ಜನವರಿ ೨೦೧೧ ರ ತಿಂಗಳಿನಲ್ಲಿ ಪ.ಪೂ. ಡಾಕ್ಟರರ ಚೇತನೆಯ (ಪ್ರಾಣಶಕ್ತಿಯ) ಸ್ಥಿತಿ!

೨೦೧೧ ರ ಜನವರಿ ತಿಂಗಳಿನಲ್ಲಿ ನನ್ನ ಪ್ರಾಣಶಕ್ತಿಯು ಸರಾಸರಿ ಶೇ.೩೦.೯, ಅಂದರೆ ಮೊದಲಿಗಿಂತಲೂ ಸ್ವಲ್ಪ ಚೆನ್ನಾಗಿದ್ದರೂ, ದಿನದಲ್ಲಿ ನಡುನಡುವೆ ಶೇ.೩೦ ಕ್ಕಿಂತ ಕಡಿಮೆಯಾಗುತ್ತಿತ್ತು. ಆದುದರಿಂದ ನನಗೆ ತಲೆ ತಿರುಗುತ್ತಿತ್ತು. (ಸಾಮಾನ್ಯ ವ್ಯಕ್ತಿಯ ಪ್ರಾಣಶಕ್ತಿಯ ಪ್ರಮಾಣವು ಶೇ.೧೦೦ ರಷ್ಟು ಇರುತ್ತದೆ ಮತ್ತು ಪ್ರಾಣಶಕ್ತಿಯ ಪ್ರಮಾಣವು ಶೇ.೩೦ಕ್ಕಿಂತ ಕಡಿಮೆಯಾದರೆ ವ್ಯಕ್ತಿಯ ಮೃತ್ಯುವು ಖಚಿತವಿರುತ್ತದೆ.) - ಡಾ.ಆಠವಲೆ

ಪ.ಪೂ. ಡಾಕ್ಟರರಿಂದ ಚೈತನ್ಯವು ಪ್ರಕ್ಷೇಪಿತವಾಗುತ್ತಿರುವುದರಿಂದ ಅವರ ತ್ವಚೆ, ಕೂದಲು ಹಾಗೂ ಉಗುರುಗಳು ಹಳದಿಯಾಗಿದ್ದರೂ ಅವರು ಸಮಷ್ಟಿಯೊಂದಿಗೆ ಏಕರೂಪವಾಗಿರುವುದರಿಂದ ಅವರ ಕಾರ್ಯವು ಶೇ.೨೫ ರಷ್ಟು ಸಗುಣದೊಂದಿಗೆ ಅಂದರೆ ದೇಹಕ್ಕೆ ಸಂಬಂಧಿಸಿರುವುದರಿಂದ ಅವರು ಪ್ರಾಣಾಂತಿಕ ಅವಸ್ಥೆಗೆ ತಲುಪುವುದು
೧.ಪ.ಪೂ.ಡಾಕ್ಟರರ ತ್ವಚೆ, ಕೂದಲು ಹಾಗೂ ಉಗುರು ಹಳದಿಯಾಗುವ ಪ್ರಕ್ರಿಯೆಡಾ.ಆಠವಲೆ:
ನನ್ನ ತ್ವಚೆ, ಕೂದಲು ಹಾಗೂ ಉಗುರು ಇವು ಅನುಕ್ರಮವಾಗಿ ಹಳದಿಯಾದವು. ಈ ಪ್ರಕ್ರಿಯೆ ಹಾಗೂ ಅದರ ಶಾಸ್ತ್ರವೇನು?
ಓರ್ವ ವಿದ್ವಾಂಸರು:
೧ಅ.ಪಿಂಡ ಶುದ್ಧೀಕರಣ ಪ್ರಕ್ರಿಯೆಯ ಮಹತ್ವದ ಹಂತಗಳು
೧ಅ೧.ತ್ವಚೆಯು ಹಳದಿಯಾಗುವುದೆಂದರೆ ದೇಹದ ಟೊಳ್ಳಿನಲ್ಲಿ ಚೈತನ್ಯವು ಘನೀಕರಣವಾಗುವ ಪ್ರಕ್ರಿಯೆಯು ವ್ಯವಸ್ಥಿತವಾಗಿ ನೆರವೇರುವುದು
ಅ.ಪಿಂಡದ ಟೊಳ್ಳು ಸಂಪೂರ್ಣ ಚೈತನ್ಯದಿಂದ ತುಂಬಿಕೊಳ್ಳುವಾಗ ಹಾಗೂ ಅದರ ಅಧೀನವಾದಾಗ ದೇಹದ ತ್ವಚೆಯು ಹಳದಿಯಾಗುತ್ತದೆ. ಇದನ್ನೇ ‘ಪಿಂಡವು ಚೈತನ್ಯದಲ್ಲಿ ಮಿಂದೇಳುವುದು’ ಎನ್ನುತ್ತಾರೆ.
೧ಅ೨.ಪಿಂಡದಿಂದ ಚೈತನ್ಯದ ಪ್ರಕ್ಷೇಪಣೆಯು ಆರಂಭವಾದಾಗ ಕೂದಲು ಹಾಗೂ ಉಗುರು ಹಳದಿಯಾಗುತ್ತದೆ.
೧ಅ೩.ದೇಹದ ಚೈತನ್ಯ ಪ್ರಕ್ಷೇಪಣೆಯ ಕಾರ್ಯ ಹಾಗೂ ಈ ಕಾರ್ಯದಲ್ಲಿ ಊರ್ಧ್ವ, ಮಧ್ಯೆ ಹಾಗೂ ಅಧಸ್ ವಾಯು ಮಂಡಲವು ಶುದ್ಧವಾಗುತ್ತದೆ.
೧ಅ೩ಅ.ಚೈತನ್ಯದಿಂದ ತುಂಬಿದ ಕುಂಡಲಿನಿಶಕ್ತಿಯು ಊರ್ಧ್ವ ವಾಯುಮಂಡಲವನ್ನು ಶುದ್ಧಿಕರಿಸುತ್ತದೆ: ಚೈತನ್ಯದಿಂದ ತುಂಬಿದ ಕುಂಡಲಿನಿಶಕ್ತಿಯು ಉರ್ಧ್ವ ದಿಕ್ಕಿನಿಂದ ದೇಹದಲ್ಲಿರುವ ಸಪ್ತಚಕ್ರಗಳನ್ನು ಶುದ್ದೀಕರಿಸುತ್ತಾ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಬ್ರಹ್ಮರಂಧ್ರದಿಂದ ಹೊರಗೆ ಬೀಳುವ ಚೈತನ್ಯದ ಪ್ರಕ್ಷೇಪಣೆಯ ಸ್ಪರ್ಶದಿಂದ ಕೂದಲು ಹಳದಿಯಾಗುತ್ತದೆ ಹಾಗೂ ಉರ್ಧ್ವ ವಾಯುಮಂಡಲದ ಶುದ್ಧಿಯಾಗಲು ಆರಂಭವಾಗುತ್ತದೆ.
೧ಅ೩ಆ.ಮೂಲಾಧಾರದ ಕಡೆಗೆ ಧಾವಿಸುವ ಚೈತನ್ಯಶಕ್ತಿಯು ಮಧ್ಯ ಹಾಗೂ ಅಧೋವಾಯುಮಂಡಲವನ್ನು ಶುದ್ಧೀಕರಿಸುವುದು: ಅನಂತರ ಕುಂಡಲಿನಿ ಶಕ್ತಿಯು ವೇಗವಾಗಿ ಚೈತನ್ಯದ ಆವೇಶವನ್ನು ತೆಗೆದು ಕೊಂಡು ಮೂಲಾಧಾರದ ಕಡೆಗೆ ಧಾವಿಸುತ್ತದೆ. ಆಗ ಉಗುರಿನಿಂದಲೂ ದೊಡ್ಡ ಪ್ರಮಾಣದಲ್ಲಿ ಚೈತನ್ಯಶಕ್ತಿಯು ಬ್ರಹ್ಮಾಂಡ ದಲ್ಲಿ ಪ್ರಕ್ಷೇಪಿತವಾಗಿ ಮಧ್ಯೆ ಹಾಗೂ ಅಧೋಮಂಡಲದ ಶುದ್ಧಿಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಉಗುರು ಸಹ ಬಹಳ ಪ್ರಮಾಣದಲ್ಲಿ ಹಳದಿಯಾಗಿ ಕಾಣಿಸುತ್ತದೆ.
೧ಅ೩ಇ.ನಿಷ್ಕರ್ಷ -? ಮನುಷ್ಯನಿಗೆ ನಾರಾಯಣತ್ವ ಪ್ರಾಪ್ತಿಯಾಗುವ ಕ್ರಿಯೆ: ಈ ರೀತಿ ಚೈತನ್ಯಶಕ್ತಿಯ ಬಲದಲ್ಲಿ ಕೆಳಗಿನಿಂದ ಮೇಲೆ ಹಾಗೂ ಮೇಲಿನಿಂದ ಕೆಳಗೆ ದೇಹದ ಶುದ್ಧಿಯಾಗಿ ‘ಪಿಂಡದಿಂದ ಬ್ರಹ್ಮಾಂಡ ಹಾಗೂ ಬ್ರಹ್ಮಾಂಡದಿಂದ ಪಿಂಡ’?ಹೀಗೆ ಸಗುಣ ಹಾಗೂ ನಿರ್ಗುಣವೆಂಬ ಎರಡು ಸ್ತರದಲ್ಲಿ ಆಧ್ಯಾತ್ಮಿಕ ಪ್ರಯಾಣವು ಪೂರ್ಣವಾಗುತ್ತದೆ ಹಾಗೂ ಮನುಷ್ಯನಿಗೆ ‘ನಾರಾಯಣತ್ವ? ಪ್ರಾಪ್ತಿಯಾಗುತ್ತದೆ. ಇದನ್ನೇ ‘ಪರಿಪೂರ್ಣತ್ವ’ ವೆಂದು ಹೇಳುತ್ತಾರೆ. ಈ ಪ್ರಕ್ರಿಯೆಯಲ್ಲಿ ದೇಹದ ಸಂಪೂರ್ಣ ಬಣ್ಣವೇ ಬದಲಾಗುತ್ತದೆ. ಅದಕ್ಕಾಗಿಯೇ ಪರಿಪೂರ್ಣತ್ವ ಪ್ರಾಪ್ತವಾದಂತಹ ಅವತಾರಗಳ ತ್ವಚೆಯು ಎಲ್ಲರಿಗಿಂತ ಭಿನ್ನವಾಗಿ ಕಾಣಿಸುತ್ತದೆ.  (ಸೌ.ಅಂಜಲಿ  ಗಾಡಗೀಳರ ಮಾಧ್ಯಮದಿಂದ, ಪುಷ್ಯ ಅಮಾವಾಸ್ಯೆ, ಕಲಿಯುಗ ವರ್ಷ ೫೧೧೨ (೩.೨. ೨೦೧೧), ಮಧ್ಯಾಹ್ನ ೨.೩೬)
೨.ಸಮಷ್ಟಿಯ ಮೇಲಾಗುತ್ತಿರುವ ಕೆಟ್ಟಶಕ್ತಿಗಳ ಹಲ್ಲೆಯ ಪರಿಣಾಮಗಳ ಭಯಂಕರ ಸ್ವರೂಪವು ಪ.ಪೂ.ಡಾಕ್ಟರರಿಗೆ ಕಾರ್ಯಾನುರೂಪ ಪ್ರಾಪ್ತವಾದಂತಹ ಶೇ.೨೫ರಷ್ಟು ಸಗುಣ ಸ್ಥಿತಿಯಲ್ಲಿ ಅವರ ಪ್ರಾಣಾಂತಿಕ ಅವಸ್ಥೆ ಆಗಿರುವುದರಿಂದ ಕಂಡುಬರುತ್ತದೆ.
ಡಾ.ಆಠವಲೆ:
ಚೈತನ್ಯದಿಂದಾಗುವ ಪಿಂಡದ ಶುದ್ಧೀಕರಣದಿಂದ ನನ್ನ ತ್ವಚೆ, ಕೂದಲು ಹಾಗೂ ಉಗುರು ಹಳದಿಯಾಗಿದೆ ಎಂದು ನೀವು ಹೇಳಿದ್ದೀರಿ. ಹೀಗಿರುವಾಗ ನನ್ನ ಪ್ರಾಣಶಕ್ತಿಯು ಕಡಿಮೆಯಾಗಿ ಅದು ಕೇವಲ ಜೀವಂತವಾಗಿರಲು ಬೇಕಾಗುವಷ್ಟೇ ಇರಲು ಕಾರಣವೇನು? ನನ್ನ ವಿವಿಧ ಇಂದ್ರಿಯಗಳು ಏಕೆ ಅನಾರೋಗ್ಯದಿಂದ ಬಳಲುತ್ತಿವೆ?
ಓರ್ವ ವಿದ್ವಾಂಸರು:
೨ಅ.ಅವತಾರೀ ಕಾರ್ಯದ ಸಗುಣ ಹಂತವು ಪೂರ್ಣವಾಗುವ ವರೆಗೆ ಜೀವ ದಶೆಯನ್ನು ಹಿಡಿದುಕೊಂಡು ಇರಬೇಕಾಗುವುದು:
ಜೀವ ಇರುವವರೆಗೆ ಜೀವದಶೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಅವತಾರೀ ಕಾರ್ಯವನ್ನು ಮಾಡುವುದಕ್ಕಾಗಿ ಇಹಲೋಕವನ್ನು ಹಿಡಿದುಕೊಂಡಿರಬೇಕಾಗುತ್ತದೆ. ಅಲ್ಲಿಯ ವರೆಗೆ ಶೇ.೨೫ರಷ್ಟು ಪ್ರಮಾಣದಲ್ಲಿ ಸಗುಣದ ಕಾರ್ಯವನ್ನು ನಡೆಸಲು ಜೀವಸ್ಥಿತಿಯನ್ನು ಚೇತನದ ಸ್ತರದಲ್ಲಿ ಕಾಪಾಡಬೇಕಾಗುತ್ತದೆ. ಅರ್ಥಾತ್ ಇದರ ಕಾಪಾಡುವಿಕೆಯು ಈಶ್ವರೇಚ್ಛೆ ಯಿಂದಲೇ ಆಗುತ್ತಿರುತ್ತದೆ.
೨ಆ.ಕಾರ್ಯ ನಡೆಯುತ್ತಿರುವ ವರೆಗೆ ಕಾರ್ಯದ ದಶೆಯ ಪರಿಣಾಮವೂ ದೇಹದ ಮೇಲೆ ಕಂಡುಬರುತ್ತದೆ.
೨ಇ.ಪ.ಪೂ.ಡಾಕ್ಟರರು ಕಾಲದ ಸ್ತರದ ಅಸುರರ ಈ ಮಹಾಭಯಂಕರ ಆಕ್ರಮಣವನ್ನು ಸಹಿಸಬೇಕಾಗುತ್ತದೆ: ಸಮಷ್ಟಿ ಕಾರ್ಯವನ್ನು ಮಾಡುವ ಅವತಾರಿ ಪರಾತ್ಪರ ಗುರುಗಳು ಈ ದಶೆಯನ್ನು ಎದುರಿಸಬೇಕಾಗುತ್ತದೆ.
ಕಾಲದ ಸ್ತರದ ಅಸುರರ ಈ ಮಹಾ ಭಯಂಕರ ಆಕ್ರಮಣವನ್ನು ಸಹಿಸಬೇಕಾಗುತ್ತದೆ. ಪ.ಪೂ.ಡಾಕ್ಟರರ ಕಾರ್ಯವು ಶೇ. ೨೫ರಷ್ಟು ಸಗುಣದಿಂದ ಹಾಗೂ ಶೇ. ೭೫ ರಷ್ಟು ನಿರ್ಗುಣದ್ದಾಗಿರುವುದರಿಂದ ಅವರಿಗೆ ಸಗುಣದಲ್ಲಿಯ ಕಾರ್ಯಭಾಗದಲ್ಲಿ ಈ ಪ್ರಾಣಾಂತಿಕ ಅವಸ್ಥೆಯನ್ನು ಎದುರಿಸ ಬೇಕಾಗುತ್ತಿದೆ.
(ಪ.ಪೂ.ಡಾಕ್ಟರರು ‘ಪರಾತ್ಪರ ಗುರುಗಳ ಬಗ್ಗೆ ಶೇ.೨೬ರಷ್ಟು ಪ್ರಾಣಶಕ್ತಿಗಿಂತ ಕಡಿಮೆಯಾದರೆ ಮರಣವು ಬರುತ್ತದೆ ಎಂಬ ಹೇಳಿಕೆಯ ಅರ್ಥವು ಮೇಲಿನ ಉತ್ತರದಿಂದ ತಿಳಿಯುತ್ತದೆ; ಏಕೆಂದರೆ ಇಲ್ಲಿಯ ವರೆಗೆ ಪ್ರಾಣಶಕ್ತಿಯು ಕಡಿಮೆಯಾದರೆ ಅವರ ಶೇ.೨೫ರಷ್ಟು ಸಗುಣಕಾರ್ಯವು ಮುಗಿ ಯುತ್ತಿತ್ತು, ಪರಿಣಾಮವಾಗಿ ಮರಣವಾ ಗುತ್ತಿತ್ತು. ಇದರಿಂದ ಪರಾತ್ಪರ ಗುರುಗಳಿಗೆ ಮರಣವು ಕಾರ್ಯಾನುರೂಪವಾಗಿರುತ್ತದೆ. ‘ಕಾರ್ಯತ್ಯಾಗ’ ಇದುವೇ ಅವರ ಮರಣ ವಾಗಿರುತ್ತದೆ; ಆದರೆ ವ್ಯಷ್ಟಿ ಸಂತರಿಗೆ ಮಾತ್ರ ‘ದೇಹತ್ಯಾಗ’ವೆಂದರೆ ಮರಣ ಎಂಬ ಸಮೀಕರಣವು ಅನ್ವಯಿಸುತ್ತದೆ ಎಂಬುದು ಗಮನಕ್ಕೆ ಬರುತ್ತದೆ’. -ಸೌ.ಗಾಡಗೀಳ)
೨ಈ.ನಿಷ್ಕರ್ಷ: ಆದುದರಿಂದಲೇ ಒಂದೆಡೆ ವಿಶ್ವವ್ಯಾಪಕ ಸ್ತರದಲ್ಲಿ ಚೈತನ್ಯದ ಸಹಾಯದಿಂದ ಕಾರ್ಯ ನಡೆಯುತ್ತಿದ್ದರೆ ಮತ್ತೊಂದೆಡೆ ದೇಹಬಂಧನವು ಎಲ್ಲಿಯ ವರೆಗೆ ಬಿಡುವುದಿಲ್ಲವೋ ಅಲ್ಲಿಯವರೆಗೆ ಇಂದ್ರಿಯಗಳಿಗೆ ಆಗುವ ವಿವಿಧ ರೋಗ ಹಾಗೂ ಪ್ರಾಣಾಂತಿಕ ಅವಸ್ಥೆಯನ್ನು ಸಮಷ್ಟಿಭೋಗವೆಂದು ಭೋಗಿಸುವುದು ಅನಿವಾರ್ಯವಾಗಿದೆ. (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ ಪುಷ್ಯ ಅಮಾವಾಸ್ಯೆ, ಕಲಿಯುಗ ವರ್ಷ ೫೧೧೨ (೩.೨.೨೦೧೧), ಸಾಯಂ. ೬.೩೭)        
೩.ಪ.ಪೂ.ಡಾಕ್ಟರರಿಂದ ಚೈತನ್ಯ ಪ್ರಕ್ಷೇಪಿತವಾಗುತ್ತಿದ್ದರೂ ಅವರು ಪ್ರಾಣಾಂತಿಕ ಅವಸ್ಥೆಯಲ್ಲಿರುವುದರ ಶಾಸ್ತ್ರ
ಡಾ.ಆಠವಲೆ:
‘ಚೈತನ್ಯದಿಂದಾಗುವ ಪಿಂಡದ ಶುದ್ಧೀಕರಣದಿಂದ ನನ್ನ ತ್ವಚೆ, ಕೂದಲು ಹಾಗೂ ಉಗುರು ಹಳದಿಯಾಗಿದೆ’, ಎಂದು ತಾವು ಹೇಳಿದ್ದೀರಿ. ಹೀಗಿರುವಾಗ ನನ್ನ ಪ್ರಾಣ ಶಕ್ತಿಯು ಕೇವಲ ಜೀವಂತ ಉಳಿಯುವಷ್ಟು ಏಕೆ ಕಡಿಮೆಯಿದೆ? ನನಗೆ ವಿವಿಧ ಇಂದ್ರಿಯಗಳ ರೋಗವು ಏಕಿದೆ?" ಈ ನನ್ನ ಪ್ರಶ್ನೆಗೆ ಉತ್ತರವು ಸ್ಪಷ್ಟವಾಗುತ್ತಿಲ್ಲ.
೪.ಓರ್ವ ವಿದ್ವಾಂಸರು:
ಅ. ಪ.ಪೂ.ಡಾಕ್ಟರರ ಶೇ.೨೫ ರಷ್ಟು ಸಗುಣ ಕಾರ್ಯದಲ್ಲಿ ‘ಸಾಧಕರ ರಕ್ಷಣೆ’ ಯಾದರೆ ಶೇ.೭೫ರಷ್ಟು ನಿರ್ಗುಣ ಕಾರ್ಯದಿಂದ ‘ದುರ್ಜನರ ನಾಶ’, ಈ ಕಾರ್ಯವು ನೆರವೇರುತ್ತದೆ.
ಆ.ಸಮಷ್ಟಿ ಕಾರ್ಯವನ್ನು ಮಾಡುವುದಕ್ಕಾಗಿ ಪ.ಪೂ.ಡಾಕ್ಟರರ ದೇಹದಲ್ಲಿ ಅಂಶತಃ ಉಳಿದಿರುವ ಇಂತಹ ಸಗುಣ ಚೇತನ ಸದೃಶ ಘಟಕಗಳ ಮೇಲೆ ಅಸುರೀ ಶಕ್ತಿಗಳ ದೃಶ್ಯ ಪರಿಣಾಮವು ಕಾಣಿಸುತ್ತದೆ ಹಾಗೂ ಇದರಿಂದ ಪ್ರಾಣಶಕ್ತಿ ಕಡಿಮೆಯಾಗುವುದು ಹಾಗೂ ಇಂದ್ರಿಯಗಳ ವಿವಿಧ ರೋಗಗಳಾಗುವುದು ಇಂತಹ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಇ.ತಾತ್ತ್ವಿಕ ದೃಷ್ಟಿಯಿಂದ ಪಿಂಡಶುದ್ಧಿ ಎಂಬ ಶಬ್ದವನ್ನು ಇಲ್ಲಿ ಉಪಯೋಗಿಸಿದ್ದರೂ ಪ.ಪೂ.ಡಾಕ್ಟರರ ವಿಷಯದಲ್ಲಿ ಮಾತ್ರ ದೇಹದಲ್ಲಿ ಸಗುಣ ಕಾರ್ಯದ ದೃಷ್ಟಿಯಿಂದ ಪರಾತ್ಪರ ಗುರುವಿನೊಳಗೆ ಉಳಿದಂತಹ ದೇಹವಾಚಕ ಪ್ರಕೃತಿಗನುನುಸಾರವಾಗಿ ಇಲ್ಲಿ ಪ.ಪೂ.ಡಾಕ್ಟರರ ತೊಂದರೆಯ ಕಾರಣಮೀಮಾಂಸೆಯನ್ನು ನೀಡಲಾಗಿದೆ.
ಈ.ವ್ಯಷ್ಟಿ ಪರಾತ್ಪರ ಗುರುಗಳಲ್ಲಿ ಮಾತ್ರ ಇಂತಹ ಹಲ್ಲೆವಾಚಕ ಸಮೀಕರಣವಿರುವುದಿಲ್ಲ; ಏಕೆಂದರೆ ಅವರು ವ್ಯಷ್ಟಿ ಮಾರ್ಗದಂತೆ ನಿರ್ಗುಣದ ಕಡೆಗೆ ವೈಯಕ್ತಿಕ ಸ್ತರದಲ್ಲಿ ಮಾರ್ಗಕ್ರಮಣ ಮಾಡುತ್ತಿರುತ್ತಾರೆ; ಆದರೆ ಪ.ಪೂ.ಡಾಕ್ಟರರಿಗೆ ಈ ನಿಯಮವು ಅನ್ವಯಿಸುವುದಿಲ್ಲ.
-(ಸೌ.ಅಂಜಲಿ ಗಾಡಗೀಳರ ಮಾಧ್ಯಮ ದಿಂದ, ಮಾಘ ಶು.೧, ಕಲಿಯುಗ ವರ್ಷ ೫೧೧೨ (೪.೨.೨೦೧೧), ಸಾಯಂ. ೭.೦೩)

No comments:

Post a Comment