ಹಿಂದೂ ಸಂಸ್ಕೃತಿ ಅಳಿಯುವುದಿಲ್ಲ; ಆದರೆ ನಾವು ಧರ್ಮಾಚರಣೆ ಮಾಡದಿದ್ದರೆ...

ಹಿಂದೂ ಸಂಸ್ಕೃತಿ ಅಳಿಯುವುದಿಲ್ಲ; ಆದರೆ ನಾವು ಧರ್ಮಾಚರಣೆ ಮಾಡದಿದ್ದರೆ ನಾವು ಉಳಿಯುವುದಿಲ್ಲ! 
- ಶ್ರೀ ಗುದ್ದಲಿ ಸ್ವಾಮಿಗಳು

ಚಿತ್ರ ೨: ಗ್ರಂಥ ಬಿಡುಗಡೆಗೊಳಿಸುತ್ತಿರುವ ಶ್ರೀ.ಮೋಹನ ಗೌಡ, ಶ್ರೀಗುದ್ದಲಿ ಸ್ವಾಮಿ ಮತ್ತು ಕು.ಸ್ಫೂರ್ತಿ ಬೆನಕನವಾರಿ
ಹುಬ್ಬಳ್ಳಿ: ೩೦.೧.೨೦೧೧ರಂದು ಇಲ್ಲಿನ ನೆಹರೂ ಮೈದಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ಧರ್ಮಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯ ವ್ಯಾಸಪೀಠದಲ್ಲಿ ಮುಖ್ಯ ವಕ್ತಾರರಾಗಿ ಹೊಸರಿತ್ತಿಯ ಗುದ್ದಲಿ ಸ್ವಾಮಿ ಮಠದ ಶ್ರೀಗುದ್ದಲಿ ಸ್ವಾಮಿಗಳು, ಸನಾತನ ಸಂಸ್ಥೆಯ ಕು.ಸ್ಫೂರ್ತಿ ಬೆನಕನವಾರಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ ಗೌಡ ಇವರು ಉಪಸ್ಥಿತರಿದ್ದರು. ಸಭೆಯಲ್ಲಿ ೧೨೦೦ ಧರ್ಮಾಭಿಮಾನಿಗಳು ಪಾಲ್ಗೊಂಡಿದ್ದರು.
ಸನಾತನ ನಿರ್ಮಿತ ಗ್ರಂಥ ‘ದೃಷ್ಟಿ ತಗಲುವುದು ಮತ್ತು ತೆಗೆಯುವುದು ಇವುಗಳ ಹಿಂದಿನ ಅಧ್ಯಾತ್ಮ ಶಾಸ್ತ್ರ’ ಈ ಗ್ರಂಥವನ್ನು ವಕ್ತಾರರಾದ ಶ್ರೀ ಗುದ್ದಲಿ ಸ್ವಾಮಿಗಳು ಬಿಡುಗಡೆಗೊಳಿಸಿದರು.
ಶ್ರೀ ಗುದ್ದಲಿ ಸ್ವಾಮಿಗಳು ತಮ್ಮ ಮಾರ್ಗದರ್ಶನದಲ್ಲಿ, ‘ಹಿಂದೂ ಸಂಸ್ಕೃತಿ ಅಳಿಯುವುದಿಲ್ಲ; ಆದರೆ ಹಿಂದೂಗಳು ಧರ್ಮಾಚರಣೆ ಮಾಡದಿದ್ದರೆ ಉಳಿಯುವುದಿಲ್ಲ. ನಾವು ಉಳಿಯಬೇಕಾದರೆ ಧರ್ಮಾಚರಣೆ ಮಾಡಬೇಕು. ಜಗತ್ತಿನಲ್ಲಿ ಹೆಚ್ಚಿನವರು ಕೆಟ್ಟವರಿದ್ದಾರೆ ಮತ್ತು ಅವರು ನಾಶವಾಗಲಿದ್ದಾರೆ. ಏಕೆಂದರೆ ಅವರ ಮುಂದೆ ಗುರಿ ಇಲ್ಲ, ಹಿಂದೆ ಗುರು ಇಲ್ಲ’ ಎಂದರು.





No comments:

Post a Comment