ವಿದರ್ಭದಲ್ಲಿನ ಸಾಧಕರಿಗೆ ಉಪಾಯ ಮಾಡಲು ಸಕ್ಷಮವಿರುವ ಮತ್ತು ಈಗಲೇ

ವಿದರ್ಭದಲ್ಲಿನ ಸಾಧಕರಿಗೆ ಉಪಾಯ ಮಾಡಲು ಸಕ್ಷಮವಿರುವ ಮತ್ತು ಈಗಲೇ ಶೇ.೬೮ರಷ್ಟು ಮಟ್ಟವಿರುವುದರಿಂದ ಬೇಗನೆ ತಮ್ಮ ಮಾಧ್ಯಮದಿಂದ ಸನಾತನಕ್ಕೆ ಇನ್ನೊಬ್ಬ ಸಂತರನ್ನು ನೀಡುವ ವರ್ಧಾದ (ಮಹಾರಾಷ್ಟ್ರ) 
ಶ್ರೀ. ದತ್ತಾತ್ರಯ ದೇಶಪಾಂಡೆ! - ಡಾ.ಆಠವಲೆ

ಈಶ್ವರನಿಗೆ ಸಾಧನೆ ಮಾಡುವ ಸಾಧಕರಿಂದ ಹೆಚ್ಚು ಅಪೇಕ್ಷೆ ಇರುವುದಿಲ್ಲ. ಸಾಧಕರಿಗೆ ಸಾಧ್ಯವಿರುವುದ್ನು ಅವರು ಅರ್ಪಿಸಿದರೆ, ತಮ್ಮಲ್ಲಿದ್ದ ಗುಣವನ್ನು ಸಂಪೂರ್ಣವಾಗಿ ಉಪಯೋಗಿಸಿದರೆ ಮತ್ತು ತಮ್ಮ ಕ್ಷಮತೆಗನುಸಾರ ಪರಿಪೂರ್ಣ ಸೇವೆ ಮಾಡಿದರೆ ಈಶ್ವರನಿಗೆ ಅದು ತಲುಪುತ್ತದೆ ಮತ್ತು ಅವನು ಅವರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಳ್ಳುತ್ತಾನೆ. ೭೬ ವಯಸ್ಸಿನವರಾದ ಮಹಾರಾಷ್ಟ್ರದ ವರ್ಧಾ ಜಿಲ್ಲೆಯ ಸಾಧಕ ಶ್ರೀ.ದತ್ತಾತ್ರಯ ದೇಶಪಾಂಡೆಯವರು, ‘ನನಗೆ ಲೇಖನ, ಪ್ರವಚನ, ಸತ್ಸಂಗ ಏನೂ ತೆಗೆದುಕೊಳ್ಳಲು ಬರುವುದಿಲ್ಲ. ನಾನು ಕೇವಲ ‘ಸನಾತನ ಪ್ರಭಾತ’ವನ್ನು ವಿತರಣೆ ಮಾಡುತ್ತೇನೆ ಮತ್ತು ಜನರಿಗೆ ಸಾಧನೆಯನ್ನು ಹೇಳುತ್ತೇನೆ’ ಎನ್ನುತ್ತಾರೆ. ಅಂದರೆ ಅವರು ಸಾಧನೆಯಲ್ಲಿ ತನಗೆ ಯಾವುದು ಮಾಡಲು ಸಾಧ್ಯವಾಗುತ್ತದೆಯೋ, ಅದನ್ನು ಪರಿಪೂರ್ಣವಾಗಿ, ಸಮಯವನ್ನು ವ್ಯರ್ಥಗೊಳಿಸದೇ ಮತ್ತು ತಳಮಳದಿಂದ ಮಾಡುತ್ತಿದ್ದಾರೆ. ಅದರಂತೆ ಅವರು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಎರಡೂ ಅಂಗಗಳನ್ನು ಜಾಗರೂಕತೆಯಿಂದ ಮಾಡುತ್ತಿದ್ದಾರೆ. ಸತ್ಸೇವೆಯ ವಿನಃ ಅವರು ಬದುಕಲು ಸಾಧ್ಯವಿಲ್ಲ. ಪ್ರತಿಯೊಂದು ವಿಷಯಗಳನ್ನು ಸರಿಯಾದ ಸಮಯಕ್ಕೆ ಮಾಡುತ್ತಾರೆ. ತಪ್ಪಾಗಬಾರದು ಮತ್ತು ಅಹಂ ಹೆಚ್ಚಾಗಬಾರದು ಎಂಬುದಕ್ಕಾಗಿ ಅವರು ಜಾಗರೂಕರಾಗಿರುತ್ತಾರೆ. ಸತತವಾಗಿ ನಾಮಜಪ ಮಾಡಲು ಪ್ರಯತ್ನಿಸುತ್ತಾರೆ. ಈ ರೀತಿಯಲ್ಲಿ ಅವರು ಈಶ್ವರನಿಗೆ ಅಪೇಕ್ಷಿತವಾಗುವಂತೆ ನಡೆದುಕೊಳ್ಳುತ್ತಿದ್ದಾರೆ.
ಚಿಕ್ಕವರೂ-ದೊಡ್ಡವರೂ ಹೀಗೆ ಎಲ್ಲ ಸಾಧಕರು ಅವರ ಗುಣಗಳನ್ನು ವರ್ಣಿಸಿದ್ದಾರೆ. ಹೀಗಾಗಿ ಎಲ್ಲರಿಗೂ ಆದರ್ಶವಾಗುವಂತೆ ಶ್ರೀ.ದತ್ತಾತ್ರಯ ದೇಶಪಾಂಡೆಯವರ ವರ್ತನೆಯಿದೆ. ಇದರಿಂದಲೇ ಅವರ ಆಧ್ಯಾತ್ಮಿಕ ಪ್ರಗತಿಯಾಯಿತು.

No comments:

Post a Comment