ಹೊಸದೆಹಲಿ - ಪತಂಜಲಿ ಯೋಗ ಪೀಠ ಮತ್ತು ದಿವ್ಯ ಯೋಗ ಟ್ರಸ್ಟ್ ಇವೆರಡೂ ಟ್ರಸ್ಟಿನ ವಾರ್ಷಿಕ ಆಯವ್ಯಯವು ೧೧ ಅಬ್ಜ ರೂಪಾಯಿಗಳಷ್ಟಿದೆ. ನನ್ನಲ್ಲಿ ಒಂದೊಂದು ಪೈಸೆಯ ಲೆಕ್ಕಾಚಾರವಿದೆ. ಟ್ರಸ್ಟಿಗಾಗಿ ಕಪ್ಪು ಹಣವನ್ನು ತೆಗೆದುಕೊಳ್ಳುವುದಿಲ್ಲ ಎಂದು ಯೋಗಗುರು ಪೂ.ರಾಮದೇವಬಾಬಾ ರವರು ಖಾಸಗಿ ವಾರ್ತಾವಾಹಿನಿಯೊಂದಕ್ಕೆ ಸಂದರ್ಶನ ನೀಡತ್ತಾ ಹೇಳಿದ್ದಾರೆ. ಅವರು ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗರವರು ತಮ್ಮ ಮೇಲೆ ಹೊರಿಸಿದ ಆರೋಪಕ್ಕೆ ಉತ್ತರ ನೀಡುತ್ತಿರುವಾಗ ಹೀಗೆಂದು ನುಡಿದರು. ದಿಗ್ವಿಜಯ ಸಿಂಗರವರು ಪೂ. ರಾಮದೇವ ಬಾಬಾರವರನ್ನು ಟೀಕಿಸುತ್ತಾ, ‘ರಾಜಕೀಯದಲ್ಲಿ ರಾಮದೇವ ಬಾಬಾರವರ ಸಹಭಾಗವು ಹೆಚ್ಚಾಗುತ್ತಿದೆ. ಆದುದರಿಂದ ಅವರು ಯಾವುದೊಂದು ರಾಜಕೀಯ ಪಕ್ಷವನ್ನು ಸ್ಥಾಪಿಸಬೇಕು.
ಅವರು ಅರಾಜಕೀಯ ವೇದಿಕೆಯಿಂದ ರಾಜಕೀಯ ಭಾಷಣ ಬೀಗುವುದನ್ನು ನಿಲ್ಲಿಸಬೇಕು’ ಎಂದು ಹೇಳಿದರು. (ರಾಷ್ಟ್ರ ಮತ್ತು ಧರ್ಮಕ್ಕಾಗಿ ನಿರಪೇಕ್ಷವಾಗಿ ಕಾರ್ಯ ಮಾಡುವವರಿಗೆ ಕಾಂಗ್ರೆಸ್ಸಿನ ಭಯೋತ್ಪಾದಕರನ್ನು ಬೆಂಬಲಿಸುವ ಮತ್ತು ಹೆಸರಿನಲ್ಲಿ ಹಿಂದೂ ಆದರೆ ಕೃತಿಯಿಂದ ಜಿಹಾದಿಯಾಗಿರುವ ಮುಖಂಡರು ಹೇಗೆ ಬೆದರಿಸುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಯೋಗಗುರು ಪೂ.ರಾಮದೇವಬಾಬಾರವರೊಂದಿಗೆ ಇಂತಹ ಸಂಸ್ಕೃತಿ ಹೀನವಾಗಿ ವರ್ತಿಸುವ ಮುಖಂಡರ ಮನಸ್ಸಿನಲ್ಲಿ ಜನತೆಯ ಬಗ್ಗೆ ಏನು ಬೆಲೆಯಿರಬಹುದು ಎಂಬ ಬಗ್ಗೆ ವಿಚಾರ ಮಾಡಲೂ ಸಾಧ್ಯವಿಲ್ಲ. - ಸಂಪಾದಕರು)
ಅವರು ಇತ್ತೀಚೆಗೆ ನಾನೊಬ್ಬ ದೇಶಭಕ್ತನಿದ್ದು ತನಿಖೆಗೆ ಸಿದ್ಧನಿದ್ದೇನೆ. ಕಾಂಗ್ರೆಸ್ ಸಹ ತನಿಖೆ ಎದುರಿಸಲಿ ಎಂದು ಬಾಬಾರವರು ಹೇಳಿದ್ದಾರೆ.

No comments:
Post a Comment