ಕರ್ನಾಟಕ ರಾಜ್ಯದಲ್ಲಿ ಸಂಘಪರಿವಾರದ ಕೆಲವು ಕಾರ್ಯಕರ್ತರಿಂದ
ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಹಾಗೂ ಸನಾತನದ
ಸಾಧಕರಿಗೆ ಧರ್ಮಪ್ರಸಾರ ಮಾಡುತ್ತಿರುವಾಗ ಬಂದಂತಹ ಕಹಿ ಅನುಭವಗಳು
ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ಧರ್ಮಜಾಗೃತಿ ಸಭೆಗೆ ಸಹಾಯ ಮಾಡುವಂತೆ ನಾಟಕವಾಡಿ ಪ್ರತ್ಯಕ್ಷದಲ್ಲಿ ಸಹಾಯ ಮಾಡದೇ ವಿರೋಧಿಸುವುದು, ಉತ್ತಮ ಕಾರ್ಯಕರ್ತರು ಸಹಾಯ ಮಾಡಿದರೆ ಅವರನ್ನೂ ವಿರೋಧಿಸುವಂತಹ ಕಹಿ ಅನುಭವಗಳನ್ನು ಇಲ್ಲಿ ನೀಡುತ್ತಿದ್ದೇವೆ. (ಮುಂದುವರಿದ ಭಾಗಮುಂದುವರಿದ ಭಾಗ: ಕಳೆದ ಭಾಗಕ್ಕೆ ಇಲ್ಲಿ ಕ್ಲಿಕ್ ಮಾಡಿ: http://kannadasanatanprabhat.blogspot.com/2011/02/blog-post_7768.html)
ಪ್ರಸಂಗ ೪
ಮೈಸೂರಿನಲ್ಲಿ ಸಮಿತಿಯ ಕಾರ್ಯಕರ್ತರು ರಾ.ಸ್ವ. ಸಂಘದ ಜಿಲ್ಲಾಕಾರ್ಯ ನಿರ್ವಾಹಕನನ್ನು ಭೇಟಿಯಾಗಲು ಹೋದಾಗ ಅವರು ಪ್ರತ್ಯುತ್ತರ ನೀಡದಿರುವುದು; ತದ್ವಿರುದ್ಧ ‘ನೀವೇ ನಮ್ಮೊಂದಿಗೆ ಕಾರ್ಯ ಮಾಡಿ’, ಎಂದು ಸೂಚಿಸುವುದು !
ಮೈಸೂರಿನಲ್ಲಿ ಸಮಿತಿಯ ಕಾರ್ಯಕರ್ತರು ರಾ.ಸ್ವ. ಸಂಘದ ಜಿಲ್ಲಾಕಾರ್ಯ ನಿರ್ವಾಹಕರನ್ನು ಭೇಟಿಯಾಗಲು ಹೋದಾಗ ಅವರು ಪ್ರತ್ಯುತ್ತರ ನೀಡಲಿಲ್ಲ. ತದ್ವಿರುದ್ಧ ಅವರು, ‘ನಮ್ಮದು ಇಷ್ಟು ದೊಡ್ಡ ಸಂಘಟನೆಯಿದೆ. ನೀವೇ ನಮ್ಮೊಂದಿಗೆ ಬಂದು ನಮ್ಮ ಹೆಸರಿನಲ್ಲಿಯೇ ಕಾರ್ಯ ಮಾಡಿ’ ಎಂದರು.

(ಹಿಂದೂಗಳ ಮೇಲಿನ ದೌರ್ಜನ್ಯ, ದೇವತೆಗಳ ವಿಡಂಬನೆ, ದೇವಸ್ಥಾನಗಳಲ್ಲಿ ಮೂರ್ತಿಗಳ ಧ್ವಂಸ, ಅತೀ ವೇಗದಲ್ಲಿ ನಡೆಯುವ ಮತಾಂತರ, ಪಾಶ್ಚಾತ್ಯೀಕರಣ ಹಾಗೂ ಹಿಂದೂ ಸಂಸ್ಕೃತಿಯ ವಿನಾಶ ಇತ್ಯಾದಿ ವಿಷಯಗಳ ಬಗ್ಗೆ ಸಂಘ ಪರಿವಾರದಲ್ಲಿನ ಸಂಘಟನೆಗಳೇನಾದರೂ ತೀಕ್ಷ್ಣವಾದ ಕೃತಿಯನ್ನು ಮಾಡಿದ್ದರೆ, ಸನಾತನವು ಈ ಕಾರ್ಯಗಳನ್ನು ಮಾಡದೇ ಅಧ್ಯಾತ್ಮಪ್ರಸಾರದ ಕಾರ್ಯವನ್ನು ಮಾತ್ರ ಮಾಡುವುದು ! ಸಂಘ ಪರಿವಾರದಲ್ಲಿನ ಸಂಘಟನೆಗಳು ಇಂತಹ ಯಾವುದೇ ಕೃತಿಯನ್ನು ಮಾಡು ವುದಿಲ್ಲ; ಆದ್ದರಿಂದ ಸನಾತನವು ಇವೆಲ್ಲವುಗಳನ್ನು ಮಾಡಬೇಕಾಗುತ್ತಿದೆ. ‘ಹಿಂದೂಗಳಿಗಾಗಿ ಏನಾದರೂ ಮಾಡುವುದು, ಇದು ತಮ್ಮ ಸ್ವಂತದ ಜವಾಬ್ದಾರಿಯಾಗಿದೆ’, ಎಂಬ ನಿಟ್ಟಿನಲ್ಲಿ ಮಾತನಾಡುವವರು; ಆದರೆ ಪ್ರತ್ಯಕ್ಷವಾಗಿ ಯಾವುದೇ ಕೃತಿಯನ್ನು ಮಾಡದಿರುವುದು ಸಂಘಪರಿವಾರದಲ್ಲಿನ ಈ ಕಾರ್ಯಕರ್ತರಿಗೆ ಈ ವಿಷಯ ಅರ್ಥವಾಗುವುದೇ ? - ಸಂಪಾದಕರು)
ಪ್ರಸಂಗ ೫
ಬಜರಂಗ ದಳದಲ್ಲಿನ ಓರ್ವ ಯುವಕನು ಸಮಿತಿಯ ಕಾರ್ಯದಿಂದ ಪ್ರಭಾವಿತನಾಗಿ ‘ಜಾಗೋ ಹಿಂದೂ’ಗೆ ಕಿರುಸಂದೇಶವನ್ನು ಕಳುಹಿಸಿಕೊಡಲು ಎಲ್ಲರ ಸಂಚಾರೀವಾಣಿ ಕ್ರಮಾಂಕವನ್ನು ನೀಡುತ್ತೇನೆಂದು ಹೇಳುವುದು, ಆ ವಿಷಯವನ್ನು ಅವರ ಸಭೆಯಲ್ಲಿ ಮಂಡಿಸುವುದು; ಆದರೆ ಅವರ ಪ್ರಮುಖರಿಂದ ವಿರೋಧವಾಗುವುದು !
ಕರ್ನಾಟಕದಲ್ಲಿ ನಡೆದ ಒಂದು ಸಭೆಗೆ ಕೆಲವು ಯುವಕರು ಬಂದಿದ್ದರು. ಇವರಲ್ಲಿ ಕೆಲವರು ಬಜರಂಗ ದಳಕ್ಕೆ ಸಂಬಂಧ ಪಟ್ಟವರಾಗಿದ್ದರು. ಅವರಲ್ಲಿ ಓರ್ವ ಯುವಕನು ಸಮಿತಿಯ ಕಾರ್ಯದಿಂದ ಪ್ರಭಾವಿತನಾಗಿ ನಿಮ್ಮ ‘ಜಾಗೋ ಹಿಂದೂ’ ವಿಗೆ (ಹಿಂದೂಗಳನ್ನು ಜಾಗೃತಗೊಳಿಸುವ ಸಲುವಾಗಿ ಸಮಿತಿಯ ಕಾರ್ಯಕರ್ತರು ಸಂಚಾರೀವಾಣಿ ಹಾಗೂ ಗಣಕಯಂತ್ರದ ಮಾಧ್ಯಮದಿಂದ ಪ್ರತಿದಿನ ನೂರಾರು ಧರ್ಮಾಭಿಮಾನಿಗಳಿಗೆ ಸಂದೇಶವನ್ನು ಕಳುಹಿಸಿಕೊಡುತ್ತಾರೆ.) ಕಿರುಸಂದೇಶವನ್ನು ಕಳುಹಿಸಲು ನಮ್ಮ ಸಂಘಟನೆಯಲ್ಲಿರುವ ಎಲ್ಲರ ಸಂಚಾರೀವಾಣಿ ಕ್ರಮಾಂಕವನ್ನು ನೀಡುತ್ತೇನೆ’, ಎಂದು ಹೇಳಿದರು. ಅದರ ಅನುಸಾರವಾಗಿ ಅವರು ತಮ್ಮ ಸಭೆಯಲ್ಲಿ ಈ ವಿಷಯವನ್ನು ಮಂಡಿಸಿದರು. ಆಗ ಅವರ ಪ್ರಮುಖರು ಅವರಿಗೆ, ‘ಅದನ್ನು ಮಾಡಬಾರದು. ನೀವು ನಮ್ಮ ಸಂಘಟನೆಯನ್ನು ಬಿಟ್ಟು ಸಮಿತಿಯೊಂದಿಗೆ ಹೋಗುತ್ತೀರಿ ಎಂದು ಅನಿಸುತ್ತದೆ’ ಎಂದರು. (ಯಾವ ಮುಖಂಡರು ತಮ್ಮ ಕಾರ್ಯಕರ್ತರಿಗೆ ದೇಶ ಹಾಗೂ ಧರ್ಮದ ಬಗ್ಗೆ ಸಂದೇಶವನ್ನು ಕಳುಹಿಸುವುದಕ್ಕೂ ವಿರೋಧಿಸುತ್ತಾರೋ, ಅಂತಹವರು ಹಿಂದೂಗಳ ಅಧೋಗತಿಯನ್ನು ಹೇಗೆ ನಿಲ್ಲಿಸುತ್ತಾರೆ ? - ಸಂಪಾದಕರು) ಅದರ ನಂತರ ಆ ಯುವಕನು ಈ ವಿಷಯವನ್ನು ಸಮಿತಿಯ ಕಾರ್ಯಕರ್ತರಿಗೆ ತಿಳಿಸಿದನು. ಅದರೊಂದಿಗೆ ಅವರು ತಮಗೆ ಪರಿಚಯವಿರುವ ೩೦ ಜನರ ಸಂಚಾರೀವಾಣಿ ಕ್ರಮಾಂಕವನ್ನು ‘ಜಾಗೋ ಹಿಂದೂ’ ಕಿರುಸಂದೇಶವನ್ನು ಕಳುಹಿಸಲು ನೀಡಿದರು ಮತ್ತು ‘ಇವರಲ್ಲಿ ಪ್ರತಿಯೊಬ್ಬರೂ ನೂರು ಸಂದೇಶಗಳನ್ನು ಕಳುಹಿಸುವರು’ ಎಂದು ಅವರು ಹೇಳಿದರು.

ಪ್ರಸಂಗ ೬
ಕಾರ್ಯಕರ್ತರೊಂದಿಗೆ ಸಹಾಯದ ನಾಟಕವಾಡಿ ಪ್ರತ್ಯಕ್ಷದಲ್ಲಿ ಮಾತ್ರ ವಿರೋಧಿಸುವ ಸಂಘದ ಕಾರ್ಯಕರ್ತ !
ರಾಜ್ಯದ ಒಂದು ಕಡೆ ಹಿಂದೂ ಜನ ಜಾಗೃತಿ ಸಮಿತಿಯ ಕಾರ್ಯವನ್ನು ಪ್ರಾರಂಭಿಸುವಾಗ ಸಂಘದ ಓರ್ವ ಮುಖಂಡರು ತುಂಬ ಸಹಾಯ ಮಾಡಿದರು. ಯಾರನ್ನೆಲ್ಲ ಸಂಪರ್ಕಿಸಬಹುದು, ಎಲ್ಲೆಲ್ಲಿ ಸತ್ಸಂಗ ಮಾಡಬಹುದು ಇತ್ಯಾದಿ ವಿಷಯಗಳ ಬಗ್ಗೆ ಸಹಾಯ ಮಾಡಿದರು. ಅದರ ನಂತರ ಹಿಂದೂ ಜನಜಾಗೃತಿ ಸಮಿತಿಯ ಸಭೆಯ ಪೂರ್ವತಯಾರಿಯ ಸಭೆಗೆ ಅನೇಕ ಜನರ ಉಪಸ್ಥಿತಿಯಿರುವುದು ಎಂಬ ನಿರೀಕ್ಷೆಯಿತ್ತು; ಆದರೆ ಪ್ರತ್ಯಕ್ಷದಲ್ಲಿ ಅಲ್ಪ ಉಪಸ್ಥಿತಿಯಿತ್ತು. ಆಗ ಕೆಲವು ಜನರು ‘ನಿಮ್ಮೊಂದಿಗಿದ್ದ ಸಂಘದ ಮುಖಂಡರು ಸಮಿತಿಯ ಸಭೆಗೆ ಹೋಗಬೇಡಿ’, ಎಂದು ಹೇಳುತ್ತಿದ್ದಾರೆ’ ಎಂದರು. ಆದರೆ ಆ ವ್ಯಕ್ತಿಯು ಕಾರ್ಯಕರ್ತರೊಂದಿಗಿರುವಾಗ ಮಾತನಾಡುವಾಗ ಎಂದೂ ವಿರೋಧಿಸಲಿಲ್ಲ. ವಿಶೇಷವೆಂದರೆ ಅವರು ಇಂದೂ ಸಹಾಯ ಮಾಡುತ್ತಿದ್ದಾರೆ ! (ಇಂತಹ ವ್ಯಕ್ತಿಯೆಂದರೆ ‘ಬೂದಿ ಮುಚ್ಚಿದ ಕೆಂಡದಂತೆ’ ಆಗಿದ್ದಾರೆ. ‘ಗೋಮುಖ ವ್ಯಾಘ್ರಗಳಂತೆ’ ಇಂಥಹವರಿಂದ ಸಮಿತಿಯ ಕಾರ್ಯಕರ್ತರು ಸ್ವಲ್ಪ ದೂರವೇ ಇರಬೇಕು. - ಸಂಕಲನಕಾರರು)

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ!
ಸಂಘ ಪರಿವಾರದಲ್ಲಿನ ಎಲ್ಲ ಸಂಘಟನೆಗಳ ಕಾರ್ಯದ ಬಗ್ಗೆ ಸನಾತನಕ್ಕೆ ಅತೀವ ಆದರವಿದೆ. ಆದರೂ ಕೆಲವು ಬೆರಳೆಣಿಕೆಯಷ್ಟು ಕಾರ್ಯಕರ್ತರಿಂದ ಹಿಂದೂ ಸಂಘಟನೆಗೆ ಹಾನಿಯಾಗಬಾರದು ಹಾಗೂ ಸಂಘಪರಿವಾರದ ಕಾರ್ಯಕರ್ತರಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಗಳ ಅಪಪ್ರಚಾರಕ್ಕೆ ಸಂಬಂಧಿಸಿದಂತೆ ಧರ್ಮಾಭಿಮಾನಿ ಹಿಂದೂಗಳಿಗೆ ಎರಡೂ ಸಂಘಟನೆಗಳ ಅಭಿಪ್ರಾಯವು ತಿಳಿಯಬೇಕು ಹಾಗೂ ಸಂಘ ಪರಿವಾರದ ವರಿಷ್ಠ ನೇತಾರರು ಈ ಕಾರ್ಯಕರ್ತರಿಗೆ ತಿಳಿಸಿ ಹೇಳಬೇಕು ಎಂಬ ಏಕೈಕ ಉದ್ದೇಶದಿಂದ ಈ ವೃತ್ತಾಂತವನ್ನು ಇಲ್ಲಿ ಕೊಡುತ್ತಿದ್ದೇವೆ. ಇದರಲ್ಲಿ ಸಂಘ ಪರಿವಾರದ ಮಾನಹಾನಿ ಮಾಡುವ ಯಾವುದೇ ಉದ್ದೇಶವಿಲ್ಲ.ಸಂಘ ಪರಿವಾರದ ಬಗ್ಗೆ ಒಳ್ಳೆಯ ಮತ್ತು ಕೆಟ್ಟ ಅನುಭವಗಳನ್ನು ತಿಳಿಸಿ !
ಸಂಘ ಪರಿವಾರದ ಕೆಲವು ಕಾರ್ಯಕರ್ತರಿಂದ ಮತ್ತು ಸ್ವಯಂಸೇವಕರಿಂದ ಕೆಲವು ಕಡೆಗಳಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಇವುಗಳ ಕಾರ್ಯದಲ್ಲಿ ಅಡಚಣೆ ತರಲಾಗುತ್ತದೆ. ಆದರೆ ಇನ್ನು ಕೆಲವು ಸ್ಥಳಗಳಲ್ಲಿ ಅವರು ಇವೆರಡು ಸಂಘಟನೆ ಗಳಿಗೆ ಸಹಾಯವನ್ನೂ ಮಾಡುತ್ತಿದ್ದಾರೆ. ಇಂತಹ ಅನೇಕ ಕಾರ್ಯಕರ್ತರಿಗೆ ಮತ್ತು ಸ್ವಯಂಸೇವಕರಿಗೆ ಸನಾತನ ಸಂಸ್ಥೆ ಮತ್ತು ಸಮಿತಿಯು ಸಮಾಜದಲ್ಲಿ ಪ್ರಸಾರ ಮಾಡುತ್ತಿರುವಾಗ ಅವರ ಕಾರ್ಯದಲ್ಲಿ ಸಂಘ ಪರಿವಾರದ ಕೆಲವು ಕಾರ್ಯಕರ್ತರಿಂದ ಆಗುತ್ತಿರುವ ವಿರೋಧವು ಒಪ್ಪಿಗೆಯಾಗುವುದಿಲ್ಲ. ಆದರೂ ಅವರು ಆದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಸಂಘ ಪರಿವಾರದ ಈ ಕೆಲವು ಕಾರ್ಯಕರ್ತರ ಮತ್ತು ಮುಖಂಡರ ಈ ಅವಿವೇಕಿ ಭೂಮಿಕೆಯಿಂದ ಹಿಂದೂ ಸಂಘಟನೆಗಳ ಕಾರ್ಯಕ್ಕೆ ಹಾನಿಯಾಗುತ್ತಿದೆ. ಅದರ ಬಗ್ಗೆ ಇತರ ವರಿಷ್ಟ ಮುಖಂಡರು ವಿಚಾರ ಮಾಡಬೇಕು ಹಾಗೂ ಸನಾತನ ಮತ್ತು ಸಮಿತಿಯ ಭೂಮಿಕೆಯು ಸಂಘದ ವರಿಷ್ಠ ಮುಖಂಡರು ಮತ್ತು ಧರ್ಮಾಭಿಮಾನಿಗಳಿಗೆ ತಿಳಿಯಬೇಕು, ಎಂಬುದಕ್ಕಾಗಿ ವಿವಿಧ ಸ್ಥಳಗಳಲ್ಲಿ ಸಂಘ ಪರಿವಾರವು ಮಾಡಿದ ವಿರೋಧ ಮತ್ತು ಸಹಾಯದ ಮಾಹಿತಿಯನ್ನು ನೀಡುವ ಲೇಖನಮಾಲಿಕೆಯನ್ನು ಪ್ರಾರಂಭಿಸಿದ್ದೇವೆ. ಯಾವ ಹಿಂದುತ್ವವಾದಿಗಳಿಗೆ ಈ ಬಗ್ಗೆ ಸಂಘದ ಒಳ್ಳೆಯ ಮತ್ತು ಕೆಟ್ಟ ಅನುಭವ ಬಂದಿದ್ದರೆ ಅವರು ಅದನ್ನು ಸಮೀಪದ ‘ಸನಾತನ ಪ್ರಭಾತ’ದ ಕಾರ್ಯಾಲಯಕ್ಕೆ ಕಳುಹಿಸಬೇಕು.
No comments:
Post a Comment