ಧರ್ಮಸತ್ಸಂಗ

ಧಾರ್ಮಿಕ ಕೃತಿಗಳ ಶಾಸ್ತ್ರ
ಪೂಜಾ ಉಪಕರಣ : ಪೂಜಾ ಉಪಕರಣದ ಘಟಕಗಳು
ಪುಷ್ಪಗಳನ್ನು ಅರ್ಪಣೆ ಮಾಡದೆ, ದೇವತಾಪೂಜೆಯು ಪೂರ್ಣವಾಗುವುದಿಲ್ಲ. ನಾವು ಯಾವುದಾದರೂ ದೇವತೆಗೆ ಯಾವ ಪುಷ್ಪ ಅಥವಾ ಪತ್ರೆ ಅರ್ಪಣೆ ಮಾಡಬೇಕು, ಅವುಗಳ ಸಂಖ್ಯೆ ಎಷ್ಟಿರಬೇಕು, ಅದರಿಂದ ಯಾವ ಲಾಭಗಳಾಗುತ್ತವೆ ಮುಂತಾದ ವಿಷಯಗಳ ಮಹತ್ವವನ್ನು ತಿಳಿದುಕೊಂಡರೆ, ನಮಗೆ ದೇವತಾಪೂಜೆಯಿಂದ ಅಧಿಕ ಲಾಭವಾಗುತ್ತದೆ. 

ಪುಷ್ಪ
ವಾತಾವರಣದಲ್ಲಿ ದೇವತೆಗಳ ‘ಸೂಕ್ಷ್ಮ-ತರಂಗಗಳು’ ಕಾರ್ಯನಿರತವಾಗಿರುತ್ತವೆ. ಈ ತರಂಗಗಳು ವಿಶಿಷ್ಟ ಪುಷ್ಪ ಅಂದರೆ ಹೂವುಗಳೆಡೆಗೆ ಆಕರ್ಷಿತವಾಗುತ್ತವೆ. ಅನಂತರ ಈ ತರಂಗಗಳು ಪುಷ್ಪದ ಮೂಲಕ ಪ್ರಕ್ಷೇಪಿತವಾಗುತ್ತವೆ, ಆಗ ಅವುಗಳಿಗೆ ‘ಪವಿತ್ರಕ’ ಎನ್ನುತ್ತಾರೆ. ಅಧ್ಯಾತ್ಮ ಶಾಸ್ತ್ರದ ದೃಷ್ಟಿಯಿಂದ ಪುಷ್ಪವನ್ನರ್ಪಿಸುವುದರ ಮಹತ್ವವನ್ನು ತಿಳಿದುಕೊಳ್ಳ್ಳಲು ಮೊದಲು ‘ತರಂಗ’ ಮತ್ತು ‘ಪವಿತ್ರಕ’ ಈ ಶಬ್ದಗಳ ನಡುವಿನ ಭಿನ್ನತೆಯನ್ನು ಅರಿತುಕೊಳ್ಳಬೇಕು.
೧.ಬ್ರಹ್ಮಾಂಡದಿಂದ ಪುಷ್ಪಗಳತ್ತ ಆಕರ್ಷಿತವಾಗುವ ದೇವತೆಗಳ ಸೂಕ್ಷ್ಮತರ ತತ್ತ್ವಗಳಿಗೆ ‘ತರಂಗ’ ಎನ್ನುತ್ತಾರೆ. ಪುಷ್ಪಗಳ ಮೂಲಕ ಈ ದೇವತೆಗಳ ತತ್ತ್ವಗಳು ಯಾವಾಗ ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತವೆಯೋ, ಆಗ ಅವುಗಳಿಗೆ ‘ಪವಿತ್ರಕ’ ಎನ್ನುತ್ತಾರೆ.
೨.ತರಂಗಗಳು ದೇವತಾತತ್ತ್ವದ ಸೂಕ್ಷ್ಮತರ ಮತ್ತು ತುಲನೆಯಲ್ಲಿ ಅಧಿಕ ನಿರ್ಗುಣ ಸ್ವರೂಪದ್ದಾಗಿವೆ. ಪವಿತ್ರಕ ಅದೇ ದೇವತಾ ತತ್ತ್ವದ ಸೂಕ್ಷ್ಮ ಮತ್ತು ಸಗುಣಸ್ವರೂಪದ್ದಾಗಿವೆ. ಈ ಸೂಕ್ಷ್ಮ ಸ್ತರ ದಲ್ಲಾಗುವ ಪ್ರಕ್ರಿಯೆ ನೋಡಲು ಸೂಕ್ಷ್ಮ ದೃಷ್ಟಿಯು ಅವಶ್ಯಕವಾಗಿದೆ ಮತ್ತು ಅದು ಸಾಧನೆಯಿಂದಲೇ ಪ್ರಾಪ್ತವಾಗುತ್ತದೆ.

No comments:

Post a Comment