ಕೇಂದ್ರೀಯ ಗುಪ್ತಚರ ದಳದಿಂದ ಹಿಂದೂ ಜನಜಾಗೃತಿ ಸಮಿತಿಯ...

ಕೇಂದ್ರೀಯ ಗುಪ್ತಚರ ದಳದಿಂದ
ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತನ ವಿಚಾರಣೆ!
ಸನಾತನ ಸಂಸ್ಥೆಯ ಸಾಧಕರ ವಿಚಾರಣೆಯ ನಂತರ ಈಗ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತನ ಬಗ್ಗೆ ಕೇಂದ್ರೀಯ ಗುಪ್ತಚರ ದಳವು ವಿಚಾರಣೆ ಮಾಡುತ್ತಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! - ಸಂಪಾದಕರು
ಇತ್ತೀಚೆಗೆ ಕೇಂದ್ರೀಯ ಗುಪ್ತಚರ ದಳದ ಅಧಿಕಾರಿಗಳು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತನೊಬ್ಬನ ಮನೆಗೆ ಹೋಗಿ ಹಿಂದೂ ಧರ್ಮ ಜಾಗೃತಿ ಸಭೆಯ ಬಗ್ಗೆ ತನಿಖೆ ನಡೆಸಿದರು. ಆಗ ಅಧಿಕಾರಿ ಹಾಗೂ ಕಾರ್ಯಕರ್ತನ ನಡುವಿನ ಸಂಭಾಷಣೆಯನ್ನು ಇಲ್ಲಿ ನೀಡುತ್ತಿದ್ದೇವೆ.

ಅಧಿಕಾರಿ : ಸಭೆಯಲ್ಲಿ ಎಷ್ಟು ಜನ ಉಪಸ್ಥಿತರಿದ್ದರು ?
ಕಾರ್ಯಕರ್ತ : ೧೫೦ ರಿಂದ ೧೮೦
ಅಧಿಕಾರಿ : ಭಾಷಣದಲ್ಲಿ ಯಾರೆಲ್ಲ ಮಾತನಾಡಿದರು? (ಓರ್ವ ಕಾರ್ಯಕರ್ತನ ಹೆಸರು ಹೇಳುತ್ತಾ) ಅವರು ಬರುತ್ತಾರೆಂದು  ಬರಲಿಲ್ಲವೇ?
(ಕಾರ್ಯಕರ್ತನು ಮಾರ್ಗದರ್ಶನ ಮಾಡುವ ವಕ್ತಾರನ ಹೆಸರು ಹೇಳಿದನು.)
ಅಧಿಕಾರಿ : ಮೊದಲು ಯಾರು ಮಾತನಾಡಿದರು? ಏನು ಮಾತನಾಡಿದರು?
(ಕಾರ್ಯಕರ್ತನು ಯಾರು ಮೊದಲು ಮಾತನಾಡಿದರು ಮತ್ತು ಏನು ಮಾತನಾಡಿದರು ಎಂಬುದನ್ನು ಹೇಳಿದನು)
ಅಧಿಕಾರಿ : ನಂತರ ಯಾರು ಮಾತನಾಡಿದರು ?
ಕಾರ್ಯಕರ್ತ : ನಂತರ ನಾನು ಮಾತನಾಡಿದೆನು. ಮತಾಂತರ ತಡೆಯುವುದಕ್ಕಾಗಿ...
ಅಧಿಕಾರಿ (ಕಾರ್ಯಕರ್ತನ ಮಾತನ್ನು ಮಧ್ಯದಲ್ಲಿ ತಡೆಯುತ್ತಾ) : ಬಲವಂತವಾಗಿ ಮತಾಂತರ ಮಾಡುವುದರ ಬಗ್ಗೆಯಾ?
ಕಾರ್ಯಕರ್ತ : ಅಲ್ಲ ಮತಾಂತರ ತಡೆಯುವ ಬಗ್ಗೆ. ನಾವೇ ಧರ್ಮಶಿಕ್ಷಣ ಪಡೆದರೆ ಈ ಮತಾಂತರ ನಿಲ್ಲಿಸಲು ಸಾಧ್ಯ. ಇವೆಲ್ಲ ವಿಚಾರವನ್ನು ತಿಳಿಸಲಾಯಿತು.
ಅಧಿಕಾರಿ : ಹಾಗಾದರೆ ಭಯೋತ್ಪಾದನೆಯ ಬಗ್ಗೆ ಏನೂ ಹೇಳಲಿಲ್ಲವೇ ?
ಕಾರ್ಯಕರ್ತ : ಆ ಬಗ್ಗೆ ಸ್ವಲ್ಪ ವಿಚಾರ ತಿಳಿಸಲಾಯಿತು. ಸರಕಾರವು ಭಯೋತ್ಪಾದಕರಿಗೆ ತಕ್ಕ ಶಿಕ್ಷೆ  ನೀಡಿದರೆ ಭಯೋತ್ಪಾದನೆ ನಿಲ್ಲಿಸಬಹುದು ಎಂಬ ಬಗ್ಗೆ ತಿಳಿಸಲಾಯಿತು. ನೀವೇಕೆ ಹೀಗೆ ವಿಚಾರಣೆ ಮಾಡುತ್ತಿದ್ದೀರಿ?
ಅಧಿಕಾರಿ : ಇಲ್ಲ ನಾವು ಹಿಂದೂ ಸಂಘಟನೆಗಳ ಸಭೆಯ ಬಗ್ಗೆ ವಿಷಯವನ್ನು ಸಂಗ್ರಹಿಸುವುದು ನಮ್ಮ ಜವಾಬ್ದಾರಿಯಾಗಿದೆ. (ಹಿಂದೂ ಸಂಘಟನೆಯ ಸಭೆಗಳ ಮಾಹಿತಿಯನ್ನು ಸಂಗ್ರಹಿಸುವ ತನಿಖಾ ಸಂಸ್ಥೆಗಳು ಎಂದಾದರೂ ಧರ್ಮಾಂಧರ ಸಭೆಗಳ ಮಾಹಿತಿಯನ್ನು ಸಂಗ್ರಹಿಸಿವೆಯೇ? -  ಸಂಪಾದಕರು)
ಕಾರ್ಯಕರ್ತ : ಹಾಗಾದರೆ ಎಲ್ಲ ಸಂಘ ಸಂಸ್ಥೆಯ ಬಗ್ಗೆ ಕೇಳುವಿರೇ ?
ಅಧಿಕಾರಿ : ಹೌದು ಮುಸಲ್ಮಾನರ ಬಗ್ಗೆ, ಕ್ರೈಸ್ತರ ಬಗ್ಗೆಯೂ ವಿಚಾರಣೆ ಮಾಡುವವರಿದ್ದೇವೆ. (ತನಿಖಾ ಸಂಸ್ಥೆಗಳ ಮತಿನಲ್ಲೇ ಮನೆ ಕಟ್ಟುವ ವೃತ್ತಿ ಹಿಂದೂಗಳಿಗೆ ತಿಳಿದಿದೆ. - ಸಂಪಾದಕರು) ನಾನು ಮೊದಲು ರಾ.ಸ್ವ.ಸಂಘದಲ್ಲಿದ್ದೆನು. ನನಗೆ ಬಜರಂಗ ದಳದವರು, ವಿಶ್ವ ಹಿಂದೂ ಪರಿಷತ್ತು, ಭಾಜಪದವರು ಎಲ್ಲ ಗೊತ್ತು. ನೀವೇನೂ ತಿಳಿದುಕೊಳ್ಳಬೇಡಿರಿ. (ವಿನಾಕಾರಣ ಹಿಂದುತ್ವವಾದಿಗಳ ತನಿಖೆ ಮಾಡುವುದು ಮತ್ತು ಮೇಲಿಂದ ಅದಕ್ಕೆ ತೇಪೆ ಹಚ್ಚುವುದು, ಇದು ತನಿಖಾ ದಳಕ್ಕೆ ಶೋಭಿಸುವುದೇ ? - ಸಂಪಾದಕರು)
ಕಳೆದ ಆರು ತಿಂಗಳ ಹಿಂದೆ ಇದೇ ಅಧಿಕಾರಿಯು ಸಮಿತಿಯ ಎಲ್ಲ ಕಾರ್ಯದ ಬಗ್ಗೆ, ಸಮಿತಿಯ ಪ್ರಮುಖರು ಯಾರು, ಸಮಿತಿಯು ಏನೂ ಮಾಡುತ್ತಿದೆ? ಮುಂತಾದ ಮಾಹಿತಿಯನ್ನು ಪಡೆದು ಕೊಂಡರು. (ಹಿಂದೂಗಳನ್ನು ಭಯೋತ್ಪಾದ ಕರೆಂಬಂತೆ ಅವರ ಸಂಘಟನೆಗಳನ್ನು ಮೇಲಿಂದ ಮೇಲೆ ತನಿಖೆ ಮಾಡುವ ಹಿಂದೂದ್ರೋಹಿ ತನಿಖಾ ಸಂಸ್ಥೆಗಳು ! - ಸಂಪಾದಕರು)



ರಾಷ್ಟ್ರ ಹಾಗೂ ಧರ್ಮಪ್ರೇಮಿಗಳ ವಿಚಾರಣೆಯನ್ನು ಮಾಡಿದಂತೆ ಭಯೋತ್ಪಾದಕರ ವಿಚಾರಣೆಯನ್ನು ಮಾಡಿದ್ದರೆ ಹಾಗೂ ಅವರ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾಗಿ ನಿಗಾ ಇಟ್ಟಿದ್ದರೆ ಭಾರತವು ಭಯೋತ್ಪಾದನೆ ಹಾಗೂ ನಕ್ಸಲ್‌ವಾದದಿಂದ ಎಂದೋ ಮುಕ್ತವಾಗುತ್ತಿತ್ತು !

No comments:

Post a Comment