ಮೃತ್ಯು ಮತ್ತು ಮದುವೆ ಕಾರ್ಯ

೧. ಒಂದು ಅಯೋಗ್ಯ ತಿಳುವಳಿಕೆ
ತಂದೆ ಮತ್ತು ತಾಯಿ ಇವರ ನಿಧನದ ನಂತರ ಒಂದು ವರ್ಷದೊಳಗೆ ಮದುವೆ ಕಾರ್ಯ ಮಾಡಬೇಕು, ಇಲ್ಲದಿದ್ದರೆ ಮುಂದೆ ಮೂರು ವರ್ಷದ ತನಕ ಮದುವೆ ಮಾಡಲು ಸಾಧ್ಯವಾಗದು.
೨. ತಂದೆ ಮತ್ತು ತಾಯಿ ಇವರ ನಿಧನವಾದ ಒಂದು ವರ್ಷದೊಳಗೆ ಮದುವೆ ಇತ್ಯಾದಿ ಕಾರ್ಯವನ್ನು ಮಾಡಿದರೆ ನೂತನ ದಂಪತಿಗಳಿಗೆ ಪೂರ್ವಜರ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ತಂದೆ ಮತ್ತು ತಾಯಿ ಇವರ ನಿಧನದ ನಂತರ ಒಂದು ವರ್ಷದೊಳಗೆ ಮದುವೆ ಮಾಡಬಾರದು; ಏಕೆಂದರೆ ಸಂಬಂಧಿಕರ ನಿಧನವಾಗುವುದು ಅಶುಭ ಪ್ರಕ್ರಿಯೆಯಾಗಿದೆ. ಭೂಲೋಕ ಬಿಟ್ಟು ಹೋದ ಜೀವವು ವಾಸನಾತ್ಮಕವಾಗಿರುವುದರಿಂದ ಅವರ ತೀವ್ರ ಆಸಕ್ತಿದಾಯಕ ಸ್ಪಂದನಗಳು ವಾಸ್ತುವಿನಲ್ಲಿ ಹಾಗೂ ಅವರು ವಿಹರಿಸುತ್ತಿದ್ದ ಸ್ಥಳದಲ್ಲಿ ತೀವ್ರ ಪ್ರಮಾಣದಲ್ಲಿ ಸುಳಿದಾಡುತ್ತಿರುತ್ತವೆ. ಇವು ಸಾಧನೆಯನ್ನು ಮಾಡದ ಜೀವಗಳಾಗಿದ್ದರೆ ಅವರ ಸೂಕ್ಷ್ಮದಲ್ಲಿನ ಅಸ್ತಿತ್ವದಿಂದ ವಾಸ್ತು ಕಲುಷಿತವಾಗಿರುತ್ತದೆ. ಹೀಗಿರುವಾಗ ಒಂದು ವರ್ಷದೊಳಗೆ ಮದುವೆಯಾದರೆ ಹೊಸ ದಂಪತಿಗಳಿಗೆ ಪೂರ್ವಜರ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೇ ಪೂರ್ವಜರು ಆಧ್ಯಾತ್ಮಿಕ ತೊಂದರೆಯಿಂದ ಬಳಲುತ್ತಿದ್ದರೆ ಸಮಾರಂಭಕ್ಕೆ ಸೇರಿದ ಎಲ್ಲರು ತೀವ್ರ ಪ್ರಮಾಣದ ಆಧ್ಯಾತ್ಮಿಕ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಆದುದರಿಂದ ಧರ್ಮಶಾಸ್ತ್ರದಲ್ಲಿ ಒಂದು ವರ್ಷದೊಳಗೆ ವಿವಾಹ ಇತ್ಯಾದಿ ಶುಭ ಕಾರ್ಯ ಮಾಡಬಾರದು ಎಂದು ಹೇಳಲಾಗಿದೆ.’ - ಓರ್ವ ವಿದ್ವಾಂಸರು (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ಮಾಘ ಶು. ೭, ಕಲಿಯುಗ ವರ್ಷ ೫೧೧೨ (೧೦.೨. ೨೦೧೧), ಮಧ್ಯಾಹ್ನ ೨.೫೯)

No comments:

Post a Comment