ಸಾಧಕರೇ, ಆಧ್ಯಾತ್ಮಿಕ ತೊಂದರೆಯಿಂದ ವಾಸನೆಯ ವಿಚಾರ ಹೆಚ್ಚಾಗುತ್ತಿದ್ದರೆ, ತಕ್ಷಣ ಮುಂದಿನಂತೆ ಉಪಾಯ ಮಾಡಿ!
‘ಪ್ರಸ್ತುತ ಕಾಲದಲ್ಲಿ ಕೆಟ್ಟ ಶಕ್ತಿಗಳಿಂದಾಗುತ್ತಿರುವ ಆಧ್ಯಾತ್ಮಿಕ ತೊಂದರೆಗಳಲ್ಲಿ ಹೆಚ್ಚಳವಾಗಿದೆ. ಅದರ ಒಂದು ಭಾಗವೆಂದು ಬಹಳಷ್ಟು ಸಾಧಕರ ಮನಸ್ಸಿನಲ್ಲಿ ವಾಸನೆಯ ವಿಚಾರಗಳು ತೀವ್ರವಾಗಿ ಬರುತ್ತಿರುತ್ತವೆ. ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರಲ್ಲಿ ಇದರ ಪ್ರಮಾಣ ಹೆಚ್ಚಿರುತ್ತದೆ. ಸಾಧಕರ ಸಮಯ ವ್ಯರ್ಥವಾಗಬೇಕು ಮತ್ತು ಅವರು ಸಾಧನೆ ಮಾಡಬಾರದು ಎಂಬುದು ಮಾಂತ್ರಿಕರ ಉದ್ದೇಶವಾಗಿರುತ್ತದೆ; ಆದುದರಿಂದ ಅವರು ವಿವಿಧ ಸಂಚುಗಳನ್ನು ರೂಪಿಸಿ ಸಾಧಕರಿಗೆ ವಿವಿಧ ರೀತಿಯ ತೊಂದರೆಗಳನ್ನು ನೀಡುತ್ತಿರುತ್ತಾರೆ. ಸಾಧಕರು ಈ ತೊಂದರೆಗಳಾದಲ್ಲಿ ಮುಂದಿನಂತೆ ಉಪಾಯ ಮಾಡಬೇಕು. ಆದುದರಿಂದ ಅವರ ವಾಸನೆಯ ವಿಚಾರಗಳು ಕಡಿಮೆಯಾಗಿ ಅವರಿಗೆ ಹೆಚ್ಚು ಸೇವೆ ಮಾಡಲು ಸಾಧ್ಯವಾಗುತ್ತದೆ.
೧.ಶಾರೀರಿಕ ಉಪಾಯ: ಸ್ವಲ್ಪ ಸಮಯ ಹಸ್ತಮೈಥುನ ಮಾಡಬೇಕು. ಅದರಿಂದ ತಾತ್ಕಾಲಿಕ ಸುಖವು ದೊರಕಿ ಮನಸ್ಸಿನ ವಿಚಾರಗಳು ಕಡಿಮೆಯಾಗಿ ಪುನಃ ಸೇವೆಯಲ್ಲಿ ಮನಸ್ಸನ್ನು ತೊಡಗಿಸಲು ಸಾಧ್ಯವಾಗುತ್ತದೆ.
೨.ಆಧ್ಯಾತ್ಮಿಕ ಉಪಾಯಗಳು:
ಅ.ವಿಚಾರಗಳು ತುಂಬಾ ಹೆಚ್ಚಾಗಿ ಅಸ್ವಸ್ಥ ಅನಿಸುತ್ತಿದ್ದರೆ ಆ ವಿಚಾರಗಳನ್ನು ಬರೆದು ಪೆಟ್ಟಿಗೆಯಲ್ಲಿ ಹಾಕಬೇಕು ಅಥವಾ ಆ ಕಾಗದವನ್ನು ಪ.ಪೂ.ಭಕ್ತರಾಜ ಮಹಾರಾಜರ ಛಾಯಾಚಿತ್ರ/ಭಾವಚಿತ್ರಕ್ಕೆ ಅಥವಾ ಶ್ರೀಕೃಷ್ಣನ ಭಾವಚಿತ್ರಕ್ಕೆ ಕಟ್ಟಬೇಕು.
ಆ.ಶ್ರೀಕೃಷ್ಣನ ಚಿತ್ರವನ್ನು ಎದುರಿಗಿಟ್ಟು ಅವನಲ್ಲಿ ಈ ವಿಚಾರವನ್ನು ನಾಶ ಮಾಡಲು ಪ್ರಾರ್ಥನೆ ಮಾಡಬೇಕು. ಶ್ರೀಕೃಷ್ಣನ ಸುದರ್ಶನ ಚಕ್ರವು ತನ್ನ ಮನಸ್ಸು, ಅಂತರ್ಮನ ಮತ್ತು ಬುದ್ಧಿ ಇವುಗಳಲ್ಲಿ ತಿರುಗುತ್ತಿದೆ ಮತ್ತು ಅಲ್ಲಿಯ ಕಪ್ಪುಶಕ್ತಿ ಮತ್ತು ವಾಸನೆಯ ವಿಚಾರಗಳನ್ನು ನಾಶ ಮಾಡುತ್ತಿದೆ, ಎಂಬ ಭಾವವಿಡಬೇಕು.
ಇ.ತಮ್ಮ ಹೆಸರನ್ನು ಬರೆದು ಅದರ ಸುತ್ತಲೂ ಶ್ರೀಕೃಷ್ಣನ ಹೆಸರಿನ ನಾಮಜಪದ ಮಂಡಲವನ್ನು ಹಾಕಬೇಕು. ಆ ಕಾಗದವನ್ನು ಸನಾತನದ ಗ್ರಂಥದಲ್ಲಿ ಇಡಬೇಕು.
ಈ. ನನ್ನ ಮನಸ್ಸಿನಲ್ಲಿ ಕೇವಲ ‘ಶ್ರೀಕೃಷ್ಣ’ ಎಂದು ಬರೆಯಲಾಗಿದೆ ಮತ್ತು ಅದರ ಚೈತನ್ಯವು ಸಂಪೂರ್ಣ ಮನಸ್ಸಿನಲ್ಲಿ ಹರಡಿದ್ದು ಮನಸ್ಸು ಸಂಪೂರ್ಣವಾಗಿ ಶ್ರೀಕೃಷ್ಣನ ನೀಲಿ ಬಣ್ಣದಿಂದ ತುಂಬಿದೆ, ಎಂಬ ಭಾವವಿಡಬೇಕು.
ಉ. ಮಾನಸಿಕವಾಗಿ ಒಬ್ಬಂಟಿಯೆಂದು ಅನ್ನಿಸುತ್ತಿದ್ದರೆ ಶ್ರೀಕೃಷ್ಣನೊಂದಿಗೆ ಎಲ್ಲಾದರೂ ತಿರುಗಾಡಲು ಹೋಗಬೇಕು. ಅವನ ಚರಣಗಳಲ್ಲಿ ಕುಳಿತುಕೊಳ್ಳಬೇಕು. ‘ಅವನೇ ಮಿತ್ರನಿದ್ದಾನೆ’ ಎಂಬ ಭಾವವಿಟ್ಟು ಅವನಿಗೆ ಮನಸ್ಸಿನಲ್ಲಿದ್ದದ್ದನ್ನು ಹೇಳಬೇಕು. ಅವನ ಮಗ್ಗುಲಲ್ಲಿಯೇ ಮಲಗಬೇಕು ಇತ್ಯಾದಿ.
೩. ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳನ್ನು ಕೇಳುವುದು ಮತ್ತು ಅವರ ಚರಿತ್ರೆಯನ್ನು ಓದುವುದರಿಂದ ಚೈತನ್ಯದ ಲಾಭವಾಗಿ ಕಪ್ಪು ಆವರಣವು ಕಡಿಮೆಯಾಗಿ ಸೇವೆಯನ್ನು ಮಾಡಲು ಪುನಃ ಉತ್ಸಾಹ ದೊರಕುವುದು: ಎಲ್ಲಕ್ಕಿಂತ ಮಹತ್ವದ್ದೆಂದರೆ ವಾಸನೆಯ ವಿಚಾರಗಳಲ್ಲಿ ತುಂಬಾ ಸಮಯ ಮುಳುಗಿರಬಾರದು. ಅದರಿಂದ ‘ಮನೋರಾಜ್ಯದಲ್ಲಿ ವಿಹರಿಸುವುದು’ ಎಂಬ ದೋಷ ನಿರ್ಮಾಣವಾಗಿ ಅದರಲ್ಲಿ ಎಷ್ಟು ಸಮಯ ಕಳೆಯಿತೆಂಬುದು ಸಾಧಕರ ಗಮನಕ್ಕೆ ಬರುವುದಿಲ್ಲ. ಇಂತಹ ಸಮಯದಲ್ಲಿ ಪ.ಪೂ.ಭಕ್ತರಾಜ ಮಹಾರಾಜರ ಭಜನೆಯನ್ನು ಕೇಳುವುದು ಮತ್ತು ಅವರ ಚರಿತ್ರೆಯನ್ನು ಓದುವುದರಿಂದ ಚೈತನ್ಯದ ಲಾಭವಾಗಿ ಕಪ್ಪು ಆವರಣವು ಕಡಿಮೆಯಾಗಿ ಸೇವೆ ಮಾಡಲು ಪುನಃ ಉತ್ಸಾಹ ನಿರ್ಮಾಣವಾಗುತ್ತದೆ.
೪. ಇಂತಹ ಸಾಧಕರು ಸಾಧ್ಯವಾದಷ್ಟು ಒಬ್ಬಂಟಿಯಾಗಿರಬಾರದು. ಇತರ ಸಾಧಕರೊಂದಿಗೆ ಸೇವೆ ಮಾಡಿದರೆ ಅವರ ಸತ್ಸಂಗದ ಲಾಭವಾಗಿ ಅವರೊಂದಿಗೆ ಸೇವೆಯ ಬಗ್ಗೆ ಮಾತನಾಡಿ ವಾಸನೆಯ ವಿಚಾರಗಳ ಬಗ್ಗೆ ನಿರ್ಲಕ್ಷ್ಯ ಮಾಡಲು ಸಾಧ್ಯವಾಗುತ್ತದೆ.
೫.ಸಾಧಕರಿಗೆ ಸಾಧನೆ ಮತ್ತು ಸೇವೆ ಮಾಡಿ ಆನಂದ ದೊರಕಲು ಪ್ರಾರಂಭವಾದೊಡನೆ, ಅವರ ವಾಸನೆಯ ವಿಚಾರಗಳು ಕಡಿಮೆಯಾಗುತ್ತವೆ: ವಾಸನೆಯ ವಿಚಾರಗಳು ಬರುವುದು ತಪ್ಪಲ್ಲ. ನಮಗೆ ಹಸಿವು-ಬಾಯಾರಿಕೆ ಆಗುತ್ತದೆ. ಅದು ಶಾರೀರಿಕ ಅವಶ್ಯಕತೆಯಾಗಿದೆ. ಅದರಂತೆ ದೇಹಸುಖವೂ ಒಂದು ಅವಶ್ಯಕತೆಯಾಗಿದೆ. ಹಸಿವೆಯಾದಾಗ ಊಟ ಮಾಡುವುದು ಯೋಗ್ಯವಿದೆ; ಆದರೆ ಸತತವಾಗಿ ತಿನ್ನುವುದು ಮತ್ತು ಹೆಚ್ಚು ತಿನ್ನುವುದು ಅಯೋಗ್ಯವಾಗಿದೆ. ಅದರಂತೆ ವಾಸನೆಯ ವಿಚಾರವನ್ನು ಸತತವಾಗಿ ಮಾಡುವುದು ಮತ್ತು ಆ ಸುಖದ ಮನೋರಾಜ್ಯದಲ್ಲಿ ಹೆಚ್ಚು ಕಾಲ ಕಳೆಯುವುದು ತಪ್ಪಾಗಿದೆ. ಸಾಧಕನಿಗೆ ಸಾಧನೆ ಮತ್ತು ಸೇವೆ ಮಾಡಿ ಆನಂದ ದೊರೆಯಲು ಪ್ರಾರಂಭವಾದೊಡನೆ, ಅವನ ವಾಸನೆಯ ವಿಚಾರಗಳು ಕಡಿಮೆಯಾಗುತ್ತವೆ. ಹೇಗೆ ನಮಗೆ ಪ್ರತಿದಿನ ಎರಡು ಹೊತ್ತು ಊಟ ಬೇಕಾಗುತ್ತದೆಯೋ, ಅದರಂತೆ ಈ ಸಂದರ್ಭದಲ್ಲಾಗುವುದಿಲ್ಲ. ಇದಕ್ಕಾಗಿ ಸಾಧಕರು ಸಾಧನೆಯನ್ನು ಹೆಚ್ಚಿಸುವುದು ಆವಶ್ಯಕವಾಗಿದೆ.
೬.ದೇಹಸುಖ ಎಷ್ಟೇ ಮಹತ್ವದ್ದಾಗಿದ್ದರೂ ಸಾಧನೆಯಿಂದ ದೊರಕುವ ಆನಂದದ ಮುಂದೆ ಅದು ಕ್ಷೀಣವಾಗಿದೆ, ಎಂಬುದನ್ನು ಗಮನದಲ್ಲಿಟ್ಟು ಸಾಧಕರು ಸತತವಾಗಿ ಸತ್‌ನಲ್ಲಿರಬೇಕು! : ದೇಹ ಸುಖವು ಎಷ್ಟೇ ಮಹತ್ವದ್ದಾಗಿದ್ದರೂ, ಸಾಧನೆಯಿಂದ ದೊರಕುವ ಆನಂದದ ಮುಂದೆ ಅದು ಕ್ಷೀಣವಾಗಿದೆ, ಎಂಬುದನ್ನು ಸಾಧಕರು ಗಮನದಲ್ಲಿಡಬೇಕು. ಆದುದರಿಂದ ಅದರ ಬಗ್ಗೆ ಹೆಚ್ಚು ವಿಚಾರ ಮಾಡದೇ ಸಾಧಕರು ಸತತ ಸತ್‌ನಲ್ಲಿರಲು ಪ್ರಯತ್ನಿಸಬೇಕು. ಅದರಂತೆ ನಮ್ಮ ಮನಸ್ಸಿನಲ್ಲಿ ಬರುವ ಪ್ರತಿ ಯೊಂದು ವಿಚಾರವನ್ನು ಶ್ರೀಕೃಷ್ಣನೊಂದಿಗೆ ಜೋಡಿಸಬೇಕು. ಶ್ರೀಕೃಷ್ಣನಿಗೆ ‘ನಿನಗೆ ಅಪೇಕ್ಷಿತವಿರುವಂತಹ ವಿಚಾರಗಳೇ ನನ್ನ ಮನಸ್ಸಿನಲ್ಲಿ ಬರಲಿ’ ಎಂದು ಪದೇ ಪದೇ ಪ್ರಾರ್ಥನೆ ಮಾಡಬೇಕು. ಒಂದು ವೇಳೆ ಮಾಂತ್ರಿಕರು ಸಾಧಕರೊಂದಿಗೆ ಹೋರಾಡಲು ವಾಸನೆಯ ವಿಚಾರಗಳ ಅಸ್ತ್ರವನ್ನು ಉಪಯೋಗಿಸಿದರೂ, ಶ್ರೀಕೃಷ್ಣನ ಅಪಾರ ಸಾಮರ್ಥ್ಯದ ಎದುರು ಅದು ಉಳಿಯುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟು ಸಾಧಕರು ಶ್ರೀಕೃಷ್ಣನಿಗೆ ಸತತವಾಗಿ ಶರಣಾಗಬೇಕು.’ - ಸೌ. ರಾಜಶ್ರೀ ಖೊಲ್ಲಂ, (ಪುಷ್ಯ ಅಮಾವಾಸ್ಯೆ, ಕಲಿಯುಗ ವರ್ಷ ೫೧೧೨ (೨.೨.೨೦೧೧))
No comments:
Post a Comment