ಉದ್ದೇಶ ತಿಳಿದುಕೊಳ್ಳದೇ ‘ರಾಷ್ಟ್ರಹಾನಿಯಾಗುತ್ತದೆ’ ಎಂದು ..

ಉದ್ದೇಶ ತಿಳಿದುಕೊಳ್ಳದೇ ‘ರಾಷ್ಟ್ರಹಾನಿಯಾಗುತ್ತದೆ’ ಎಂದು ವಿರೋಧಿಸುವವರು ಅವ್ಯಾಹತವಾಗಿ ನಡೆಯುವ ರಾಷ್ಟ್ರಹಾನಿಯ ವಿರುದ್ಧ ಕೃತಿ ಮಾಡುವರೇ ?
ಹುಬ್ಬಳ್ಳಿ : ಇಲ್ಲಿ ೩೦.೧.೨೦೧೧ ರಂದು ಆಯೋಜಿಸಲಾದ ಹಿಂದೂ ಧರ್ಮಜಾಗೃತಿ ಸಭೆಯ ಕೊನೆಯಲ್ಲಿ ‘ವಂದೇ ಮಾತರಂ’ ಗೀತೆಯು ನಡೆಯುತ್ತಿರುವಾಗ ಹಿಂದೂ ಜನಜಾಗೃತಿ ಸಮಿತಿಯ ಒಬ್ಬ ಕಾರ್ಯಕರ್ತನು ಆ ಕ್ಷಣದ ಛಾಯಾಚಿತ್ರವನ್ನು ತೆಗೆಯುತ್ತಿದ್ದನು. ರಾಷ್ಟ್ರಗೀತೆ ಮುಗಿದ ನಂತರ ಸಭೆಯಲ್ಲಿ ಉಪಸ್ಥಿತರಿದ್ದ ಓರ್ವ ವ್ಯಕ್ತಿಯು ತನ್ನ ೬-೭ ಮಿತ್ರರೊಂದಿಗೆ ಆ ಛಾಯಾಚಿತ್ರ ತೆಗೆದ ಸಮಿತಿಯ ಕಾರ್ಯಕರ್ತನ ಬಳಿ ಬಂದು ಜೋರಾಗಿ, “ನೀನು ರಾಷ್ಟ್ರೀಯ ಗೀತೆಯ ಅವಮಾನ ಮಾಡಿದ್ದೀಯ. ರಾಷ್ಟ್ರಗೀತೆ ನಡೆಯುತ್ತಿರುವಾಗ ನೀನು ಛಾಯಾಚಿತ್ರ ತೆಗೆಯುತ್ತಾ ಇದ್ದಿಯಾ.
ಈಗ ನೀನು ಹೊರಗಡೆ ನಡೆಯುತ್ತಿರುವ ವಕ್ತಾರರೊಂದಿಗಿನ ಧರ್ಮಾಭಿಮಾನಿಗಳ ಸಭೆಯಲ್ಲಿ ಎಲ್ಲರೆದುರು ಕ್ಷಮೆ ಕೇಳಬೇಕು. ನಿನ್ನ ಜಾಗದಲ್ಲಿ ಇನ್ಯಾರಾದರೂ ಇರುತ್ತಿದ್ದರೆ ಅವರನ್ನು ನಾವು ಹೊರಗಟ್ಟುತ್ತಿ ದ್ದೆವು. ನಿನಗೆ ಕೇವಲ ಕ್ಷಮೆ ಕೇಳಲು ಹೇಳು ತ್ತಿದ್ದೇವೆ" ಎಂದರು. ಆ ವ್ಯಕ್ತಿಗೆ ತಿಳಿಸಿ ಹೇಳಿದರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಅನಂತರ “ಕ್ಷಮೆ ಕೇಳದಿದ್ದರೆ ನಾವು ಇಲ್ಲಿಂದ ಹೊರಟು ಹೋಗುತ್ತೇವೆ ಮತ್ತು ಪುನಃ ನಿಮ್ಮ ಯಾವುದೇ ಕಾರ್ಯಕ್ರಮಕ್ಕೆ ಬರುವುದಿಲ್ಲ" ಎಂದು ಬೆದರಿಸಿ ಆ ೬-೭ ಜನ ಹೊರಟು ಹೋದರು.
ಹಿಂದೂ ಜನಜಾಗೃತಿ ಸಮಿತಿಯು ೯ ವರ್ಷಗಳಿಂದ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ರಾಷ್ಟ್ರೀಯ ಗೀತೆ ಹಾಡುತ್ತಿರುವಾಗಿನ ಛಾಯಾಚಿತ್ರವನ್ನು ಜನರಿಗೆ ತೋರಿಸಿದರೆ ಅವರಿಗೂ ಪ್ರೇರಣೆ ಸಿಗುತ್ತದೆ ಮತ್ತು ಅವರಲ್ಲಿನ ರಾಷ್ಟ್ರಾಭಿಮಾನ ಜಾಗೃತವಾಗುತ್ತದೆ. ಆಗಸ್ಟ್ ೧೫ ಮತ್ತು ಜನವರಿ ೨೬ ರಂದು ಎಲ್ಲೆಡೆ ಛಾಯಾಚಿತ್ರ ತೆಗೆಯುತ್ತಾರೆ. ಛಾಯಾಚಿತ್ರ ತೆಗೆಯುವ ಉದ್ದೇಶ ತಿಳಿದುಕೊಳ್ಳದೇ ಸುಮ್ಮನೇ ಅಡ್ಡಿ ತರುವ ಕಾರ್ಯಕರ್ತರು ಅವ್ಯಾಹತವಾಗಿ ರಾಷ್ಟ್ರ ಹಾನಿ ಮಾಡುವವರ ವಿರುದ್ಧ ಕೃತಿ ಮಾಡುವರೇ ?

No comments:

Post a Comment