ಹಿಂದೂಗಳೇ, ದೇವಸ್ಥಾನಗಳ ದಯನೀಯ
ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ಉಳಿಸಲು ಸಿದ್ಧರಾಗಿ!
೧. ನಮ್ಮ ಪೂರ್ವಜರು ಶ್ರದ್ಧೆಯಿಂದ ಹಾಗೂ ಭಕ್ತಿಯಿಂದ ದೇವಸ್ಥಾನವನ್ನು ಕಟ್ಟಿಸಿದರು. ಆದರೆ ಇಂದು ಸರಕಾರವು ಆ ಶ್ರದ್ಧೆಯನ್ನು ಮೆಟ್ಟುತ್ತಿರುವುದು ಕಂಡುಬರುವುದು
‘ನಾನು ಡಿಸೆಂಬರ್ ೨೦೧೦ ರಲ್ಲಿ ಕರ್ನಾಟಕಕ್ಕೆ ಹೋಗಿದ್ದೆನು ಅಲ್ಲಿಯ ದೇವಸ್ಥಾನಗಳನ್ನು ನೋಡಿ ನನಗೆ ಕಣ್ಣೀರು ಬಂದಿತು. ನಮ್ಮ ಪೂರ್ವಜರು ನಿಜವಾಗಿಯೂ ಎಷ್ಟು ಶ್ರದ್ಧೆ ಹಾಗೂ ಭಕ್ತಿಯಿಂದ ಈ ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ.
ಆದರೆ ಇಂದು ಆ ದೇವಸ್ಥಾನಗಳ ಸ್ಥಿತಿಯು ಎಷ್ಟೊಂದು ದಯನೀಯವಾಗಿದೆ ಎಂದೆನಿಸಿತು. ಅದರ ಮೌಲ್ಯ, ನಮ್ಮ ಭಾವ, ಶ್ರದ್ಧೆ ಹಾಗೂ ಶ್ವಾಸವನ್ನು ಇಂದಿನ ಜಾತ್ಯತೀತ ಭಾಜಪ ಸರಕಾರವು ಮೆಟ್ಟುತ್ತಿರುವುದು ಗಮನಕ್ಕೆ ಬರುತ್ತಿದೆ. ಹಿಂದೂಗಳೇ, ಇಂದು ನಮ್ಮ ಮೇಲೆ ಸತತವಾಗಿ ಆಘಾತ, ಅನ್ಯಾಯವಾಗುತ್ತಿರುವಾಗ ಯಾವುದೇ ಪಕ್ಷ ಸಂಘಟನೆಗಳು ನಮ್ಮ ಸಹಾಯಕ್ಕೆ ಓಡಿ ಬರುವುದಿಲ್ಲ. ಇದರಿಂದ ನಮಗೆ ಎಲ್ಲ ಬಾಗಿಲುಗಳು ಮುಚ್ಚಿರುತ್ತವೆ. ಕೊನೆಗೆ ನಾವು ಯಾರ ಮೇಲೆಯೂ ವಿಶ್ವಾಸವಿಡದೇ ಕೇವಲ ದೇವರಿಗೆ ಮೊರೆ ಹೋಗುತ್ತೇವೆ ಹಾಗೂ ಎಲ್ಲವನ್ನೂ ಅವರಲ್ಲಿ ಬೇಡುತ್ತೇವೆ. ‘ದೇವರಲ್ಲದೇ ಇನ್ಯಾರೂ ನಮಗೆ ಏನನ್ನೂ ಕೊಡಲು ಸಾಧ್ಯವಿಲ್ಲ’ ಎಂದು ನಮಗೆ ದೃಢವಾದ ಶ್ರದ್ಧೆಯಿದೆ’. ದೇವಸ್ಥಾನಗಳೇ ಇಲ್ಲದ್ದಿದ್ದರೆ ನಾವು ನಮ್ಮ ಅಡಚಣೆಗಳನ್ನು ಯಾರ ಮುಂದಿಡುವುದು ? ನಮ್ಮ ಗೋಳನ್ನು ಯಾರಿಗೆ ಹೇಳುವುದು ? ನಾವು ಯಾರಿಗೆ ಶರಣಾಗುವುದು ? ಯಾರ ಮೇಲೆ ನಾವು ವಿಶ್ವಾಸವಿಡುವುದು ?
೨. ದೇವಸ್ಥಾನ ಸರಕಾರಿಕರಣ ಕಾನೂನನ್ನು ಜ್ಯಾರಿಗೊಳಿಸಿ ಸಮಾಧಾನವಾಗಲಿಲ್ಲವೆಂದು ಅನಧಿಕೃತವೆಂದು ನಿರ್ಧರಿಸಿ ಕೆಡವಿ ಹಾಕಲು ಪ್ರಾರಂಭಿಸಿರುವ ಸರಕಾರ
ಮಹಾರಾಷ್ಟ್ರ ಸರಕಾರ ಮೊದಲು ದೇವಸ್ಥಾನ ಸರಕಾರಿಕರಣ ಕಾನೂನನ್ನು ತಂದು ಎಲ್ಲ ಶ್ರೀಮಂತ ದೇವಸ್ಥಾನಗಳನ್ನು ತನ್ನ ತೆಕ್ಕೆಯೊಳಪಡಿಸಲು ಪ್ರಯತ್ನಿಸಿತು. ಆದರೆ ಕೆಲವು ಹಿಂದುತ್ವವಾದಿ ಸಂಘಟನೆಗಳು ಅದನ್ನು ತೀವ್ರವಾಗಿ ವಿರೋಧಿಸಿದ ನಂತರ ಆ ಕ್ರಮವು ಸ್ವಲ್ಪ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ. ಈ ರೀತಿ ಸರಕಾರದ ಒಳಸಂಚು ನಿಷ್ಪಲವಾಯಿತು. ಹಾಗಾಗಿ ನಮ್ಮ ಮೇಲಿನ ಹಗೆತನದಿಂದ ಅವರು ಅದಕ್ಕಿಂತಲೂ ಮುಂದೆ ಹೋಗಿ ಹೊಸ ಉಪಾಯವನ್ನು ಹುಡುಕಿದರು. ಅದೆಂದರೆ ಅನಧಿಕೃತ ದೇವಸ್ಥಾನಗಳನ್ನು ಕೆಡಹುವುದು. ಇದಕ್ಕೆ ನಮ್ಮ ಸರ್ವೋಚ್ಚ ನ್ಯಾಯಾಲಯವು ಅಷ್ಟೇ ತತ್ಪರತೆಯಿಂದ ಒಪ್ಪಿಗೆ ನೀಡಿತು.
೩. ‘ಬುಲ್ಡೋಝರ್’ನಿಂದ ನಮ್ಮ ದೇವತೆಗಳನ್ನು ಚಿಂದಿಚಿಂದಿಯಾಗಿಸಿ ಹಾರಿಸಲಾಗುತ್ತಿದೆ, ಅವರ ಶರೀರ ತುಂಡು ತುಂಡಾಗುತ್ತಿದೆ, ಆದರೂ ನಾವು ಶಾಂತವಾಗಿ ಹೇಗಿರುತ್ತೇವೆ ? ನಮ್ಮ ಪಿತ್ತವೇಕೆ ನೆತ್ತಿಗೇರುವುದಿಲ್ಲ ?
ಒಂದೊಂದು ದೇವಸ್ಥಾನವನ್ನು ನೋಡಿದಾಗ ಇಂದೂ ನಮ್ಮ ಎದೆಯು ನಮ್ಮ ಮಹಾನ ಭಾರತೀಯ ಸಂಸ್ಕೃತಿಯ ಬಗ್ಗೆ ಅಭಿಮಾನದಿಂದ ತುಂಬಿ ಬರುತ್ತದೆ. ಇಂದು ಅದೇ ನಮ್ಮ ದೇವಸ್ಥಾನಗಳನ್ನು ಎಷ್ಟು ನಿರ್ದಯ, ವಿಕೃತ, ಹಿಂಸಕ ಹಾಗೂ ಆಸುರೀ ವೃತ್ತಿಯಿಂದ ಕೆಡವಲಾಗುತ್ತಿದೆ. ಅವುಗಳ ಮೇಲೆ ‘ಬುಲ್ಡೋಝರ್’ನ್ನು ನಡೆಸಲಾಗುತ್ತದೆ. ಅದರಲ್ಲಿ ನಮ್ಮ ಶ್ರದ್ಧಾಸ್ಥಾನವಾಗಿರುವ ದೇವದೇವತೆಗಳ ಬಗ್ಗೆ ಎಳ್ಳಷ್ಟೂ ವಿಚಾರ ಮಾಡುವುದಿಲ್ಲ. ‘ಬುಲ್ಡೋಝರ್’ನಿಂದ ನಮ್ಮ ದೇವತೆಗಳನ್ನು ಚಿಂದಿಚಿಂದಿಯಾಗಿ ಹಾರಿಸಲಾಗುತ್ತಿದೆ ಹಾಗೂ ಅವರ ಶರೀರ ತುಂಡು ತುಂಡಾಗುತ್ತಿದೆ, ಆದರೂ ನಾವು ಶಾಂತವಾಗಿ ಹೇಗಿದ್ದೇವೆ ? ನಮ್ಮ ಪಿತ್ತವೇಕೆ ನೆತ್ತಿಗೇರುವುದಿಲ್ಲ ? ನಮ್ಮ ಮೈಯಲ್ಲಿನ ರೋಮ ಏಳುವುದಿಲ್ಲವೇ ? ನಾವು ಇವನ್ನೆಲ್ಲ ಷಂಡತನದಿಂದ ಹೇಗೆ ನೋಡುತ್ತಿದ್ದೇವೆ ? ನಮ್ಮಲ್ಲಿರುವ ಪುರುಷಾರ್ಥವು ಮುಗಿಯಿತೇ ?
೪. ದೇವಸ್ಥಾನವು ನಮ್ಮ ಮೂಲ ಇಂಧನ, ಶಕ್ತಿ ಹಾಗೂ ಚೈತನ್ಯದ ಸ್ರೋತವಾಗಿವೆ ಹಾಗೂ ಇಂದು ಹಿಂದೂಗಳ ಮೂಲಕ್ಕೇ ಏಟು ಬೀಳುತ್ತಿರುವುದರಿಂದ ನಾವು ಜೀವಂತವಾಗಿ ಉಳಿಯಲು ಸಾಧ್ಯವಿಲ್ಲ
ಹಿಂದೂಗಳೇ, ಒಂದು ಕ್ಷಣ ವಿಚಾರ ಮಾಡಿ, ‘ಇದೇ ಸ್ಥಿತಿಯು ನಿಮ್ಮದೇ ತಾಯಿಯ ಮೇಲೆ ಬಂದೆರಗಿದ್ದರೆ ನೀವು ಇದೇ ರೀತಿ ಅವಮಾನ ಸಹಿಸಿಕೊಂಡು ಶಾಂತವಾಗಿ ಇರುತ್ತಿದ್ದರೇ ? ‘ಆ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ‘ನಾನೇಕೆ ಈ ದೃಶ್ಯ ನೋಡುವುದಕ್ಕಿಂತ ಮೊದಲು ಸಾಯಲಿಲ್ಲ? ಎಂದು ವಿಚಾರ ಬರುತ್ತಿತ್ತು. ‘ನನಗೆ ಜನ್ಮ ನೀಡಿದ ತಾಯಿಯ ಬಗ್ಗೆ ಇಷ್ಟು ಅನಿಸುತ್ತದೆ ಎಂದಾದರೆ ಆ ದೇವರು ನನಗೆ ಇಂತಹ ತಾಯಿಯ ಹೊಟ್ಟೆಯಲ್ಲಿ ಹಾಕಿದ್ದಕ್ಕೆ ಅವರ ಬಗ್ಗೆ ಎಷ್ಟು ಅನಿಸಬೇಕಿತ್ತು? ಬಾಂಧವರೇ, ದೇವಸ್ಥಾನಗಳು ನಮ್ಮ ಮೂಲ ಇಂಧನ, ಶಕ್ತಿ ಹಾಗೂ ಚೈತನ್ಯಗಳ ಸ್ರೋತವಾಗಿದೆ. ಹಿಂದೂಗಳ ಮೂಲಕ್ಕೆ ಕೊಡಲಿಯೇಟು ಬೀಳುತ್ತಿರುವುದರಿಂದ ಅವರು ಜೀವಂತವಾಗಿ ಉಳಿಯಲು ಸಾಧ್ಯವಿಲ್ಲ. ಇಂದು ನಾವು ಸಂಘಟಿತರಾಗಿಲ್ಲ. ಹಾಗಾಗಿಯೇ ನಮ್ಮ ಮೇಲೆ ಇಂತಹ ಸಮಯವು ಬಂದೆರಗಿದೆ. ನಾವು ಸಂಘಟಿತರಾದರೆ ಸರಕಾರಕ್ಕೆ ಓಡಿ ಹೋಗಲು ಜಾಗವಿರಲಿಕ್ಕಿಲ್ಲ. ಅಲ್ಪಸಂಖ್ಯಾತರ ಮಿತಿಮೀರಿ ಓಲೈಕೆಯಿಂದಾಗಿ ಇಂದು ಅವರು ಕೇವಲ ಹಿಂದೂಗಳ ದೇವಸ್ಥಾನಗಳನ್ನು ಕೆಡಹುತ್ತಿದ್ದಾರೆ.
೫. ಹಿಂದೂಗಳೇ, ಏದ್ದೇಳಿ ಸಂಘಟಿತರಾಗಿ ಹಾಗೂ ಧರ್ಮ ಹಾನಿಯ ವಿರುದ್ಧ ಹೋರಾಡಿ!
ಹಿಂದೂಗಳೇ, ಏದ್ದೇಳಿ ಸಂಘಟಿತರಾಗಿ ಹಾಗೂ ಧರ್ಮಹಾನಿಯ ವಿರುದ್ಧ ಹೋರಾಡಿ! ಇಂದು ನಾವು ಎಚ್ಚರಗೊಳ್ಳದಿದ್ದರೆ, ನಮ್ಮ ಧರ್ಮ, ದೇವತೆಗಳಿಗಾಗಿ ಏನೂ ಕೃತಿ ಮಾಡದಿದ್ದರೆ ಇಂದು ದೇವಸ್ಥಾನಗಳ ಮೇಲೆ ಹಾಯುವ ‘ಬುಲ್ಡೋಝರ್’ ನಮ್ಮ ಮನೆಯ ಮೇಲೆ ಹಾಯಬಾರದು ಎಂದಿದ್ದರೆ ಈಗಲೇ ಒಟ್ಟಾಗಿ. ಸಂಘಟಿತರಾಗಿ ವಿರೋಧಿಸಿ’. - ಕು.ಪ್ರಿಯಾಂಕಾ ಸ್ವಾಮಿ, ಸನಾತನ ಗುರುಕುಲ, ರಾಮನಾಥಿ, ಗೋವಾ. (೨೦.೧.೨೦೧೧)

No comments:
Post a Comment