ಹಿಂದೂಗಳನ್ನು ಜೀವಂತ ಸುಡುವ ಷಡ್ಯಂತ್ರ

ಒಂಬತ್ತು ವರ್ಷಗಳ ಹಿಂದೆ ಗುಜರಾತಿನ ಗೋಧ್ರಾ ಸಮೀಪ ರೈಲು ನಿಲ್ದಾಣದ ಬಳಿ ಸಾಬರಮತಿ ಎಕ್ಸ್‌ಪ್ರೆಸ್ ರೈಲನ್ನು ತಡೆದು ಒಂದು ಬೋಗಿಯಲ್ಲಿದ್ದ ೫೯ ಪ್ರಯಾಣಿಕರ ಸಜೀವ ದಹನ ಮಾಡಲಾಯಿತು. ಅವರು ಕರಸೇವಕರಿದ್ದರು ಮತ್ತು ಅಯೋಧ್ಯೆಯಿಂದ ಪ್ರಭು ಶ್ರೀರಾಮ ಚಂದ್ರನ ಸೇವೆಯನ್ನು ಮಾಡಿ ಮನೆಗೆ ಮರಳುತ್ತಿದ್ದರು. ಬೋಗಿಯ ಮೇಲೆ ಒಳಹೊರಗಿನಿಂದ ಪೆಟ್ರೋಲನ್ನು ಸುರಿಯಲಾಯಿತು. ಡಬ್ಬಿಯನ್ನು ಮುಚ್ಚಿ ಬೆಂಕಿ ಹಚ್ಚಲಾಯಿತು.

ಸಂಪೂರ್ಣ ವಾತಾವರಣವು ಆಕ್ರಂದ ಮತ್ತು ಆಕ್ರೋಶದಿಂದ ತುಂಬಿಹೋಯಿತು. ಆದರೆ ಯಾರಿಗೂ ದಯೆ ಬರಲಿಲ್ಲ; ಏಕೆಂದರೆ ಆಕ್ರಂದನ ಮಾಡುವವರು ಹಿಂದೂಗಳಾಗಿದ್ದರು ಮತ್ತು ಸುಡುವವರು ಧರ್ಮಾಂಧರಾಗಿದ್ದರು. ಆದರೂ ಅಲ್ಪಸ್ವಲ್ಪ ಮಟ್ಟಿಗೆ ಪರಿಣಾಮವಾಯಿತು. ಗುಜರಾತಿನಲ್ಲಿ ದಂಗೆ ಭುಗಿಲೆದ್ದಿತು. ಧರ್ಮಾಂಧರೊಂದಿಗೆ ಯಾವ ಭಾಷೆಯಲ್ಲಿ ಮಾತನಾಡಿದರೆ ಅವರೊಂದಿಗೆ ವ್ಯವಹರಿಸಬಹುದು ಎನ್ನುವುದನ್ನು ಹುಡುಕುವ ವಿಷಯದಲ್ಲಿ ಹಿಂದೂಗಳು ತಮ್ಮ ಮಿತಿಯ ಬಗ್ಗೆ ಉದಾಸೀನರಾಗಿದ್ದರು. ಈ ಉದಾಸೀನತೆಯನ್ನು ತ್ಯಜಿಸಬೇಕು ಮತ್ತು ಪ್ರಭಾವಿ ಸಂಪರ್ಕ ಮಾಧ್ಯಮದ ಶೋಧದಲ್ಲಿ ಹೊರ ಬೀಳಬೇಕು ಎಂದು ಗುಜರಾತಿ ಜನರು ನಿರ್ಧರಿಸಿದರು. ಗುಜರಾತಿ ಹಿಂದೂಗಳೆಂದರೆ ತೀರ ಮೆತ್ತಗಿನವರಲ್ಲವೆನ್ನುವುದು ಅನುಭವಕ್ಕೆ ಬಂದಿತು. ಅರ್ಥಾತ್ ಗಾಂಧಿಯವರ ಗುಜರಾತ ಜನತೆಯು ಪ್ರತೀಕಾರಕ್ಕೆ ಸಿದ್ಧವಾಯಿತು. ಇದು ಹಿಂದೀ ರಾಷ್ಟ್ರವಾದಿ ವಿಚಾರವಂತರಿಗೆ ಇಷ್ಟವಾಗಲಿಲ್ಲ. ಅವರು ಗುಜರಾತಿನಲ್ಲಿ ಸರಕಾರ ಬೆಂಬಲಿತ ಹಿಂದೂ ಭಯೋತ್ಪಾದನೆಯ ಬಗ್ಗೆ ಗುಲ್ಲೆಬ್ಬಿಸಲಾರಂಭಿಸಿದರು. ಈ ವಿಚಾರವಂತರು ಇಷ್ಟಕ್ಕೇ ನಿಲ್ಲಲಿಲ್ಲ. ಗುಜರಾತಿನ ಹಿಂದೂಗಳ ಪ್ರತಿಕ್ರಿಯೆಯು ಭಯೋತ್ಪಾದನೆ ಯಾಗಿರಲಿಲ್ಲ; ಆದರೆ ಅದು ಭಯೋತ್ಪಾದನೆಯೇ ಆಗಿದೆ ಎಂದು ಜಗತ್ತಿಗೆ ಸಾರಿ ಸಾರಿ ಹೇಳುವ ಕಾರ್ಯಕ್ರಮವನ್ನು ಅವರು ಆರಂಭಿಸಿದರು. ಸಾಬರಮತಿ ಎಕ್ಸ್‌ಪ್ರೆಸ್‌ನ ಹತ್ಯಾಕಾಂಡವು ಭಯೋತ್ಪಾದನೆಯಾಗಿತ್ತು. ಆದರೆ ಅದು ಭಯೋತ್ಪಾದನೆಯಾಗಿರದೇ ಅದೊಂದು ಅಪಘಾತವಾಗಿತ್ತು ಎಂದು ಹೇಳುವ ಯೋಜನಾಬದ್ಧ ಆಂದೋಲನವನ್ನು ಈ ವಿಚಾರವಂತರು ಆರಂಭಿಸಿದರು. ಈ ಬಗ್ಗೆ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಖಟ್ಲೆಯ ತೀರ್ಪು ಇತ್ತೀಚೆಗೆ ಹೊರ ಬಿತ್ತು ಮತ್ತು ಆ ಹತ್ಯಾಕಾಂಡವೆಂದರೆ ಯೋಜನಾಬದ್ಧವಾಗಿ ರೂಪಿಸಿದ ಮತ್ತು ಕಾರ್ಯರೂಪಕ್ಕೆ ತಂದ ಷಡ್ಯಂತ್ರವಾಗಿತ್ತು ಎಂದು ತೀರ್ಪು ನೀಡಿತು. ಇದು ಹಿಂದೂಗಳಿಗೆ ಮತ್ತು ಎಲ್ಲ ನ್ಯಾಯಪ್ರಿಯ ಜನರಿಗೆ ಸಮಾಧಾನವನ್ನು ನೀಡುವ ವಿಷಯವಾಗಿದೆ. ಇದರ ನಿಷ್ಕರ್ಷವೆಂದರೆ, ಹಿಂದೂಗಳನ್ನು ಜೀವಂತ ಸುಡಲು ಕುತಂತ್ರ ರಚಿಸಿ ಅದನ್ನು ಕ್ರೂರವಾಗಿ ಕಾರ್ಯರೂಪಕ್ಕೆ ತರುವವರು ಪಾಕಿಸ್ತಾನ ದಲ್ಲಿ ಅಥವಾ ಬಾಂಗ್ಲಾದೇಶದಲ್ಲಿ ಅಷ್ಟೇ ಅಲ್ಲ; ಹಿಂದೂಸ್ಥಾನದಲ್ಲಿಯೂ ಇದ್ದಾರೆ ಮತ್ತು ಅವರಿಗೆ ವಿಚಾರವಂತರ ಬೆಂಬಲವಿದೆ. ಇಂತಹ ಒಳಸಂಚಿನಲ್ಲಿ ನಿರಪರಾಧಿ ಹಿಂದೂಗಳು ಪ್ರಾಣವನ್ನು ಕಳೆದುಕೊಂಡರು. ಆದರೂ ಅವರು ಅದನ್ನು ಕೋಮು ಸೌಹಾರ್ದಕ್ಕಾಗಿ ನಡೆದ ಪವಿತ್ರ ಬಲಿದಾನವೆಂದು ತಿಳಿದುಕೊಳ್ಳಬೇಕು; ಆದರೆ ಯಾವುದೇ ಪರಿಸ್ಥಿತಿಯಲ್ಲಿ ಪ್ರತೀಕಾರವನ್ನು ಮಾಡಬಾರದು, ಎಂದು ಹಿಂದೂಗಳಿಗೆ ದಬಾಯಿಸಿ ಹೇಳುವ ವಿಚಾರವಂತರು ಅಸ್ತಿತ್ವದಲ್ಲಿದ್ದಾರೆ. ಆದರೆ ಈಗಲೂ ಈ ದೇಶವು ಹಿಂದೂ ಬಹುಸಂಖ್ಯಾತವಾಗಿದೆ ಮತ್ತು ಅದರಿಂದಾಗಿ ಇಲ್ಲಿನ ನ್ಯಾಯಾಂಗವು ಇಂದಿಗೂ ಹೆಚ್ಚಿನ ಪ್ರಮಾಣದಲ್ಲಿ ನಿಷ್ಪಕ್ಷಪಾತವಾಗಿದೆ. ಕಾಂಗ್ರೆಸ್ ಸಂಸ್ಕೃತಿ ಹೇಳಿದಂತೆ ನಿರ್ಣಯವನ್ನು ಕೊಡುವ ಬಂಧನವು ನಮ್ಮ ಮೇಲಿದೆ, ಎಂದು ನ್ಯಾಯಮೂರ್ತಿಗಳು ಒಪ್ಪುತ್ತಿಲ್ಲ ಎನ್ನುವುದು ನಮ್ಮ ದೊಡ್ಡ ಭಾಗ್ಯವಾಗಿದೆ. ಹಿಂದೂಗಳು ಇದರಿಂದ ಪಾಠವನ್ನು ಕಲಿಯುವಂತಿದೆ. ಮನೆಯಿಂದ ಹೊರಬಿದ್ದ ನಂತರ ಅವರು ಅತ್ಯಂತ ಜಾಗರೂಕರಾಗಿರಬೇಕು ಮತ್ತು ಯಾರ ಮೇಲೂ ಹುಚ್ಚು ವಿಶ್ವಾಸ ತೋರಿಸಬಾರದು. ಹಿಂದೂಗಳ ಅಳಲನ್ನು ಹತ್ತಿಕ್ಕಲು ಎಲ್ಲೆಡೆಗಳಿಂದ ಪ್ರಯತ್ನಗಳಾಗುತ್ತಿವೆ. ಗೋಧ್ರಾದ ಬೋಗಿಯನ್ನು ಒಳಗಿನ ಜೀವಂತ ಪ್ರವಾಸಿಗರೊಂದಿಗೆ ಸುಡುವುದು ಭಯದ ವಾತಾವರಣವನ್ನು ಹರಡಿ ಹಿಂದೂಗಳನ್ನು ರಾಮನಿಂದ ದೂರ ಕೊಂಡೊಯ್ಯುವ ಪ್ರಯತ್ನವಾಗಿದೆ. ಒಳಸಂಚನ್ನು ಮಾಡಿ ಇಂತಹ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸುದೈವ ದಿಂದ ನ್ಯಾಯಾಂಗವು ತನ್ನ ಕರ್ತವ್ಯವನ್ನು ಪರಿಶುದ್ಧವಾಗಿ ಪಾಲಿಸಿದ್ದರಿಂದ ತಮ್ಮನ್ನು ಯಾರಾದರೂ ರಕ್ಷಕರಿದ್ದಾರೆ ಎಂಬ ಸಮಾಧಾನವು ಹಿಂದೂಗಳಿಗೆ ಸಿಕ್ಕಿದೆ. ಹಿಂದೂಗಳ ಕೂಗನ್ನು ಹತ್ತಿಕ್ಕಲು ತಮ್ಮ ಕೈಯಲ್ಲಿರುವ ಅಧಿಕಾರವನ್ನು ಅಪರಿಮಿತವಾಗಿ ಉಪಯೋಗಿಸುವ ನಿಖಿಲ ವಾಗಳೆಯಂತಹ ಸಂಪಾದಕರಿಗೆ ನ್ಯಾಯಾಲಯವು ಪರೋಕ್ಷವಾಗಿ ಕೆನ್ನೆಗೆ ಬಾರಿಸಿದೆ; ಆದರೆ ಈ ಜನರು ಎಷ್ಟು ಸೊಕ್ಕಿದ್ದಾರೆಂದರೆ ಅವರು ಬೇಗನೇ ಸುಧಾರಿಸುವ ಲಕ್ಷಣಗಳು ಕಾಣಿಸುವುದಿಲ್ಲ. - (ಸುಘೋಷ) 

No comments:

Post a Comment