ಜನರೇ, ಈ ದರೋಡೆಕೋರರನ್ನು ಈಗ ನೀವೇ ನಿಭಾಯಿಸಿರಿ!


ವಿದೇಶಿ ಅಧಿಕೋಶಗಳಲ್ಲಿರುವ ಭಾರತದ ೩೦೦ ಲಕ್ಷ ಕೋಟಿ ರೂಪಾಯಿಗಳನ್ನು ಭಾರತಕ್ಕೆ ಹಿಂತಿರುಗಿ ತರಬೇಕು ಎಂದು ತಳಮಳದಿಂದ ಪ್ರಯತ್ನಿಸುತ್ತಿರುವ ಪ್ರಖರ ರಾಷ್ಟ್ರಪ್ರೇಮಿ ಸಂತ ಹಾಗೂ ಪತಂಜಲಿ ಯೋಗಪೀಠ ಮತ್ತು ದಿವ್ಯ ಯೋಗ ಟ್ರಸ್ಟಿನ ಸಂಸ್ಥಾಪಕ ಯೋಗಗುರು ಪೂಜ್ಯ ರಾಮದೇವಬಾಬಾ ಇವರ ಮೇಲೆ ‘ಜನ್ಮದಿಂದ ಹಿಂದೂ ಆದರೆ ಆಚಾರ ವಿಚಾರದಿಂದ ಧರ್ಮಾಂಧರಾಗಿರುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಮತ್ತು ಸಹಚರರು ಮಾತ್ರ ಕಿಡಿ ಕಾರುತ್ತಿದ್ದಾರೆ.
ಕಪ್ಪು ಹಣದ ವಿಷಯದಲ್ಲಿ ಚಳುವಳಿ ನಡೆಸುವ ಮೊದಲು ಪೂಜ್ಯ ರಾಮದೇವ ಬಾಬಾರವರು ತಮ್ಮ ಸ್ವಂತದ ಸಂಪತ್ತು ಹಾಗೂ ಅದರ ಮೂಲವನ್ನು ಘೋಷಿಸಬೇಕು, ಅವರ ಸಂಪತ್ತಿನ ಬಗ್ಗೆ ಕೇಂದ್ರಿಯ ತನಿಖಾ ದಳದ ಮೂಲಕ ವಿಚಾರಣೆ ನಡೆಸಬೇಕು ಎಂಬ ಸಂತರನ್ನು ಅವಮಾನಿಸುವಂತಹ ರಾಷ್ಟ್ರದ್ರೋಹಿ ಹೇಳಿಕೆಯನ್ನು ಸಿಂಗ್ ಇವರು ನೀಡಿದ್ದಾರೆ. ಸಿಂಗ್ ಅಥವಾ ಕಾಂಗ್ರೆಸ್‌ನ ಯಾವುದೇ ನೇತಾರರು ಧರ್ಮಾಂಧರ ಗುರುಗಳನ್ನು ಅಥವಾ ಯಾವುದೇ ಕ್ರೈಸ್ತ ಪಾದ್ರಿಗಳನ್ನು ಟೀಕಿಸುವ ಅಥವಾ ಅವರ ಸಂಪತ್ತಿನ ಬಗ್ಗೆ ಪ್ರಶ್ನಿಸುವ ಧೈರ್ಯವನ್ನು ಎಂದೂ ತೋರಿಸಲಿಲ್ಲ. ಸಿಂಗ್ ಮತ್ತು ಅವರ ಸಹಚರರ ಈ ಹೇಳಿಕೆಗಳಿಂದ ಅವರ ಹಿಂದೂದ್ವೇಷವೇ ಪ್ರಕಟವಾಗುತ್ತಿದೆ.

ವಿಚಾರಣೆಗೆ ಆಗ್ರಹ, ಇದು ರಾಷ್ಟ್ರಪ್ರೇಮಿ ಸಂತರನ್ನು ಮುಗಿಸುವ ಷಡ್ಯಂತ್ರ !
ಕೇಂದ್ರೀಯ ತನಿಖಾ ದಳವು ಅಧಿಕಾರಾರೂಢರ ಕೈಯಲ್ಲಿರುವ ಬೆದರು ಗೊಂಬೆಯಾಗಿದೆ. ಈ ದಳದ ಅಧಿಕಾರಿಗಳು ರಾಜಕಾರಣಿಗಳ ಗುಲಾಮರಂತೆ ನಡೆದುಕೊಳ್ಳುತ್ತಿದ್ದಾರೆ. ಈ ದಳವು ರಾಷ್ಟ್ರದ್ರೋಹ ಬಗೆಯುವ ಕ್ವತ್ರೋಚಿಯನ್ನು ಮುಕ್ತಗೊಳಿಸುತ್ತದೆ, ರಾಜಕಾರಣಿಗಳಿಗೆ ಅಪಾಯ ತಂದೊಡ್ಡುವ ಪ್ರಕರಣಗಳನ್ನು ಮುಚ್ಚಿಹಾಕುತ್ತದೆ; ಆದರೆ ರಾಷ್ಟ್ರಪ್ರೇಮಿಗಳನ್ನು ಸುಳ್ಳು ಆರೋಪದಡಿಯಲ್ಲಿ ಸಿಲುಕಿಸಿ ಅವರ ಮಾನಹಾನಿಗೈಯ್ಯಲು ಹಿಂದೆ ಮುಂದೆ ನೋಡುವುದಿಲ್ಲ. ಸ್ವಲ್ಪದರಲ್ಲಿ ಹೇಳುವುದಾದರೆ ರಾಜಕಾರಣಿಗಳ ಕೈಗೊಂಬೆಯಾಗಿರುವ ಈ ದಳದಿಂದ ಅಧಿಕಾರಾರೂಢ ಕಾಂಗ್ರೆಸ್ ಪಕ್ಷವು ತನಗೆ ಬೇಕಾದಂತೆ ವರದಿಯನ್ನು ತಯಾರಿಸಿಕೊಳ್ಳಲಿದೆ ಮತ್ತು ಪೂಜ್ಯ ರಾಮದೇವಬಾಬಾರನ್ನು ಅವಮಾನಿಸಲು ಪ್ರಯತ್ನಿಸಲಿದೆ. ಸದ್ಯದ ಸ್ಥಿತಿಯಲ್ಲಿ ಜನತೆಯಲ್ಲಿ ಜಾತ್ಯತೀತ ರಾಜಕಾರಣಿಗಳ ಭ್ರಷ್ಟ ಕಾರುಬಾರಿನ ಬಗ್ಗೆ ಜಿಗುಪ್ಸೆ ಮೂಡುತ್ತಿದೆ. ಇದರಿಂದ ರಾಜಕಾರಣಿಗಳ ಭ್ರಷ್ಟ ಕಾರುಬಾರುಗಳಿಂದ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಇಂತಹ ಹೀನ ಮಟ್ಟದ ಪ್ರಯತ್ನ ಮಾಡುತ್ತಿದೆ. ಜನತೆಯೇ ಈಗ ಯೋಗಗುರು ರಾಮದೇವಬಾಬಾ ಇವರ ಹಿಂದೆ ದೃಢವಾಗಿ ನಿಂತು ಅವರನ್ನು ಬೆಂಬಲಿಸಿ ಜಾತ್ಯತೀತ ರಾಜಕಾರಣಿಗಳಿಗೆ ಅವರ ಯೋಗ್ಯಜಾಗವನ್ನು ತೋರಿಸಿ ಕೊಡಬೇಕು.
ಕಪ್ಪು ಹಣದ ವಾಸ್ತವಿಕತೆ !
ಮಹಾಧಿಕಾರಿಯಾಗಲು ನೋಡುತ್ತಿರುವ ಭಾರತದ ತುಲನೆಯಲ್ಲಿ ನೈಜೀರೀಯಾ ಒಂದು ಚಿಕ್ಕ ಹಾಗೂ ಹಿಂದುಳಿದ ಆಫ್ರಿಕಾಖಂಡದ ದೇಶ ವಾಗಿದೆ. ಈ ದೇಶದ ತತ್ಕಾಲೀನ ರಾಷ್ಟ್ರಾಧ್ಯಕ್ಷ ಸಾನಿ ಆಬಾ ಇವರು ೧೫ ಅಬ್ಜ ರೂಪಾಯಿಗಳನ್ನು ಸ್ವಿಸ್ ಅಧಿಕೋಶದಲ್ಲಿ ಇರಿಸಿದ್ದರು. ಹೊಸ ದಾಗಿ ಅಧಿಕಾರಕ್ಕೆ ಬಂದಿರುವ ರಾಜಕಾರಣಿಗಳು ತೀವ್ರ ಕಾನೂನು ಹೋರಾಟ ನಡೆಸಿ ಈ ಹಣವನ್ನು ತಮ್ಮ ದೇಶಕ್ಕೆ ಹಿಂತಿರುಗಿ ತಂದರು. ಜರ್ಮನಿಯೂ ಕ್ರಿ.ಶ. ೨೦೦೭ ರಲ್ಲಿ ವಿದೇಶದಲ್ಲಿ ಕಪ್ಪು ಹಣವನ್ನು ಇರಿಸಿದವರ ಪಟ್ಟಿಯನ್ನು ಪಡೆದಿತ್ತು. ಈ ಪಟ್ಟಿಯಲ್ಲಿ ಭಾರತ, ಅಮೇರಿಕಾ, ಫ್ರಾನ್ಸ್, ಬ್ರಿಟನ್ ಈ ದೇಶಗಳ ನಾಗರಿಕರದ್ದೂ ಹೆಸರುಗಳಿದ್ದವು. ಜರ್ಮನಿಯೂ ಈ ಹೆಸರನ್ನು ನೀಡಲು ಸಿದ್ಧವಿತ್ತು. ಅಮೇರಿಕಾವು ಈ ಹೆಸರುಗಳನ್ನು ಪಡೆದು ಕ್ರಿ.ಶ. ೨೦೦೯ ರಲ್ಲಿ ಸ್ವಿಝರ್ಲ್ಯಾಂಡ್‌ನಲ್ಲಿರುವ ಯುಬಿಎಸ್ ಈ ಸ್ವಿಸ್ ಅಧಿಕೋಶಗಳ ಸಂಘಟನೆಗಳಿಂದ ಅಮೇರಿಕಾದ ನಾಗರಿಕರ ೩೫ ಅಬ್ಜ ಕಪ್ಪು ಹಣವನ್ನು ದೇಶಕ್ಕೆ ಹಿಂತಿರುಗಿ ತಂದಿತ್ತು. ಈ ಸಂಘಟನೆಯು ೯೦ ಸಾವಿರ ಕೋಟಿ ರೂಪಾಯಿಗಳ ಕಪ್ಪುಹಣದ ಸಂಪೂರ್ಣ ಮಾಹಿತಿಯನ್ನು ಅಮೇರಿಕಾಕ್ಕೆ ನೀಡಿತ್ತು. ಭಾರತವು ಈ ಮಾಹಿತಿ ಸಿಗುತ್ತಿರುವ ಪಟ್ಟಿಯನ್ನು ಪಡೆಯಲು ಒಂದು ವರ್ಷ ಕಾಲಹರಣ ಮಾಡಿತು ಮತ್ತು ಪಟ್ಟಿ ಪಡೆದ ನಂತರ ಅದರ ಬಗ್ಗೆ ಇಂದಿನ ತನಕ ಯಾವುದೇ ಕಾರ್ಯಾಚರಣೆಯನ್ನು ನಡೆಸಲಿಲ್ಲ. ಇದುವೇ ಭಾರತದ ಅಂದರೆ ಅಹೋರಾತ್ರಿ ದೇಶವನ್ನು ಲೂಟಿಗೈಯ್ಯುವ ಜಾತ್ಯತೀತ ರಾಜಕಾರಣಿಗಳ ನಿಜರೂಪವಾಗಿದೆ. ಅನೇಕ ತಜ್ಞರ ಸ್ಪಷ್ಟ ಅಭಿಪ್ರಾಯವೇನೆಂದರೆ ವಿದೇಶದಲ್ಲಿ ಕಪ್ಪು ಹಣವನ್ನು ಇರಿಸುವವರಲ್ಲಿ ಅಧಿಕಾರಾರೂಢ ಪಕ್ಷ ಮತ್ತು ಅವರೊಂದಿಗೆ ಸಂಬಂಧಿತ ಅಧಿಕಾರಿಗಳು ಮತ್ತು ಉದ್ಯಮಿಗಳು ಸೇರಿದ್ದಾರೆ. ಇದರಿಂದಲೇ ಕಪ್ಪು ಹಣದ ಸಂದರ್ಭದಲ್ಲಿ ಯಾರಾದರೂ ಮಾತನಾಡಿದ ತಕ್ಷಣ ಕಪ್ಪು ಹಣದ ಸಂದರ್ಭದಲ್ಲಿ ಮಾತನಾಡುವವರು ವಿದೇಶಿ ಶಕ್ತಿಗಳ ಕೈಗೊಂಬೆಗಳಾಗಿದ್ದಾರೆ ಎಂದು ನರಿಗಳಂತೆ ಊಳಿಡಲು ಕಾಂಗ್ರೆಸ್‌ನವರು ಪ್ರಾರಂಭಿಸುತ್ತಾರೆ. ಪೂಜ್ಯ ರಾಮದೇವಬಾಬಾರವರ ಮೇಲೆ ಸಿಂಗ ಮತ್ತು ಅವರ ಸಹಚರರ ಆರೋಪವು ಇದೇ ಮಾನಸಿಕತೆಯದ್ದಾಗಿದೆ.
ಕಾಂಗ್ರೆಸ್‌ನವರು ಪೂಜ್ಯ ರಾಮದೇವಬಾಬಾರವರ ಸವಾಲನ್ನು ಸ್ವೀಕರಿಸುವ ಧೈರ್ಯ ತೋರಿಸಲಿ !
ಸಿಂಗ ಮತ್ತು ಅವರ ಭ್ರಷ್ಟ ಸಹಚರರು ನೀಡಿದ ಸವಾಲನ್ನು ಪೂಜ್ಯ ರಾಮದೇವ ಬಾಬಾರವರು ಸ್ವೀಕರಿಸಿದ್ದಾರೆ. ಅವರು ಯಾವುದೇ ವಿಚಾರಣೆಯನ್ನು ಎದುರಿಸಲು ಸಿದ್ಧತೆಯನ್ನು ತೋರಿಸಿದ್ದಾರೆ. ಈ ಸಿದ್ಧತೆಯನ್ನು ತೋರಿಸುವಾಗ ಪೂಜ್ಯ ರಾಮದೇವಬಾಬಾರವರು ಕಾಂಗ್ರೆಸ್ ಮತ್ತು ಕಾಂಗ್ರೆಸ್‌ನವರ ಸವಾಲನ್ನು ಸ್ವೀಕರಿಸುವ ಧೈರ್ಯವನ್ನು ತೋರಿಸಬೇಕು. ಆದರೆ ಕಾಂಗ್ರೆಸ್‌ನವರು ಇದನ್ನು ಎಂದೂ ಸ್ವೀಕರಿಸಲಾರರು ಎಂಬುದು ಖಚಿತ. ಕಪ್ಪು ಹಣವನ್ನು ಭಾರತಕ್ಕೆ ತರಲು ಮತ್ತು ಸುದೃಢ ಭಾರತವನ್ನು ತರಲು ಮತ್ತು ಬಲಶಾಲಿ ಭಾರತದ ನಿರ್ಮಾಣಕ್ಕಾಗಿ ಒಂದೇ ಪರ್ಯಾಯ ಮತ್ತು ಅದುವೇ ಜಾತ್ಯತೀತ ರಾಜಕಾರಣಿಗಳನ್ನು ತೊಲಗಿಸಿ ರಾಷ್ಟ್ರ ಮತ್ತು ಧರ್ಮ ಪ್ರೇಮಿ ರಾಜಕಾರಣಿಗಳ ಕೈಗೆ ಅಧಿಕಾರವನ್ನು ಒಪ್ಪಿಸಲು ಪ್ರಯತ್ನಿಸುವುದು.

No comments:

Post a Comment