೇ ಸಮಯದಲ್ಲಿ ವಿವಿಧ ದೇವತೆಗಳ ದರ್ಶನದ ಲಾಭವು ಸಿಗಬೇಕೆಂದು ಅಥವಾ ಇತರ ಕಾರಣಗಳಿಗಾಗಿ ಶಿವನ ಜೊತೆಗೆ ಇತರ ದೇವತೆಗಳ ಸ್ಥಾಪನೆಯನ್ನೂ ಮಾಡಿರುವುದು ಕಂಡುಬರುತ್ತದೆ.
ಇ.ಗುರವ (ಶೈವ ಸಂನ್ಯಾಸಿ): ಶಿವನ ಪೂಜೆಯನ್ನು ಬ್ರಾಹ್ಮಣನು ಕದಲಿಸಬಾರದು, ಅಂದರೆ ಬ್ರಾಹ್ಮಣನು ನಿರ್ಮಾಲ್ಯವನ್ನು ತೆಗೆಯಬಾರದು. ಆದುದರಿಂದ ಶಿವನ ದೇವಸ್ಥಾನದಲ್ಲಿ ಗುರವರು ಇರುತ್ತಾರೆ ಮತ್ತು ಪಾರ್ವತಿಯ ದೇವಸ್ಥಾನದಲ್ಲಿ ಸೇವಕರಿರುತ್ತಾರೆ. ಪೂಜೆ, ವಿವಾಹ ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು ಮಾಡುವ ಬ್ರಾಹ್ಮಣರು ಹೇಗೆ ಪಿಂಡದಾನದ ಸಮಯದಲ್ಲಿ ಭೋಜನವನ್ನು ಮಾಡುವುದಿಲ್ಲವೋ ಹಾಗೆಯೇ ಶಿವಲಿಂಗದ ಮೇಲಿನ ನಿರ್ಮಾಲ್ಯವನ್ನು ತೆಗೆಯುವುದಿಲ್ಲ.
ಈ.ಬ್ರಾಹ್ಮಣರು ಶಿವಲಿಂಗಕ್ಕೆ ವೈದಿಕ ಮಂತ್ರಗಳಿಂದ ಅಭಿಷೇಕ ಮಾಡುತ್ತಾರೆ; ಆದರೆ ನೈವೇದ್ಯವನ್ನು ಮಾತ್ರ ಸ್ವೀಕರಿಸುವುದಿಲ್ಲ. ಪೂಜೆ ಮಾಡುವ ಬ್ರಾಹ್ಮಣರು ಪಿಂಡದಾನ ವಿಧಿಯನ್ನೂ ಮಾಡುವುದಿಲ್ಲ.
ಉ.ವರ್ಷದಲ್ಲಿ ಕಡಿಮೆಪಕ್ಷ ಒಮ್ಮೆಯಾದರೂ ಶಿವಲಿಂಗದ ಮೇಲೆ ಸೂರ್ಯ ಕಿರಣಗಳು ಬೀಳುವ ಹಾಗೆ ಶಿವಮಂದಿರವನ್ನು ರಚಿಸಲಾಗುತ್ತದೆ.

No comments:

Post a Comment