೧೨ ವರ್ಷಗಳಿಂದ ಅಸಹನೀಯ ರೋಗದಿಂದ ಬಳಲುತ್ತಿದ್ದರೂ ತಳಮಳದಿಂದ ಸಾಧನೆಯನ್ನು ಮಾಡಿ ಶೇ.೬೦ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ಬೆಳಗಾವಿಯ ಸೌ.ಮಾಧವಿ ಘಾಟೆ !ಚರ್ಮದ ಅಸಾಧ್ಯವಾದ ರೋಗದಿಂದ ಸೌ. ಘಾಟೆಕಾಕೂರವರ ತುಂಡರಿಸಲಾದ ಕೈ ಹಾಗೂ ಕಾಲುಗಳ ಬೆರಳುಗಳು ಮೇಲಿನ ಛಾಯಾಚಿತ್ರದಲ್ಲಿ ಕಂಡುಬರುತ್ತಿದೆ.
ಸಾಧಕರು ಸಾಧನೆಯನ್ನು ಮಾಡುತ್ತಿರುವುದರಿಂದ ಅವರಿಗೆ ತಮ್ಮ ಪ್ರಾರಬ್ಧಕ್ಕನುಸಾರ ಜೀವನದಲ್ಲಿ ಬರುವ ಯಾವುದೇ ಸಮಸ್ಯೆಗಳನ್ನು ಧೈರ್ಯದಿಂದ ಹಾಗೂ ಸ್ಥಿರವಾಗಿ ಎದುರಿಸಲು ಸಾಧ್ಯವಾಗುತ್ತದೆ. ಆ ಸಮಸ್ಯೆಗಳು ಶಾರೀರಿಕ, ಮಾನಸಿಕ, ವ್ಯಾವಹಾರಿಕ ಅಥವಾ ಆಧ್ಯಾತ್ಮಿಕವಿರಬಹುದು. ಅವರಿಗೆ ಕಠಿಣ ಪ್ರಸಂಗಳನ್ನು ಎದುರಿಸಲು ಆಧ್ಯಾತ್ಮಿಕ ಬಲವು ದೊರೆಯುತ್ತದೆ ಹಾಗೂ ಇವುಗಳೊಂದಿಗೆ ಅವರಿಗೆ ಒಳ್ಳೆಯ ಅನುಭೂತಿಗಳೂ ಬರುತ್ತವೆ. ಒಂದು ಕಠಿಣ ಪ್ರಸಂಗದಲ್ಲಿ ಸತ್ತ್ವಪರೀಕ್ಷೆ ಆಗುತ್ತದೆ. ಆ ಪರೀಕ್ಷೆಯಲ್ಲಿ ಸಾಧಕರು ಯಶಸ್ವಿಯಾಗುತ್ತಾರೆ ಹಾಗೂ ಅವರ ಆಧ್ಯಾತ್ಮಿಕ ಉನ್ನತಿಯೂ ಆಗುತ್ತದೆ. ಏಕೆಂದರೆ ಸಾಧಕರಿಗೆ ಮನೋಲಯ ಹಾಗೂ ಬುದ್ಧಿ ಲಯ ಮಾಡಿಕೊಳ್ಳುವ ಪಾಠ ದೊರೆತಿರುತ್ತದೆ. ಅವರಿಗೆ ಪ್ರಾರ್ಥನೆ ಹಾಗೂ ಶರಣಾಗತ ಭಾವದ ಮಹತ್ವವು ತಿಳಿದಿರುತ್ತದೆ ಹಾಗೂ ಮುಖ್ಯವಾಗಿ ಅವರಲ್ಲಿ ಈಶ್ವರನ ಮೇಲೆ ದೃಢವಾದ ಶ್ರದ್ಧೆಯು ನಿರ್ಮಾಣವಾಗಿರುತ್ತದೆ. ಆದುದರಿಂದ ಈಶ್ವರನು ಇಂತಹ ಭಕ್ತರ ಪಾರಲೌಕಿಕ ಕಲ್ಯಾಣ ಮಾಡುತ್ತಾನೆ. ಸನಾತನವು ಇದರ ಅನೇಕ ಉದಾಹರಣೆಗಳನ್ನು ತೋರಿಸಿಕೊಟ್ಟಿದೆ. ಇಂತಹದ್ದೇ ಒಂದು ಉದಾಹರಣೆಯೆಂದರೆ ಬೆಳಗಾವಿಯ ಸಾಧಕಿ ಸೌ.ಮಾಧವಿ ಘಾಟೆ. ಸೌ.ಘಾಟೆಕಾಕೂರವರಿಗೆ ಕಳೆದ ೧೨ವರ್ಷಗಳಿಂದ ಒಂದು ಅಸಹನೀಯ ಚರ್ಮರೋಗವಾಗಿದೆ. ಇದರಿಂದಾಗಿ ಕೈ ಹಾಗೂ ಕಾಲುಗಳ ಬೆರಳುಗಳಿಗೆ ಗಾಯವಾಗಿ ಹಾಗೂ ಈ ಗಾಯಗಳು ಎಲುಬಿನ ವರೆಗೆ ತಲುಪಿರುವುದರಿಂದ ಆ ಎಲುಬುಗಳು ಸವೆಯುತ್ತಿವೆ. ಇದರಿಂದಾಗಿ ಅವರಿಗೆ ತೀವ್ರ ವೇದನೆಯಾಗುತ್ತಿದೆ. ಹೀಗಿದ್ದರೂ ಅವರು ಸಾಧನೆ ಹಾಗೂ ಸತ್ಸೇವೆ ಮಾಡುವುದನ್ನು ಬಿಡಲಿಲ್ಲ. ಇದರಿಂದಾಗಿ ಅವರ ಆಧ್ಯಾತ್ಮಿಕ ಪ್ರಗತಿಯಾಗುತ್ತಿದೆ ಹಾಗೂ ಅವರು ಶೇ.೬೦ ರ ಮಟ್ಟವನ್ನು ತಲುಪಿದ್ದಾರೆ.
೧. ತೀವ್ರ ವೇದನೆಗಳಾಗುತ್ತಿದ್ದರೂ ಸೌ.ಘಾಟೆಕಾಕೂರವರ ಮನಸ್ಥಿತಿ ಹಾಗೂ ಅವರ ಭಾವವನ್ನು ದರ್ಶಿಸುವ ಕೆಲವು ಪ್ರಸಂಗಗಳು೧ಅ.ಕೈಬೆರಳುಗಳಿಗೆ ‘ಗ್ಯಾಂಗರೀನ್’ ಆಗಿರುವುದು ಪ.ಪೂ.ಡಾಕ್ಟರರ ಕೃಪೆಯಿಂದ ತಿಳಿದಿದ್ದರಿಂದ ಶಸ್ತ್ರಚಿಕಿತ್ಸೆಯು ನಡೆದು ಮುಂದಿನ ಅಪಾಯವು ತಪ್ಪುವುದು: ಭಾದ್ರಪದ ಶು. ಸಪ್ತಮಿಯಂದು (ಸೆಪ್ಟೆಂಬರ್ ೨೦೧೦) ನನ್ನ ಅತ್ತೆಯ ಮೊದಲನೇ ಶ್ರಾದ್ಧವಿತ್ತು. ಅಲ್ಲಿ ಅಪರೂಪಕ್ಕೆ ಭೇಟಿಯಾಗುವ ನನ್ನ ಮೈದುನ ಬಂದಿದ್ದರು. ಅವರು ‘ನಮ್ಮ ಸಾಂಗ್ಲಿಯಲ್ಲಿ ಓರ್ವ ವಯೋವೃದ್ಧ ವೈದ್ಯರಿದ್ದಾರೆ, ಅವರಿಗೆ ಒಮ್ಮೆ ತೋರಿಸಿ, ಅವರು ಸಲಹೆಯನ್ನು ನೀಡುವರು’ ಎಂದು ಹೇಳಿದರು. ಆಗ ನನ್ನ ಯಜಮಾನರು ತಕ್ಷಣ ತಯಾರಾದರು. ನಾವು ಬುಧವಾರದಂದು ಸಾಂಗ್ಲಿಗೆ ಹೋದೆವು. ಅಲ್ಲಿನ ವೈದ್ಯರಾದ ಆಪ್ಟೆಯವರು ‘ಎಡಗೈಯ ತೋರುಬೆರಳಿನ ಒಂದೂವರೆ ಗಂಟನ್ನು ಕೂಡಲೇ ಕತ್ತರಿಸಬೇಕು. ‘ಗ್ಯಾಂಗ್ರೀನ್’ ಆಗಿದೆ’ ಎಂದು ಹೇಳಿದರು. ನಾವು ತಕ್ಷಣ ಬೆಳಗಾವಿಗೆ ಬಂದೆವು. ಗುರುವಾರದಂದು ಎಲ್ಲ ತಪಾಸಣೆಗಳನ್ನು ಮಾಡಿ ಶಸ್ತ್ರಕ್ರಿಯೆಯನ್ನು ಮಾಡಿದರು. ಪುನಃ ಪ.ಪೂ.ಡಾಕ್ಟರರ ಚರಣಗಳಲ್ಲಿ ಕೃತಜ್ಞತೆ ವ್ಯಕ್ತವಾಯಿತು. ಅವರ ಕೃಪೆಯಿಂದಲೇ ‘ಗ್ಯಾಂಗ್ರೀನ್’ ಆಗಿರುವುದರ ಬಗ್ಗೆ ತಿಳಿಯಿತು. ನಂತರ ಶಸ್ತ್ರಚಿಕಿತ್ಸೆ ಆಗಿ ಮುಂದಿನ ಅಪಾಯವು ತಪ್ಪಿತು, ಇಲ್ಲದಿದ್ದರೆ ನಾನು ಅದರ ಕಡೆಗೆ ಗಮನ ಹರಿಸುತ್ತಿರಲಿಲ್ಲ.
೧ಆ.‘ಗುರುರಾಯಾ, ನಿಮಗೆ ನನ್ನ ಕಡೆಗೆ ಗಮನವಿದೆಯಲ್ಲವೇ, ಬಹಳ ಕಷ್ಟವಾಗುತ್ತಿದೆ’ ಎಂದು ಮನಸ್ಸಿನಲ್ಲಿ ಹೇಳುವಾಗ ಎದುರಿನಲ್ಲಿ ಓರ್ವ ಸಾಧಕರು ಕಾಣಿಸುವುದು, ಆಗ ಪ.ಪೂ. ಡಾಕ್ಟರರೇ ಆ ಸಾಧಕನ ಮಾಧ್ಯಮದಿಂದ ಭೇಟಿಯಾಗಲು ಬಂದಿರುವುದರ ಅರಿವಾಗಿ ಭಾವಾಶ್ರು ಬರುವುದು : ೧೬.೯.೨೦೧೦ ರಂದು ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಹಾಗೂ ಮಧ್ಯಾಹ್ನ ೨ ಗಂಟೆಗೆ ಆ ಬೆರಳನ್ನು ಕತ್ತರಿಸಿದರು. ಸಂಜೆ ನಾನು ಕಣ್ಣು ಮುಚ್ಚಿ ಪ.ಪೂ.ಡಾಕ್ಟರರಿಗೆ ಪ್ರಾರ್ಥನೆಯನ್ನು ಮಾಡುತ್ತಿದ್ದೆನು. ‘ಗುರುರಾಯಾ, ನಿಮಗೆ ನನ್ನ ಕಡೆಗೆ ಗಮನವಿದೆಯಲ್ಲವೇ, ನನಗೆ ಬಹಳ ಕಷ್ಟವಾಗುತ್ತಿದೆ’ ಎಂದು ಹೇಳಿ ಕಣ್ಣು ತೆರೆಯುವಷ್ಟರಲ್ಲಿ ಅಲ್ಲಿ ಶ್ರೀ.ಪರಶುರಾಮ ಗೋರಲರವರು ನಿಂತಿದ್ದರು. ಆಗ ನನ್ನ ಕಣ್ಣುಗಳಿಂದ ಭಾವಾಶ್ರು ಬಂದಿತು. ಗುರುದೇವಾ ನೀವು ಇವರ ಮಾಧ್ಯಮದಿಂದ ಭೇಟಿಯಾಗಲು ಬಂದಿದ್ದೀರಿ ಎಂದು ಭಾವಪೂರ್ಣ ಕೃತಜ್ಞತೆ ವ್ಯಕ್ತವಾಯಿತು.
೧೯.೯.೨೦೧೦ರಂದು ನನ್ನನ್ನು ಪುನಃ ಡ್ರೆಸಿಂಗ್ ಮಾಡಲು ಕರೆದೊಯ್ದರು. ಆಗ ಡ್ರೆಸಿಂಗ್ ಮಾಡುವವನು ಗಾಯವನ್ನು ಎಷ್ಟು ಜೋರಾಗಿ ಒರೆಸುತ್ತಿದ್ದನೆಂದರೆ ನಾನು ಅಳುತ್ತಲೇ ಇದ್ದೆನು. ‘ಪ.ಪೂ.ಡಾಕ್ಟರರೇ, ಬಹಳ ನೋಯಿಸುತ್ತಿದೆ. ಶ್ರೀಕೃಷ್ಣಾ ಬಾ, ಬೇಗ ಬಾ’ ಎಂದು ಕೂಗುತ್ತಿದ್ದೆನು. ಆ ದಿನ ಶ್ರೀ.ಶಂಕರ ನರೂಟೆ, ಕು.ಸವಿತಾ ಜಾಧವ, ಶ್ರೀ.ಪರಶುರಾಮ ಗೋರಲರು ನನ್ನನ್ನು ಭೇಟಿಯಾಗಲೆಂದು ಮನೆಗೆ ಬಂದಿದ್ದರು. ಆಗ ನನಗೆ ‘ಪ.ಪೂ. ಡಾಕ್ಟರರೇ, ನೀವು ಹಾಗೂ ಕೃಷ್ಣ ನನ್ನನ್ನು ಭೇಟಿಯಾಗಲು ಬಂದಿದ್ದೀರಿ, ಗುರುರಾಯಾ ನಾನು ನಿಮ್ಮ ಚರಣಗಳಲ್ಲಿ ಬಹಳ ಕೃತಜ್ಞಳಾಗಿದ್ದೇನೆ’ ಎಂದು ಅನಿಸಿತು.
೧ಇ. ೨೭.೯.೨೦೧೦ರಂದು ಬೆಳಗ್ಗಿನಿಂದ ಶ್ರೀಕೃಷ್ಣನೊಂದಿಗೆ ಸಂಭಾಷಣೆಯನ್ನು ಮಾಡಲು ತೀವ್ರ ಪ್ರಯತ್ನವಾಗುತ್ತಿತ್ತು. ಆಗ ತನ್ನಿಂದತಾನಾಗಿಯೇ ಪ್ರಾರ್ಥನೆಗಳು ಹೊಳೆಯುತ್ತಿದ್ದವು ಹಾಗೂ ಶ್ರೀ ಕೃಷ್ಣನ ಚರಣಗಳಲ್ಲಿ ಅರ್ಪಣೆಯಾಗುತ್ತಿದ್ದವು.
೧ಈ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ‘ರಾತ್ರಿ ಅಷ್ಟು ಹೊತ್ತಿನವರೆಗೆ ಹೇಗೆ ಎಚ್ಚರವಿರುವುದು’ ಎಂಬುದರ ಚಿಂತೆಯಾಗುವುದು, ನಂತರ ಪ.ಪೂ. ಡಾಕ್ಟರರ ಕೃಪೆಯಿಂದ ಎಚ್ಚರವಿದ್ದು ನಾಮಜಪ ಹಾಗೂ ಆರತಿಯನ್ನು ಮಾಡಲು ಸಾಧ್ಯವಾಗುವುದು ಹಾಗೂ ರಾತ್ರಿ ಕನಸಿನಲ್ಲಿ ಪ.ಪೂ.ಡಾಕ್ಟರರು ಹಾಗೂ ಪ.ಪೂ ದೇಶಪಾಂಡೆಕಾಕಾರವರು ಬರುವುದು: ಶ್ರೀಕೃಷ್ಣ ಜನ್ಮಾಷ್ಟಮಿಯಂದು (೧೩.೮. ೨೦೧೦) ಮಧ್ಯಾಹ್ನ ನನಗೆ ಬೆಳಗಾವಿಯ ಸಾಧಕಿ ಸೌ.ಕಿರಣ ಬಂಗರವರು ದೂರವಾಣಿ ಕರೆ ಮಾಡಿ ‘ಕಾಕೂ, ಇಂದು ರಾತ್ರಿ ೧೧ರಿಂದ ೧೨ಗಂಟೆಯವರೆಗಿನ ಸಮಯದಲ್ಲಿ ಶ್ರೀ ಕೃಷ್ಣನ ನಾಮಜಪವನ್ನು ಮಾಡಲಿಕ್ಕಿದೆ ಹಾಗೂ ೧೨ಗಂಟೆಗೆ ಆರತಿಯನ್ನು ಮಾಡಲಿಕ್ಕಿದೆ. ನಿಮಗೆ ಸಾಧ್ಯವಾದಲ್ಲಿ ಶ್ರೀ.ಕಣಗಲೇಕರರವರ ಮನೆಗೆ ಬನ್ನಿ’ ಎಂದು ಹೇಳಿದರು. ಆಗ ‘ನಾನು ಮನೆಯಲ್ಲಿಯೇ ಮಾಡುತ್ತೇನೆ’ ಎಂದು ಹೇಳಿದೆನು. ನನಗೆ ‘ನಾನು ರಾತ್ರಿ ಎಚ್ಚರವಿದ್ದು ಆರತಿಯನ್ನು ಹೇಗೆ ಮಾಡುವುದು? ನನಗೆ ರಾತ್ರಿ ೧೦-೧೦.೩೦ ಗಂಟೆಯಾಗುತ್ತಲೇ ತಡೆಯಲಾರದಷ್ಟು ನಿದ್ದೆ ಬರುವುದರಿಂದ ಚಿಂತೆಯಾಗುತ್ತಿತ್ತು; ಆದರೆ ಪ.ಪೂ.ಡಾಕ್ಟರರ ಕೃಪೆಯಿಂದ ನನಗೆ ಎಚ್ಚರದಿಂದ ಇರಲು ಸಾಧ್ಯವಾಯಿತು. ರಾತ್ರಿ ೧೧.೩೦ಕ್ಕೆ ನೈವೇದ್ಯವೆಂದು ಮೊಸರು ಅವಲಕ್ಕಿಯನ್ನು ಮಾಡಿ ನಾಮಜಪ ಮಾಡುತ್ತ ಕುಳಿತೆನು. ೧೧.೫೫ ಗಂಟೆಗೆ ಗಡಿಯಾರವನ್ನು ನೋಡಿದೆನು ಹಾಗೂ ೫ ನಿಮಿಷದಲ್ಲಿ ಆರತಿಯನ್ನು ಮಾಡೋಣ ಎಂಬ ವಿಚಾರ ಮಾಡಿದೆನು; ಆದರೆ ಅಷ್ಟರಲ್ಲಿಯೇ ನನಗೆ ನಿದ್ದೆ ಬಂದಿತು ಹಾಗೂ ಒಮ್ಮೆಲೆ ಶೀತಕಪಾಟಿನ ಶಬ್ದ ಕೇಳಿಸಿತು. ನಾನು ಕಣ್ಣು ತೆರೆದಾಗ ೧೨.೦೧ ಆಗಿತ್ತು. ನಾನು ನೈವೇದ್ಯವನ್ನು ತೋರಿಸಿ ಆರತಿಯನ್ನು ಮಾಡಿದೆನು. ಪ್ರಸಾದ ತಿಂದು ಮಂಚದಲ್ಲಿ ಮಲಗಿದೆನು. ಶ್ರೀಕೃಷ್ಣನಿಗೆ ‘ವಾಸುದೇವಾ, ನನ್ನ ಸೇವೆ ತಲುಪಿತಲ್ಲವೇ? ಎಂದು ಕೇಳಿದೆನು. ಉತ್ತರ ಬರುವ ಮೊದಲೇ ನನಗೆ ನಿದ್ದೆ ಬಂದಿತ್ತು. ಕನಸಿನಲ್ಲಿ ಪ.ಪೂ.ಡಾಕ್ಟರರು ಚಿಕ್ಕ ತಟ್ಟೆಯನ್ನು ತಂದು ‘ನನಗೆ ಪ್ರಸಾದ ಕೊಡು’ ಎಂದು ಹೇಳಿದರು. ನಾನು ಅವರಿಗೆ ಸಕ್ಕರೆ ಹಾಗೂ ಮೊಸರು ಅವಲಕ್ಕಿಯ ಪ್ರಸಾದವನ್ನು ಕೊಟ್ಟೆನು. ನಂತರ ಪ.ಪೂ.ದೇಶಪಾಂಡೆ ಕಾಕಾ ಹಾಗೂ ಸೌ.ವಸುಧಕ್ಕ ನವರು ನಗುತ್ತ ಮನೆಯೊಳಗೆ ಬಂದರು. ನನಗೆ ತುಂಬ ಆನಂದವಾಯಿತು ಹಾಗೂ ನಾನು ಕಣ್ಣುತೆರೆದಾಗ ‘ಅರೆ ಇದೆಲ್ಲ ಕನಸು’ ಎಂಬ ಶಬ್ದವು ತನ್ನಷ್ಟಕ್ಕೆ ಹೊರಬಂದಿತು. ಪ.ಪೂ.ಡಾಕ್ಟರರ ಚರಣಗಳಲ್ಲಿ ಕೃತಜ್ಞತೆ ವ್ಯಕ್ತವಾಯಿತು. ಮಾರನೇ ದಿನ ರಾಮನಾಥಿ ಆಶ್ರಮದಲ್ಲಿ ಸೇವೆ ಮಾಡುತ್ತಿರುವ ನನ್ನ ಸಹೋದರನ ಮಗಳಾದ ಕು.ಅರುಂಧತಿ ಮಾಣಕೆಯು ಮನೆಗೆ ಬಂದಳು. ಅವಳು ನನ್ನ ಇಂದ್ರಿಯಗಳ ಸಭೆಯನ್ನು ಓದಿದಳು ಹಾಗೂ ಮೊದಲನೇ ದಿನ ಆಶ್ರಮದಲ್ಲಿ ನಡೆದ ಗೋಕುಲಾಷ್ಟಮಿಯ ರಾಸಲೀಲೆಯ ಬಗ್ಗೆ ಶಬ್ದಶಃ ಸವಿಸ್ತಾರವಾಗಿ ವರ್ಣಿಸಿದಳು. ಇದು ಪ.ಪೂ.ಡಾಕ್ಟರರು ನನಗೆ ಮನೆಯಲ್ಲಿ ಕುಳಿತಲ್ಲಿಯೇ ನೀಡಿದ ಗೋಕುಲಾಷ್ಟಮಿಯ ಅಪ್ರತಿಮ ಉಡುಗೊರೆಯಾಗಿತ್ತು. ಅದಕ್ಕಾಗಿ ನಾನು ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
೧ಉ.ಅಯೋಧ್ಯೆಯ ನಿರ್ಣಯ ಬಂದಾಗ ‘ಪ.ಪೂ.ದೇಶಪಾಂಡೆಬಾಬಾ ರವರು ಹೋಗಿ ಮಾಂತ್ರಿಕರೊಂದಿಗೆ ಯುದ್ಧ ಮಾಡಿದರು; ಆದುದರಿಂದಲೇ ಈಶ್ವರನು ಹಿಂದೂಗಳ ಪರವಾಗಿ ತೀರ್ಪನ್ನು ನೀಡಿದನು’ ಎಂದು ತೀವ್ರವಾಗಿ ಅನಿಸುವುದು : ೩೦.೯.೨೦೧೦ ರಂದು ಅಯೋಧ್ಯೆಯ ನಿರ್ಣಯ ಬಂದಾಗ ಸ್ವಯಂಪ್ರೇರಣೆಯಿಂದ ‘ಹಿಂದೂ ಧರ್ಮದ ವಿಜಯವಾಗಲಿ’ ಎಂಬ ಘೋಷಣೆಯಾಯಿತು. ಆಗ ಶ್ರೀಕೃಷ್ಣ, ಶ್ರೀ ರಾಮ ಹಾಗೂ ಪ.ಪೂ.ಡಾಕ್ಟರರ ಚರಣಗಳಲ್ಲಿ ಭಾವ ಪೂರ್ಣ ಹಾಗೂ ಶರಣಾಗತ ಭಾವದಿಂದ ಕೃತಜ್ಞತೆ ವ್ಯಕ್ತವಾಯಿತು. ‘ಸನಾತನದ ಪ್ರತಿಯೊಬ್ಬ ಸಾಧಕರ ಸುತ್ತಲೂ ಸುದರ್ಶನ ಚಕ್ರದ ಸಂರಕ್ಷಕ ಕವಚವು ನಿರ್ಮಾಣವಾಗಲಿ, ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ.’ ‘ಪ.ಪೂ.ದೇಶಪಾಂಡೆಬಾಬಾರವರು ಹೋಗಿ ಮಾಂತ್ರಿಕರೊಂದಿಗೆ ಯುದ್ಧ ಮಾಡಿದರು; ಆದುದರಿಂದ ಈಶ್ವರನು ಹಿಂದೂಗಳ ಪರವಾಗಿ ನಿರ್ಣಯವನ್ನು ನೀಡಿದನು’ ಎಂದು ತೀವ್ರವಾಗಿ ಅನಿಸಿತು. ಆಗ ಪ.ಪೂ. ಡಾಕ್ಟರ ಹಾಗೂ ಶ್ರೀಕೃಷ್ಣನ ಚರಣಗಳಲ್ಲಿ ಕೃತಜ್ಞತೆಯು ವ್ಯಕ್ತವಾಯಿತು.
(ಮುಂದುವರಿಯುವುದು)


No comments:
Post a Comment