ವ್ಯಷ್ಟಿ ಸಾಧನೆ ಯಾರಿಗೆ ಆವಶ್ಯಕ!

‘ಪ್ರತಿಯೊಬ್ಬ ಸಾಧಕನಿಗೆ ‘ನನ್ನ ಆಧ್ಯಾತ್ಮಿಕ ಉನ್ನತಿಯಾಗಬೇಕು’ ಎಂದೆನಿಸುತ್ತದೆ. ಹೀಗೆನಿಸುವ ಶೇ. ೮೦-೯೦  ರಷ್ಟು ಸಾಧಕರು ತಮ್ಮ ಪ್ರಗತಿಗಾಗಿ ವ್ಯಷ್ಟಿ ಸಾಧನೆಯ ಅಡಿಪಾಯವನ್ನು ಭದ್ರ ಪಡಿಸುವುದು ಆವಶ್ಯಕವಾಗಿದೆ. ವ್ಯಷ್ಟಿ ಸಾಧನೆಯು ಭದ್ರವಾಗಿದ್ದರೆ ಸಮಷ್ಟಿಯ ಫಲನಿಷ್ಪತ್ತಿಯೂ ಹೆಚ್ಚಾಗುತ್ತದೆ. ‘ವ್ಯಕ್ತಿಗಳಷ್ಟು ಪ್ರಕೃತಿ ಮತ್ತು ಅಷ್ಟೇ ಸಾಧನಾ ಮಾರ್ಗಗಳು’ ಎಂಬ ಸಾಧನೆಯ ಮೂಲಭೂತ ಸಿದ್ಧಾಂತಕ್ಕನುಸಾರ ಶೇ. ೧೦-೨೦ ಸಾಧಕರು ಕೇವಲ ಸಮಷ್ಟಿ ಸಾಧನೆಯನ್ನು ಮಾಡಿಯೂ ಆಧ್ಯಾತ್ಮಿಕ ಉನ್ನತಿಯನ್ನು ಹೊಂದಬಹುದು.

ಕೆಲವರ ವಿಷಯದಲ್ಲಿ ಪೂರ್ವ ಜನ್ಮದ ಸಾಧನೆಯಿಂದ ವ್ಯಷ್ಟಿ ಸಾಧನೆಯ ಹಂತವು ಪೂರ್ಣವಾಗಿರುತ್ತದೆ. ಇಂತಹ ಸಾಧಕರು ವ್ಯಷ್ಟಿಯ ಸಂಗತಿಗಳನ್ನು ಪೂರೈಸದಿದ್ದರೂ ಸಮಷ್ಟಿ ಸಾಧನೆಯನ್ನು ಮಾಡಿ ಪ್ರಗತಿ ಹೊಂದಬಹುದು. ವ್ಯಷ್ಟಿ ಸಾಧನೆಯನ್ನು ಮಾಡಲು ಬರದಂತಹ ಸಾಧಕರು ಸತತ ಸಮಷ್ಟಿ ಸಾಧನೆ ಅಥವಾ ಇತರ ಯಾವುದೇ ಸಾಧನೆಯನ್ನು ಮಾಡಿ ಸತ್ ನಲ್ಲಿದ್ದರೆ ಅವರದ್ದೂ ಪ್ರಗತಿಯಾಗುವುದು’ - ಪೂ. ರಾಜೇಂದ್ರ ಶಿಂದೆ, ಬೆಂಗಳೂರು.

No comments:

Post a Comment