ಪೂ. ರಾಜೇಂದ್ರದಾದಾರಿಂದ ಕಲಿಯಲು ಸಿಕ್ಕಿದ ಅಂಶಗಳು ಹಾಗೂ ತನ್ನಲ್ಲಾದ ಬದಲಾವಣೆ
೧. ಸಾಧಕರ ತಪ್ಪುಗಳ ಬಗ್ಗೆ ಗಾಂಭೀರ್ಯ ಮೂಡಿಸಿ ಪ್ರೀತಿಯಿಂದ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಲೂ ಹೇಳುವುದು
ಪೂಜ್ಯದಾದಾರವರು ಹಿಂದೂ ಧರ್ಮ ಜಾಗೃತಿ ಸಭೆಯಲ್ಲಾದ ತಪ್ಪುಗಳ ಬಗ್ಗೆ ಹೇಳುವಾಗ ತುಂಬಾ ಗಂಭೀರವಾಗಿದ್ದರೂ ನಾವು ಹೇಳಿದ ತಪ್ಪಿನ ಸ್ಪಷ್ಟೀಕರಣ ಬಗ್ಗೆ ಕೇಳಿ ನಮ್ಮ ನ್ಯೂನತೆಯನ್ನು ತಿಳಿಸಿ ಕೊಡುತ್ತಿದ್ದರು. ಅಲ್ಲದೇ ತಪ್ಪಿಗೆ ತಕ್ಕ ಪ್ರಾಯಶ್ಚಿತ್ತವನ್ನು ತಿಳಿಸಿಕೊಟ್ಟರು. ಇಷ್ಟೇ ಅಲ್ಲದೇ ಪ್ರಾಯಶ್ಚಿತ್ತವನ್ನು ಬರೆದುಕೊಂಡು ಆ ಬಗ್ಗೆ ಸತತ ಗಮನವಿಡಲು ಹೇಳಿದಾಗ ಕೃತಜ್ಞತೆ ವ್ಯಕ್ತವಾಯಿತು.
೨. ಪೂ. ದಾದಾರವರು ಹೇಳಿದ ಸಾಧನೆಯ ಅಂಶಗಳು
ಅ. ಧ್ಯೇಯವಿದ್ದರೆ ಮಾತ್ರ ಕಾರ್ಯಕ್ಷಮತೆ ಹೆಚ್ಚಾಗುತ್ತದೆ ಮತ್ತು ಅದರಿಂದ ಉತ್ಸಾಹ ವೃದ್ಧಿಯಾಗುತ್ತದೆ.
ಆ. ನನ್ನ ಪ್ರಗತಿಯಾಗದಿದ್ದರೆ ಅದಕ್ಕೆ ನಾನೇ ಜವಾಬ್ದಾರನಾಗಿದ್ದೇನೆ.
ಇ. ಸ್ವಭಾವದೋಷ ನಿರ್ಮೂಲನೆಯ ಪಟ್ಟಿಯನ್ನು ತುಂಬಾ ತಳಮಳದಿಂದ ಬರೆದರೆ ಭಾವ ಜಾಗೃತಿಯಾಗುತ್ತದೆ.
ಈ. ಸ್ವಭಾವದೋಷ ಮತ್ತು ಅಹಂನಿರ್ಮೂಲನೆಗೆ ಶೇ. ೬೦ ಮಹತ್ವವಿದೆ.
ಇ. ಸ್ವಭಾವದೋಷ ನಿರ್ಮೂಲನೆಯ ಪಟ್ಟಿಯನ್ನು ತುಂಬಾ ತಳಮಳದಿಂದ ಬರೆದರೆ ಭಾವ ಜಾಗೃತಿಯಾಗುತ್ತದೆ.
ಈ. ಸ್ವಭಾವದೋಷ ಮತ್ತು ಅಹಂನಿರ್ಮೂಲನೆಗೆ ಶೇ. ೬೦ ಮಹತ್ವವಿದೆ.
೩. ಆಚರಣೆಗೆ ತಂದಾಗ ತನ್ನಲ್ಲಾದ ಬದಲಾವಣೆ
ಅ. ಪರೇಚ್ಛೆಯಿಂದ ವರ್ತಿಸಲು ಪ್ರಯತ್ನವಾಗುತ್ತಿತ್ತು.
ಆ. ಪ್ರಾರ್ಥನೆ ಹೆಚ್ಚು ಆಗುತ್ತಿದೆ. ಜೊತೆಗೆ ಭಾವಜಾಗೃತಿಗಾಗಿ ಶ್ರೀಕೃಷ್ಣನ ಜೊತೆ ಅನುಸಂಧಾನ, ಉದಾ. ಊಟ ಮಾಡುವಾಗ ಅವನಿಗೆ ಮೊದಲ ತುತ್ತನ್ನು ತಿನ್ನಿಸುವುದು ಈ ರೀತಿ ಗುರುಕೃಪೆಯಿಂದ ಪ್ರಯತ್ನಗಳು ಆಗುತ್ತಿದ್ದವು.
ಇ. ಸಕಾರಾತ್ಮಕ ವಿಚಾರ ಮಾಡುವ ಪ್ರಯತ್ನ ಆಗತೊಡಗಿತು.
ಈ. ಶೇ. ೬೦ ಮಟ್ಟ ಮಾಡುವ ಗುರಿ ದೃಢವಾಗಿದೆ.
ಉ. ಶಿಸ್ತು ಮತ್ತು ಪ್ರೇಮಭಾವದಲ್ಲಿ ಮೊದಲಿಗಿಂತ ಹೆಚ್ಚಿನ ಪ್ರಯತ್ನ ಆಗುತ್ತಿದೆ.

೪. ಸ್ವಂತ ತಪ್ಪಿನಿಂದ ಕಲಿತ ಅಂಶಗಳು
ಅ. ಪೂಜ್ಯ ದಾದಾರವರ ಎದುರಿಗೆ ಓರ್ವ ಹಿರಿಯ ಸಾಧಕರ ಎಲ್ಲ ತಪ್ಪುಗಳನ್ನು ಅತೀ ಭಾವನಾಪ್ರಧಾನತೆ, ಹಿಂಜರಿಕೆ ಹಾಗೂ ಭಯ ಈ ದೋಷಗಳಿಂದ ನಾನು ಹೇಳಲಿಲ್ಲ. ಪೂಜ್ಯ ದಾದಾರವರು ಪುನಃ ಪುನಃ ಕೇಳಿದಾಗಲೂ ಹೇಳಲಿಲ್ಲ. ಆದರೆ ಮಾರನೇ ದಿನ ನನ್ನ ತಪ್ಪಿನ ಬಗ್ಗೆ ಅರಿವಾಗಿ ಅದನ್ನು ಪೂ. ದಾದಾರಿಗೆ ದೂರವಾಣಿಯಲ್ಲಿ ಹೇಳಿದೆನು. ಇದರಿಂದ ಇನ್ಮುಂದೆ ತಪ್ಪನ್ನು ಹೇಳುವ ಪ್ರಸಂಗ ಬಂದಾಗ ಅದರಲ್ಲೂ ಸಂತರ ಮುಂದೆ ಯಾವಾಗಲೂ ಪೂರ್ಣ ಸತ್ಯವನ್ನು ನಿರ್ಭಯವಾಗಿ ಹೇಳಲೇಬೇಕು ಎಂಬುದನ್ನು ಕಲಿಯಲು ಸಿಕ್ಕಿತು.
ಆ. ಪ್ರಮುಖ ಸಾಧಕರು ಈ ರೀತಿ ಬರೆದು ಕೊಡಲು ಹೇಳಿದಾಗ ಗಂಭೀರವಾಗಿ ಪ್ರಯತ್ನಿಸಿಲ್ಲ ಎಂಬುದು ಗೊತ್ತಾಯಿತು. ಇವತ್ತಿನಿಂದ ಹೆಚ್ಚಿನ ಪ್ರಯತ್ನ ಮಾಡುತ್ತೇನೆ.
ಪೂಜ್ಯ ದಾದಾರವರ ಬಗ್ಗೆ ಎಷ್ಟೇ ಹೇಳಿದರೂ ಕಡಿಮೆಯೇ ಆಗಿದೆ. ಇಂತಹ ತುಚ್ಛಳನ್ನು ಗುರುತಿಸಿ ಈ ಲೇಖನವನ್ನು ಬರೆಯುವ ಅವಕಾಶವನ್ನು ಕೊಟ್ಟಿದ್ದಕ್ಕಾಗಿ ಕೃತಜ್ಞತೆಗಳು. ಈ ಲೇಖನದಿಂದ ಇತರ ಸಾಧಕರಿಗೆ ಪ್ರೇರಣೆ ದೊರೆತು ನಮ್ಮೆಲ್ಲರ ಸಾಧನೆ ಗುರುಗಳಿಗೆ ಅಪೇಕ್ಷಿತ ರೀತಿಯಲ್ಲಿ ಆಗಲಿ ಎಂಬುದೇ ಶ್ರೀಕೃಷ್ಣನಲ್ಲಿ ಪ್ರಾರ್ಥನೆ.
- ಸೌ. ಜಯಲಕ್ಷಿ ಧಾರವಾಡ ಉಪಕೇಂದ್ರ.

No comments:
Post a Comment