ಪ.ಪೂ.ಭಕ್ತರಾಜ ಮಹಾರಾಜರ ಬೋಧನೆಗಳು


ಅಯೋಗ್ಯ ವಿಚಾರ ಕಡಿಮೆಯಾಗುವುದು
ಸದ್ಯ (ಅಯೋಗ್ಯ ವಿಚಾರದಿಂದ) ವಾತಾವರಣ ಹಾಳಾಗಿರುವುದರಿಂದ ಶ್ವಾಸದೊಂದಿಗೆ ಕೆಟ್ಟ ವಿಚಾರಗಳೂ ಮನಸ್ಸಿಗೆ ಬರುತ್ತವೆ ಮತ್ತು ಮನೋವಿಕಾರ ಬರುತ್ತದೆ. ಅದರಂತೆ ಇತರ ವಿಚಾರಗಳೂ ಮನಸ್ಸಿಗೆ ಬರುತ್ತವೆ. ಶ್ವಾಸದೊಂದಿಗೆ ನಾಮಜಪಮಾಡುತ್ತಿರುವಾಗ ಇತರ ವಿಚಾರಗಳ ಪ್ರಮಾಣಗಳು ಕಡಿಮೆಯಾಗುತ್ತವೆ ಮತ್ತು ಅದರಿಂದ ವಿಶಿಷ್ಟ ಪ್ರಕಾರದ ಅನುಭವ ಬಂದಂತೆ ಜೀವಕ್ಕೆ ಭಾಸವಾಗುತ್ತದೆ.

ಅನುಭವ ಮತ್ತು ಬುದ್ಧಿ
ಗುರುಗಳು ಅನುಭವದಲ್ಲಿ ಮುಂದಿರುತ್ತಾರೆ ಮತ್ತು ಬುದ್ಧಿಯಿಂದ ಹಿಂದಿರುತ್ತಾರೆ.
ಭಾವಾರ್ಥ: ಇಲ್ಲಿ ‘ಅನುಭವ’ ಎಂಬ ಶಬ್ದವು ‘ಆಧ್ಯಾತ್ಮಿಕ ಅನುಭೂತಿ’ ಎಂಬ ಅರ್ಥದಲ್ಲಿ ಉಪಯೋಗಿಸಿದ್ದಾರೆ. ‘ಬುದ್ಧಿಯಲ್ಲಿ  ಹಿಂದೆ ಇರುತ್ತಾರೆ’ ಅಂದರೆ ಬುದ್ಧಿಯನ್ನು ಉಪಯೋಗಿಸುವುದಿಲ್ಲ; ಏಕೆಂದರೆ ಅವರ ಕಾರಣದೇಹವು ನಾಶವಾಗಿರುತ್ತದೆ,  ಅಂದರೆ ಬುದ್ಧಿಯ ಲಯವಾಗಿರುತ್ತದೆ.

ನಾಮಬೀಜ
ಬೀಜದ ಧರ್ಮವೇ ಉತ್ಪತ್ತಿಯಾಗಿದೆ. ಬೀಜವನ್ನು ಹಾಕಿದರೆ ಅದರ ವೃಕ್ಷವಾಗುತ್ತದೆ, ಅದರಂತೆ ನಾಮದ ಬೀಜ ಹಾಕಿದಾಗ ಸರ್ವಜ್ಞತೆ ಬರುತ್ತದೆ.

ನಾಮಜಪವನ್ನು ಎಲ್ಲಿ ಮಾಡಬೇಕು?
ಒಂದೇ ಸ್ಥಳದಲ್ಲಿ ಕುಳಿತು ನಾಮಜಪ ಮಾಡುವುದಕ್ಕಿಂತ ಎಲ್ಲ ಕೆಲಸಗಳನ್ನು ಮಾಡುತ್ತಿರುವಾಗ ನಾಮಜಪ ಮಾಡುವುದು, ಅತ್ಯಂತ ಶ್ರೇಷ್ಠ ಸ್ತರದ ಸಾಧನೆಯಾಗಿದೆ; ಏಕೆಂದರೆ ಅದರಲ್ಲಿ ಒಂದೆಂದರೆ ಸಾಧನೆ ಅಖಂಡವಾಗಿರುತ್ತದೆ ಮತ್ತು ಎರಡನೇಯದೆಂದರೆ ವ್ಯಕ್ತಿಯು ವ್ಯವಹಾರದ ಕೆಲಸ ಮಾಡುವಾಗ ಅಖಂಡ ನಾಮಜಪದಿಂದ ಮಾಯೆಯಲ್ಲಿದ್ದೂ ಇಲ್ಲದಂತಾಗುತ್ತದೆ. ಹೀಗೆ ಎಲ್ಲ ಸ್ಥಿತಿಯಲ್ಲಿಯೂ ಭಗವಂತನೊಂದಿಗೆ ಅನುಸಂಧಾನ ಸಾಧಿಸಬಹುದು. ಇದಕ್ಕೇ ‘ಸಹಜಸ್ಥಿತಿ’ಎಂದು ಹೇಳುತ್ತಾರೆ.

ನಿಜವಾದ ತಿಳುವಳಿಕೆ
‘ದೇವರನ್ನು ತಿಳಿದುಕೊಳ್ಳುವುದು ನಮ್ಮ ಬುದ್ಧಿಯ ಆಚೆಗಿದೆ’ ಎಂದು ಅರಿಯುವುದಕ್ಕೆ, ‘ತಿಳಿದುಕೊಳ್ಳುವುದು’ ಎನ್ನುತ್ತಾರೆ.

ನಾಮಜಪದ ಮಹತ್ವ
ವಾಣಿಯ ಶುದ್ಧಿ: ವ್ಯವಹಾರಿಕ ಮಾತಿನಿಂದ ವಾಣಿಯು, ಚಿತ್ತ ಶುದ್ಧಿಯಿಂದ ನಿವೃತ್ತವಾಗುತ್ತದೆ, ಅಂದರೆ ಅಶುದ್ಧವಾಗುತ್ತದೆ. ಅದು ಶುದ್ಧಿಯಾಗಲು ನಾಮಜಪ ಮಾಡಬೇಕು.

ಮನಸ್ಸಿನ ದುರ್ಬಲತೆ
ಮನಸ್ಸಿನ ದುರ್ಬಲತೆ ಇತರರ ದ್ವೇಷಕ್ಕೆ ಕಾರಣವಾಗುತ್ತದೆ.

ಮೃತಾವಸ್ಥೆ ಮತ್ತು ಚೈತನ್ಯಾವಸ್ಥೆ
ಧ್ಯಾನವೆಂದರೆ ಮೃತಾವಸ್ಥೆಯ ಅನುಭೂತಿಯನ್ನು ಪಡೆಯುವುದಾದರೆ, ನಾಮಜಪ ಮಾಡುವಾಗ ಚೈತನ್ಯದ ಅನುಭೂತಿಯು ಬರುತ್ತದೆ.

ಅದ್ವೈತದೆಡೆ ಪ್ರಯಾಣ
ಭಕ್ತಿಮಾರ್ಗದಿಂದ ನಾಮಜಪ ಮಾಡುವಾಗ ಭಾವದಿಂದ ಬಾಹ್ಯ ದೇವರ ದರ್ಶನವಾದರೂ, ದ್ವೈತವಿರುತ್ತದೆ. ತದ್ವಿರುದ್ಧ ಶ್ವಾಸದೊಂದಿಗೆ ನಾಮಜಪ ಮಾಡುತ್ತ ನಾಮದ ಮೇಲಿನ ಭಕ್ತಿಯಿಂದ ಬಾಹ್ಯ ದೇವರ ದರ್ಶನವಾಗದಿದ್ದರೂ ನಾಮಧಾರಕನು ಕೂಡಲೇ ಅದ್ವೈತದ ಕಡೆಗೆ ಹೋಗುತ್ತಾನೆ ಅಂದರೆ ನಾಮದೊಂದಿಗೆ ಏಕರೂಪನಾಗುತ್ತಾನೆ.

ಗುರುಗಳ ಆಶೀರ್ವಾದವೆಂದರೆ ತೆರಿಗೆಯಿಲ್ಲದ ಸಂಪಾದನೆ !


ಯಾವುದನ್ನು ಖರ್ಚು ಮಾಡಬೇಕೋ, 
ಅದನ್ನು ನೀವು ಸಂಗ್ರಹಿಸುತ್ತೀರಿ ಮತ್ತು ಯಾವುದನ್ನು 
ಸಂಗ್ರಹಿಸಬೇಕೋ ಅದನ್ನು ಖರ್ಚು ಮಾಡುತ್ತೀರಿ. ಅದನ್ನು ಬದಲಿಸಲು ಕಲಿಯಿರಿ.
ಭಾವಾರ್ಥ : ‘ಯಾವುದನ್ನು ಖರ್ಚು ಮಾಡಬೇಕೋ, ಅದನ್ನು ನೀವು ಸಂಗ್ರಹಿಸುತ್ತೀರಿ’, ಅಂದರೆ ಹಣವನ್ನು ಸಂಗ್ರಹಿಸುತ್ತಾರೆ ಮತ್ತು ಸಾಧನೆ ಮಾಡುವ ಅಮೂಲ್ಯವಾದ ಸಮಯವನ್ನು ಹಾಳು ಮಾಡುತ್ತೀರಿ ಅಂದರೆ ಸಾಧನೆ ಮಾಡುವ ಬಹಳಷ್ಟು ಸಮಯವನ್ನು ಹಾಳು ಮಾಡುತ್ತೀರಿ. ‘ಇದನ್ನು ಅದಲು ಬದಲು ಮಾಡಲು ಕಲಿಯಿರಿ’ ಅಂದರೆ ಸಮಯವನ್ನು ಸಾಧನೆಗಾಗಿ  ಉಪಯೋಗಿಸಿರಿ.

ಜಮೀನಿಗೆ ಆಧಾರವಿಲ್ಲ, ಆಕಾಶಕ್ಕೆ ಕಬರವಿಲ್ಲ, ಮನುಷ್ಯನಿಗೆ ಪುರುಸೊತ್ತಿಲ್ಲ.
ಭಾವಾರ್ಥ : ‘ಮನುಷ್ಯನಿಗೆ ಪುರುಸೊತ್ತಿಲ್ಲ.’ ಎಂದರೆ ವ್ಯವಹಾರಿಕ ಅರ್ಥದಲ್ಲಿ ಪುರುಸೊತ್ತಿಲ್ಲ, ಸಮಯವಿಲ್ಲ ಮತ್ತು ಆಧ್ಯಾತ್ಮಿಕ ಅರ್ಥದಲ್ಲಿ ಆಯುಷ್ಯವು ಎಷ್ಟು ಬೇಗ ಕಳೆಯುತ್ತದೆಯೆಂದರೆ, ಸಾಧನೆ ಮಾಡಲು ಸಮಯವೇ ಸಿಗುವುದಿಲ್ಲ.

ಕಲ್ಪ ಮತ್ತು ವಿಕಲ್ಪ
ಬಾಬಾರವರು ಅವರ ಓರ್ವ ಶಿಷ್ಯನಿಗೆ ‘ಕಲ್ಪ ಮತ್ತು ವಿಕಲ್ಪ ಇವೆರಡು ತಂದೆಯವರು ನಿನ್ನ ತಲೆಯನ್ನು ತಿರುಗಿಸುತ್ತಾರೆ.’
ಭಾವಾರ್ಥ : ಬಾಬಾರವರು  ತಮ್ಮ ಓರ್ವ ಶಿಷ್ಯನಾದ ಮಾಮಾ ಉಜೈನಕರರವರಿಗೆ ತುಂಬಾ ತಮಾಷೆ ಮಾಡುತ್ತಿದ್ದರು. ಒಮ್ಮೆ ಅವರು ಮಾಮಾರವರಿಗೆ, ‘ಮಾಮಾ, ನೀನು ಎರಡು ತಂದೆಯವನಾಗಿರುವೆ’, ಆಗ ಮಾಮಾರವರು ತುಂಬಾ ಸಿಟ್ಟಿನಿಂದ ,‘ಇದರ ಅರ್ಥವೇನು? ಏನಾದರೂ ಹೇಳುತ್ತಿರಿ?’ಎಂದರು. ಆಗ ಮಹಾರಾಜರು, ‘ಹೇಳುತ್ತೇನೆ, ನನಗೆ ಒಂದು ಸಾವಿರ ರೂಯನ್ನು ಕೊಡಲು ಒಪ್ಪಿಕೊಂಡರೆ ಮಾತ್ರ ಹೇಳುತ್ತೇನೆ.’ ೧೦೦೦ ರೂ. ಕೊಡುತ್ತೇನೆಂದು ಒಪ್ಪಿಕೊಂಡ ನಂತರ ಬಾಬಾರವರು, ‘ಮಾಮಾ, ಬುದ್ಧಿಯು ನಿನ್ನ ತಾಯಿಯು ಮತ್ತು ಕಲ್ಪ ಮತ್ತು ವಿಕಲ್ಪ ಇವೆರಡೂ ತಂದೆಯವರು. ಅವರು ನಿನ್ನ ತಲೆಯನ್ನು ತಿರುಗಿಸುತ್ತಾರೆ.’ ಮಾಮಾರವರು ಉದಾರಿಯಾಗಿದ್ದರು ಮತ್ತು ಮುಗ್ಧರಾಗಿದ್ದರು. ಕ್ಷುಲ್ಲಕ ಕಾರಣದಿಂದ ಬಾಬಾರವರ ಜೊತೆಗೆ ಜಗಳವಾಡುತ್ತಿದ್ದರು; ಆದರೆ ಶ್ರದ್ಧೆಯುಳ್ಳ ಭಕ್ತರಾಗಿದ್ದರು. ಅವರು ಎಷ್ಟೇ ಜಗಳವಾಡಿದರೂ, ಸಿಟ್ಟು ಮಾಡಿದರೂ ಅವರ ಒಳಗಿನ ಪ್ರೀತಿ, ಭಕ್ತಿ ಮತ್ತು ಶ್ರದ್ಧೆಯು ಸ್ವಲ್ಪವೂ ಕಡಿಮೆಯಾಗಲಿಲ್ಲ.

ಪ್ರಾರಬ್ಧ ಮತ್ತು ವಿಕಲ್ಪ : ಎರಡೂ ಶತ್ರುಗಳಾಗಿದ್ದಾರೆ
ಮನುಷ್ಯನ ಉನ್ನತಿಯ ಮಾರ್ಗದಲ್ಲಿ ಎರಡು ಶತ್ರುಗಳಿವೆ. ಪ್ರಾರಬ್ಧದಲ್ಲಿ ಸುಕೃತವು ಚೆನ್ನಾಗಿಲ್ಲದಿದ್ದರೆ, ಆ ಮಾರ್ಗವು ಕೂಡ ಸೀಮಿತವಾಗಿರುವುದು. ಹಾಗೂ ಸಂಚಿತ ತುಂಬ ಇರುವ ಮನುಷ್ಯನು ಮಾಯೆಯಲ್ಲಿ ಹೆಚ್ಚು ಹೆಚ್ಚು ಸಿಲುಕುತ್ತಾನೆ ಮತ್ತು ಅವರಿಂದ ಅವಶ್ಯವಿದ್ದಷ್ಟೂ ಚರಣ ಸೇವೆಯಾಗುವುದಿಲ್ಲ. ಅದರಂತೆ ಮನಸ್ಸಿನಲ್ಲಿ  ವಿಕಲ್ಪ ಬರುತ್ತಿದ್ದರೆ, ಶ್ರದ್ಧೆ ಮತ್ತು ವಿಶ್ವಾಸ ಇವೆರಡೂ ದೂರವಾಗುತ್ತವೆ. ವಿಚಲಿತ ಮನಸ್ಸಿನ ಸ್ಥಿತಿಯಿಂದ ಚರಣಸೇವೆಯಾಗುವುದಿಲ್ಲ.

ಪ್ರಾರಬ್ಧಭೋಗ
ಪ್ರಾರಬ್ಧಭೋಗವನ್ನು ಭೋಗಿಸಿಯೇ ತೀರಿಸಬೇಕು. ಬ್ಯಾಂಕಿನ ಸಾಲವನ್ನು ತೀರಿಸಲೇಬೇಕು. ಇಲ್ಲದಿದ್ದರೆ ಬಡ್ಡಿ ಸಹಿತ ಯಾವಾಗಲಾದರೂ ತೀರಿಸಲೇಬೇಕಾಗುತ್ತದೆ.

ಜನ್ಮ, ಮೃತ್ಯು ಮತ್ತು ಮದುವೆ
ಜನ್ಮ, ಮೃತ್ಯು ಮತ್ತು ಮದುವೆ ಈ ಮೂರೂ ವಿಷಯಗಳು ಪೃಥ್ವಿಗೆ ಸಂಬಂಧವಿರುವುದರಿಂದ ಅದರ ಕಾಲ, ಸಮಯ ಮತ್ತು ಸ್ಥಳ ನಿಗದಿತವಾಗಿರುತ್ತದೆ. ನಿಗದಿತ ಸ್ಥಳದಲ್ಲಿ ನಿಗದಿತ ವೇಳೆಯಲ್ಲಿ ಆ ವಿಷಯವು ನಡೆಯುತ್ತದೆ.

ಮನಸ್ಸಿನ ದುರ್ಬಲತೆ
ಮನಸ್ಸಿನ ದುರ್ಬಲತೆ ಇತರರ ದ್ವೇಷಕ್ಕೆ ಕಾರಣವಾಗುತ್ತದೆ.

ಪ್ರಯತ್ನ ಮಾಡುತ್ತಾ ಇರಿ
ದಾರಿಹೋಕನು ಒಮ್ಮೆ ನಿಶ್ಚಯಿಸಿದ ಮಾರ್ಗದಿಂದ ಹೋಗುತ್ತಿರುವಾಗ ದಾರಿಯಲ್ಲಿ ಅವನಿಗೆ ಎಷ್ಟೇ ಬಿರುಗಾಳಿ ಬೀಸಿದರೂ ಅವನು ವಿಚಲಿತನಾಗದೇ ಆ ಕ್ಷಣದಲ್ಲಿ ಜಾಗರೂಕನಾಗಿದ್ದು ಪುನಃ ಅವಕಾಶ ಸಿಕ್ಕಿದ ತಕ್ಷಣ ತನ್ನ ಧ್ಯೇಯದ ಕಡೆಗೆ ಹೋಗಲು ಪ್ರಾರಂಭಿಸುತ್ತಾನೆ. ದಾರಿಹೋಕನೆಂದರೆ ಸಾಧಕ. ‘ಮಾರ್ಗದಿಂದ ಹೋಗುವುದು’, ಅಂದರೆ ಸಾಧನೆಯನ್ನು ಮಾಡುವುದು. ‘ಬಿರುಗಾಳಿ ಬೀಸುವುದು’, ಅಂದರೆ ಸಾಧನೆಯಲ್ಲಿ ಅಡಚಣೆ ಬರುವುದು.

ಅನುಭೂತಿ
ಅನುಭೂತಿಯನ್ನು ತೆಗೆದುಕೊಳ್ಳಲು - ಕೊಡಲು ಆಗುವುದಿಲ್ಲ. ನಿಮಗೆ ಅನುಭವಿಸಬೇಕಾಗುತ್ತದೆ.
ಭಾವಾರ್ಥ : ಅಂದರೆ ಪ್ರಯತ್ನ, ಸಾಧನೆ ಮಾಡಬೇಕಾಗುತ್ತದೆ.

ಧೈರ್ಯದಿಂದಿರಿ : 
ಧೈರ್ಯವಿದ್ದವನಿಗೆ ಯಾವುದೇ ತೊಂದರೆಯಿಲ್ಲ. ಉಳಿದವೆಲ್ಲ ನಾಶವಾಗುವುದು.
ಅರ್ಥ : ಧೈರ್ಯವಿದ್ದವನು ಸಫಲನಾಗುತ್ತಾನೆ. ಉಳಿದವರು ನಾಶವಾಗುತ್ತಾರೆ.

ಜಿಗುಟತನವಿರಬೇಕು
ಮಾರ್ಗ ಹತ್ತಿರದ್ದು, ಆದರೆ ತಡವಾಗಿ ಸಿಗುತ್ತದೆ.
ಭಾವಾರ್ಥ : ‘ಮಾರ್ಗ ಹತ್ತಿರವಿದೆ’ ಅಂದರೆ ಆಧ್ಯಾತ್ಮಿಕ ಉನ್ನತಿಯ ಮಾರ್ಗವು ನಮ್ಮ ಹತ್ತಿರವೇ ಇದೆ. ‘ಆದರೆ ತಡವಾಗಿ ದೊರಕುತ್ತದೆ.’ ಅಂದರೆ ಈ ಮಾರ್ಗದಿಂದ ಮುಂದೆ ಹೋಗಲು ಜಿಗುಟುತನವಿರಬೇಕು.

ಅಮೃತ ಮತ್ತು ವಿಷ : ಅಮೃತಕ್ಕೆ ವಿಷದ ಹೆದರಿಕೆಯಿರುತ್ತದೆ.
ಭಾವಾರ್ಥ : ಅಮೃತವನ್ನು ಕುಡಿದವನು ಸಹ ವಿಷವನ್ನು ತೆಗೆದುಕೊಂಡರೆ, ‘ತಾನು ಸಾಯುತ್ತೇನೆಯೋ’, ಎಂಬ ಭಯವಿರುತ್ತದೆ; ಆದರೆ ಯಾವನು ವಿಷವನ್ನೇ ಜೀರ್ಣಿಸಿದ್ದಾನೆಯೋ, ಅವನಿಗೆ ಯಾವುದೇ ಭಯವಿಲ್ಲ. ಸುಖದಲ್ಲಿರುವ ಸಾಧಕನಿಗೆ ದುಃಖದ ಭಯವಿರುವುದು, ಆದರೆ ಎಲ್ಲ ಸಂಕಟಗಳನ್ನು ಪಾರು ಮಾಡಿದವನಿಗೆ ಯಾವುದೇ ಭಯವಿರುವುದಿಲ್ಲ.

ನೆನಪು 
ನಿಮಗೆ ದುಃಖವಾದಾಗ ನನ್ನ ನೆನಪು ಮಾಡಿರಿ. 
ನೀವು ಸುಖಿಯಾಗಿದ್ದಾಗ ನಾನು ನಿಮ್ಮ ನೆನಪನ್ನು ಮಾಡುವೆನು.
ಭಾವಾರ್ಥ: ದುಃಖವಾದಾಗ ನೀವು ನನ್ನನ್ನು ನೆನಪಿಸಿದರೆ, ನಾನು ನಿಮ್ಮ ದುಃಖವನ್ನು ದೂರ ಮಾಡುವೆನು. ನೀವು ಸುಖಿಯಾಗಿದ್ದಾಗ, ಮಾಯೆಯಿಂದ, ಹಣದಿಂದ, ಬುದ್ಧಿಭ್ರಷ್ಟವಾಗುತ್ತದೆ. ಹಾಗೆ ಆಗಬಾರದೆಂದು ಆ ಹಣವನ್ನು ಏನು ಮಾಡುವುದು, ಜೀವನದಲ್ಲಿ ಹೇಗೆ ಇರಬೇಕೆಂದು ನಾನು ನಿಮಗೆ ಹೇಳುವೆನು.

ಹೊರಗೆ ಮತ್ತು ಒಳಗೆ ವರ್ತಿಸುವುದು
ಯಾವ ರೀತಿ ನೀರು ಹರಿಯುತ್ತಿರುವಾಗ ತಳದಲ್ಲಿ ಶಾಂತವಾಗಿರುತ್ತದೆಯೋ, ಅದರಂತೆ ಬಾಹ್ಯ ಶರೀರವು ಯಾವುದೇ ಕಾರ್ಯ ಮಾಡುತ್ತಿರಲಿ, ಅಂತಃಶರೀರವು ( ಜೀವಾತ್ಮಾ) ಶುದ್ಧ ಮತ್ತು ಶಾಂತವಾಗಿಡಬೇಕು.

ನಿಜವನ್ನು ಅರಿಯುವುದು
ಕೇಳುವುದು ವಿಚಾರ ಮಾಡುವುದು ತಿಳಿಯುವುದು.
ಕೇಳುವುದು ತಿಳಿಯುವುದು ವಿಚಾರ ಮಾಡುವುದು.
ಭಾವಾರ್ಥ : ‘ಕೇಳು’ ಎಂದರೆ ಕೇಳಿಸಿಕೊಳ್ಳುವುದು, ವಿಚಾರ ಮಾಡುವುದೆಂದರೆ ಆಲೋಚನೆ ಮಾಡುವುದು ಮತ್ತು ತಿಳಿಯುವುದು ಎಂದರೆ ಅರಿತುಕೊಳ್ಳುವುದು. ಮೊದಲನೇ ಸಾಲಿನಲ್ಲಿ ‘ಕೇಳುವುದು ವಿಚಾರ ಮಾಡುವುದು ತಿಳಿಯುವುದು’ ಎಂದಿದೆ. ಅದರ ಅರ್ಥವೆಂದರೆ ಕೇಳಿದ ನಂತರ ಮನಸ್ಸು ಮತ್ತು ಬುದ್ಧಿಯಿಂದ ವಿಚಾರ ಮಾಡಿ ಏನೆಂದು ತಿಳಿದುಕೊಳ್ಳಬೇಕು. ಅದರಲ್ಲಿ ತಿಳಿದುಕೊಳ್ಳುವುದು ಮನಸ್ಸು ಮತ್ತು ಬುದ್ಧಿಯಿಂದ ಇರುವುದರಿಂದ ಅದು ಮಾಯೆಯ ಸಂದರ್ಭದಲ್ಲಿದೆ. ಅಭಿಮನ್ಯುವಿಗೆ ಕೇವಲ ಈ ಸಾಲು ಗೊತ್ತಿತ್ತು, ಆದುದರಿಂದ ಅವನು ಚಕ್ರವ್ಯೂಹದಲ್ಲಿ ಸಿಲುಕಿದನು.
ಇದರ ಬದಲು ಎರಡನೇ ಸಾಲಿನಲ್ಲಿ ‘ಕೇಳುವುದು ತಿಳಿಯುವುದು ವಿಚಾರ ಮಾಡುವುದು’ ಇದೆ. ಅದರ ಅರ್ಥವೆಂದರೆ ಕೇಳಿದ ನಂತರ ಜೀವವು ಅದನ್ನು ತಿಳಿದುಕೊಳ್ಳುವುದು, ಅದರ ಅನುಭೂತಿಯನ್ನು ಪಡೆಯುವುದು ನಂತರ ಅದರ ಬಗ್ಗೆ ವಿಚಾರ ಮಾಡುವುದು ಬ್ರಹ್ಮನ ಸಂದರ್ಭದಲ್ಲಿದೆ.

ನಿಜವಾದ ದೃಷ್ಟಿ: ಒಳಗಿನ ಕನ್ನಡಕವಿರುವಾಗ ಹೊರಗಿನ ಕನ್ನಡಕವೇಕೆ?
ಭಾವಾರ್ಥ: ಒಳಗಿನ ಕನ್ನಡಕವೆಂದರೆ ಅಂತಚಕ್ಷು.

ಭರವಸೆ ಮತ್ತು ವಿಶ್ವಾಸ
ಭರವಸೆಯನ್ನು ಇಡಬಾರದು ಮತ್ತು ವಿಶ್ವಾಸವನ್ನು ಹೋಗಲು ಕೊಡಬಾರದು.
ಭಾವಾರ್ಥ : ‘ಭರವಸೆಯನ್ನು ಇಡಬಾರದು’ ಇದರಲ್ಲಿ ‘ಮಾಯೆಯ ಮೇಲೆ ಭರವಸೆ ಇಡಬಾರದು’, ಎಂದು ಹೇಳಿದ್ದಾರೆ. ವಿಶ್ವಾಸವನ್ನು ಹೋಗಲು ಕೊಡಬಾರದು’ ಇದರಲ್ಲಿ ವಿಶ್ವಾಸವು ನಾಮದ ಮೇಲಿನ, ಭಗವಂತನ ಮೇಲಿನ, ಬ್ರಹ್ಮನ ಮೇಲಿನ ವಿಶ್ವಾಸವಾಗಿದೆ.

ಭರವಸೆ ಇಲ್ಲ ದೇಹದ್ದು| ಇರಲಿ ಆತ್ಮ ಶಿವನ ಮೇಲೆ |
ತತ್ತ್ವವು ಎಲ್ಲ ಜೀವದ್ದು | ಮಾಡಿರಿ ನಿತ್ಯ ಜಪ ಅವನದ್ದು|

ತೃಪ್ತಿ
ಯಾರಿಗೆ ಇದ್ದ ವಸ್ತುಗಳಿಂದ ತೃಪ್ತಿ ಸಿಗುವುದಿಲ್ಲವೋ, ಅವನಿಗೆ ಸಾಧನೆಯಿಂದ ಏನು ಸಿಗುವುದು ?

ಬಡತನ ಮತ್ತು ಮನಸ್ಸಿನ ಶ್ರೀಮಂತಿಕೆ
ಬಡತನವು ಜೀವನದ ಜೊತೆಗಾರಳಾಗಿದ್ದು 
ಶ್ರೀಮಂತಿಕೆ ಕನಸಿನಲ್ಲಿಯ ಸ್ನೇಹಿತೆಯಾಗಿದ್ದಾಳೆ.
ಭಾವಾರ್ಥ : ಇಲ್ಲಿ ‘ಬಡತನ’ ಎಂಬ ಶಬ್ದ ನಮ್ರತೆ ಮತ್ತು ‘ಶ್ರೀಮಂತಿಕೆ’ ಎಂಬ ಶಬ್ದವು ಅಹಂಭಾವ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆ. ‘ಕನಸಿನಲ್ಲಿಯ ಸ್ನೇಹಿತೆ’ ಅಂದರೆ ಜೀವನದಲ್ಲಿ ಏನೂ ಉಪಯೋಗಕ್ಕೆ ಬಾರದ ವಸ್ತು.

ಶ್ರೀಮಂತಿಕೆ ಇರಬೇಕು, ಮನಸ್ಸಿನದ್ದು. ಸಂಪತ್ತಿನದ್ದಲ್ಲ.
ವೈಭವವಿರಬೇಕು, ದಾನದ್ದು. ವಾಹನ, ಮನೆಯದ್ದಲ್ಲ.
ಧನಿಕನಿರಬೇಕು, ಭಗವಂತನ ಹೆಸರಿನದ್ದು. ಸಂಪತ್ತು, ವಾಹನಗಳದ್ದಲ್ಲ.

ಸಂಸಾರದ ಆಸಕ್ತಿ ಬೇಡಾ; ಆದರೆ ಆನಂದವನ್ನು ಅನುಭವಿಸಿರಿ!
ತಮ್ಮ ಮನೆಯಲ್ಲಿ ಏನೇನು ಇದೆಯೋ ಅದರಿಂದ ಆನಂದವನ್ನು ಅನುಭವಿಸಬೇಕು, ಅದನ್ನು ಬಿಟ್ಟು ಅಲ್ಲ.  ಸಂಸಾರದ ಆಸಕ್ತಿ ಬೇಡಾ; ಆದರೆ ಅದರಲ್ಲಿ ಆನಂದ ಅನುಭವಿಸಲು ಅಡಚಣೆ ಇಲ್ಲ.

ಸಾಂಪ್ರದಾಯಿಕತೆ ಬೇಡ
ಸಾಂಪ್ರದಾಯಿಕತೆಯಿಂದ ಮನಸ್ಸಿನ ಸಿದ್ಧತೆ ಆಗುತ್ತದೆ, 
ಜೀವದ್ದಲ್ಲ: ಆದುದರಿಂದ ಆಧ್ಯಾತ್ಮಿಕ ಉನ್ನತಿಯಾಗುವುದಿಲ್ಲ.
ಭಾವಾರ್ಥ: ಸಾಧನೆಯಿಂದ ಮನಸ್ಸು ವ್ಯಾಪಕವಾಗಬೇಕು. ಅದು ಸಾಂಪ್ರದಾಯಿಕತೆಯಿಂದ ಆಗುವುದಿಲ್ಲ. ಸಾಧನೆ ಹೇಗೆ ಮಾಡಬೇಕೆಂದು ಕಲಿಸುವ ಅನೇಕ ಸಂಪ್ರದಾಯಗಳಿವೆ; ಆದರೆ ಅವರು ಕಲಿಸಿದ ಆ ಸಾಧನೆಯು ಕೇವಲ ಮನಸ್ಸಿನಿಂದ ಮಾಡಲಾಗುತ್ತದೆ, ಜೀವದಿಂದ ಅಲ್ಲ. ನಿಜವಾದ ಆಧ್ಯಾತ್ಮಿಕ ಉನ್ನತಿಗಾಗಿ ಜೀವದಿಂದ ಮಾಡುವ ಸಾಧನೆಯು ಮಹತ್ವದ್ದಾಗಿದೆ, ಮನಸ್ಸಿನಿಂದ ಮಾಡಿದಲ್ಲ. ಸಾಂಪ್ರದಾಯಿಕದಲ್ಲಿ ಕೇವಲ ಮನಸ್ಸಿನ ಸಾಧನೆಯಾಗುತ್ತಿರುವುದರಿಂದ ಆ ವಿಶಿಷ್ಟ ಸಂಪ್ರದಾಯದ ತತ್ತ್ವದಂತೆ ಮಾಡುವವರ ಮೇಲೆ ಮಾತ್ರ ಆತ್ಮೀಯತೆ ನಿರ್ಮಾಣವಾಗುತ್ತದೆ. ಇದರ ಬದಲು ಯಾವಾಗ ಜೀವದ ಸಾಧನೆಯಾಗುತ್ತದೆಯೋ, ಆಗ ಎಲ್ಲರ ಬಗ್ಗೆಯೂ ಆತ್ಮೀಯತೆ ನಿರ್ಮಾಣವಾಗುತ್ತದೆ.

No comments:

Post a Comment