ಪೂಜ್ಯ ರಾಜೇಂದ್ರ ದಾದಾರವರು ಮಾಡಿದ ಮಾರ್ಗದರ್ಶನದ ಅಂಶಗಳು...

ಪೂಜ್ಯ ರಾಜೇಂದ್ರ ದಾದಾರವರು ಮಾಡಿದ 
ಮಾರ್ಗದರ್ಶನದ ಅಂಶಗಳುಹಾಗೂ ಅವರಿಂದ ಕಲಿಯಲು ಸಿಕ್ಕಿದ ಅಂಶಗಳು!

ಸನಾತನದ ಸಂತರಾದ ಪೂಜ್ಯ ರಾಜೇಂದ್ರ ದಾದಾರವರು ಧಾರವಾಡದಲ್ಲಿ ಮಾರ್ಗದರ್ಶನ ಮಾಡಿದರು. ಈ ಸಮಯದಲ್ಲಿ ಅವರು ಮಾಡಿದ ಮಾರ್ಗದರ್ಶನ ಹಾಗೂ ಸಾಧಕಿಯಾದ ಸೌ.ರೋಹಿಣಿ ದೇಶಪಾಂಡೆ ಇವರಿಗೆ ಅದರಿಂದ ಕಲಿಯಲು ಸಿಕ್ಕಿದ ಅಂಶಗಳು ಮತ್ತು ಅದರಿಂದ ಅವರಲ್ಲಾದ ಬದಲಾವಣೆಯನ್ನು ಇಲ್ಲಿ ನೀಡುತ್ತಿದ್ದೇವೆ.

೧.ಪೂಜ್ಯ ದಾದಾರವರ ಮಾರ್ಗದರ್ಶನ
ಅ.ಮೊದಲು ನಮ್ಮ ಜೀವನದ ಧ್ಯೇಯ ದೃಢವಾಗಬೇಕು. ದೊಡ್ಡ ಧ್ಯೇಯಕ್ಕೆ ಚಿಕ್ಕ ಚಿಕ್ಕ ಧ್ಯೇಯಗಳನ್ನಿಟ್ಟುಕೊಂಡು ಪ್ರಯತ್ನಿಸಬೇಕು. ಪ್ರತಿಯೊಂದಕ್ಕೆ ಸಮಯ ಮಿತಿ ಹಾಕಿಕೊಳ್ಳಬೇಕು.
ಆ.ನಮ್ಮ ಸಮಯ ಸ್ವಲ್ಪವೂ ವ್ಯರ್ಥವಾಗಬಾರದು.
ಇ.ತಪ್ಪನ್ನು ಒಪ್ಪಿಕೊಂಡು ಪ್ರಾಯಶ್ಚಿತ್ತ ತೆಗೆದುಕೊಳ್ಳಲೇ ಬೇಕು.
ಈ. ಪ್ರೇಮಭಾವಕ್ಕಾಗಿ ಪ್ರಯತ್ನಿಸುವುದರಿಂದ ಅನೇಕ ದೋಷಗಳು ಕಡಿಮೆ ಯಾಗುತ್ತವೆ.
ಉ.ಸ್ವಭಾವದೋಷ, ಅಹಂ ಪಟ್ಟಿಗಳನ್ನು ತಪ್ಪಾದ ತಕ್ಷಣ ಬರೆಯಬೇಕು. ರಾತ್ರಿ ಬರೆಯುವುದರಿಂದ ಆವರಣ ಮತ್ತು ಒತ್ತಡ ಹೆಚ್ಚಾಗುತ್ತದೆ.
ಊ.ನನ್ನ ಸಾಧನೆ ನನ್ನನ್ನೇ ಅವಲಂಬಿಸಿದೆ.
ಋ.ಅಹಂ ನಿರ್ಮೂಲನೆಗೆ ಪ್ರಯತ್ನ ಮಾಡುವಾಗ ಅದಕ್ಕೆ ಪ್ರಾರ್ಥನೆಯನ್ನು ಜೋಡಿಸಬೇಕು.
ಎ.ಮಹತ್ವದ ವಿಷಯಗಳನ್ನು ಬರೆದಿಟ್ಟು ಕೊಳ್ಳುವುದು.
ಏ.ಅಪೇಕ್ಷೆ ಕಡಿಮೆಗೊಳಿಸಲು ಇತರರ ಮಾತನ್ನು ಕೇಳಿ ಅದರಂತೆ ನಡೆದು ಕೊಳ್ಳಬೇಕು.
ಪೂಜ್ಯ ರಾಜೇಂದ್ರ ದಾದಾರವರು ಮಾಡಿದ ಮಾರ್ಗದರ್ಶನದ ಅಂಶಗಳು
೧.ಪೂಜ್ಯ ದಾದಾರವರು ಮಾರ್ಗದರ್ಶನ ಮಾಡುವಾಗ ಅವರ ಮಾತಿನಲ್ಲಿ ಎಲ್ಲ ಸಾಧಕರ ಉನ್ನತಿಯಾಗಬೇಕೆಂಬ ತೀವ್ರ ತಳಮಳ ವ್ಯಕ್ತವಾಗುತ್ತಿತ್ತು.
೨.ಪೂಜ್ಯ ದಾದಾರವರು, ನಾವು ಎಷ್ಟೋ ವರ್ಷಗಳಿಂದ ಸಾಧನೆಯಲ್ಲಿದ್ದರೂ ಆಚರಣೆಯಲ್ಲಿ ತರದೇ ಇದ್ದ ವಿಷಯಗಳನ್ನು ಚಿಕ್ಕ ಮಕ್ಕಳಿಗೆ ಹೇಳುವಂತೆ ಹೇಳಿದರು.
ಪೂಜ್ಯ ರಾಜೇಂದ್ರ ದಾದಾ ಹೇಳಿದಂತೆ ಪ್ರಯತ್ನಿಸಿದ್ದರಿಂದಾದ ಲಾಭಗಳು
ಅ.ಮೊದಲು ರಾತ್ರಿ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನದ ಪಟ್ಟಿಯನ್ನು ಬರೆಯುವಾಗ ನಿದ್ದೆ ಬರುತ್ತಿದ್ದು ಒತ್ತಡವಾಗುತ್ತಿತ್ತು. ಹೇಗಾದರೂ ಮುಗಿಸಬೇಕೆನ್ನುವ ವಿಚಾರದಿಂದ ಪಟ್ಟಿಯನ್ನು ಪದ್ಧತಿಗನುಸಾರ ಸೂಚನೆ ಹಾಗೂ ಎಲ್ಲ ಕೋಷ್ಠಕ ಗಳನ್ನು ತುಂಬಿಸುತ್ತಿರಲಿಲ್ಲ. ಈಗ ಸ್ವಭಾವ ದೋಷ ಹಾಗೂ ಇತರ ಪಟ್ಟಿಗಳನ್ನು ಆಗಾಗ ಬರೆಯುವುದರಿಂದ ಒತ್ತಡ ಕಡಿಮೆಯಾಗಿದೆ ಹಾಗೂ ತಪ್ಪಿನ ಕಡೆಗೆ ಗಮನ ಹೆಚ್ಚಾಗಿದೆ. ಮಹತ್ವದ ವಾಕ್ಯಗಳನ್ನು ಬರೆದಿಟ್ಟು ಕೊಳ್ಳುವುದರಿಂದ ಹೇಳಿದ ವಿಷಯಗಳು ನೆನಪಾಗುತ್ತವೆ.
ಆ.ನಾವು ಯಾವಾಗಲೂ ನಮ್ಮ ಸಾಧನೆಗೆ ಇತರರನ್ನು ಅಥವಾ ಪರಿಸ್ಥಿತಿಯನ್ನು ದೂಷಿಸುತ್ತೇವೆ. ನನ್ನ ಸಾಧನೆ ನನ್ನನ್ನು ಅವಲಂಬಿಸಿರುತ್ತದೆ ಎನ್ನುವುದು ಬಹಳ ಮಹತ್ವದ್ದಾಗಿದೆ. ಪರೇಚ್ಛೆಯಿಂದ ನಡೆದು ಕೊಳ್ಳುವಲ್ಲಿ, ಮೊದಲು ನನಗೆ ಇವರಿಗಾಗಿ ಏಕೆ ಪರೇಚ್ಛೆಯಿಂದ ವರ್ತಿಸಲಿ, ಅವರು ನನಗೆ ಎಷ್ಟು ತೊಂದರೆ ಕೊಟ್ಟಿದ್ದಾರೆ ಎಂದೆನಿಸುತ್ತಿತ್ತು. ಪೂಜ್ಯ ರಾಜೇಂದ್ರದಾದಾ ರವರು ಹೇಳಿದ ನಂತರ ಆ ರೀತಿ ಅನಿಸದೆ ಈ ಪ್ರಸಂಗದಲ್ಲಿ ಪರೇಚ್ಛೆಯಾಯಿತೆಂದು ಸಮಾಧಾನವಾಗುತ್ತದೆ.
ಇ.ಅಹಂ ನಿರ್ಮೂಲನೆಗಾಗಿ ಪ್ರಾರ್ಥನೆ ಮಾಡುವುದರಿಂದ ಅದೇ ಪ್ರಸಂಗ ಘಟಿಸಿದಾಗ ಅದರ ತೀವ್ರತೆ ಕಡಿಮೆಯಾಗುತ್ತಿದೆ. ಅವರ ಕೃಪೆಗೆ ಅರ್ಹರಾಗುವ ಯೋಗ್ಯತೆ ಯಿಲ್ಲದಿದ್ದರೂ ನಮ್ಮ ಮೇಲೆ ಅಪರಿಮಿತ ಪ್ರೀತಿಯಿಂದ ಕೃಪಾಧಾರೆಯನ್ನು ಸುರಿಸುತ್ತಿರುವ ಗುರುಗಳಿಗೆ ಕೃತಜ್ಞತೆಯನ್ನು ಹೇಗೆ ಸಲ್ಲಿಸಲಿ ಎಂದು ತಿಳಿಯುತ್ತಿಲ್ಲ. ಅವರ ಕೃಪೆಗೆ ಪಾತ್ರರಾಗಿ ಅವರ ಋಣವನ್ನು ತೀರಿಸುವ ಯೋಗ್ಯತೆ ನೀಡಿದ್ದಕ್ಕಾಗಿ ಶ್ರೀಕೃಷ್ಣನ ಚರಣಗಳಲ್ಲಿ ಕೃತಜ್ಞತೆಗಳು.
-ಸೌ.ರೋಹಿಣಿ ದೇಶಪಾಂಡೆ, ಧಾರವಾಡ.

No comments:

Post a Comment