ಅಧ್ಯಾತ್ಮದ ಬಗೆಗಿನ ಅಜ್ಞಾನದಿಂದ ಭಾಜಪದ ಅಧ್ಯಕ್ಷ ನಿತಿನ ಗಡಕರಿಯಿಂದ ಹಿಂದೂಗಳಿಗೆ ತಪ್ಪು ಮಾರ್ಗದರ್ಶನ!
ಆಕಳಿನಲ್ಲಿ ೩೩ ಕೋಟಿ ದೇವರಿರುತ್ತಾರೆಂಬ ಪರಿಭಾಷೆಗಳೆಲ್ಲ ಈಗ ನಡೆಯುವುದಿಲ್ಲವಂತೆ!
ಹೊಸದೆಹಲಿ : ಆಕಳಿಗೆ ನಮಸ್ಕಾರ ಮಾಡಿ ಅದರಲ್ಲಿ ೩೩ ಕೋಟಿ ದೇವತೆಗಳಿರುತ್ತಾರೆ ಎಂದು ನನಗೆ ಯಾರಾದರೂ ಹೇಳಿದರೆ ‘ಎಲ್ಲಿದ್ದಾರೆ ಆ ದೇವತೆಗಳು ? ಇಂತಹ ಪರಿಭಾಷೆಯು ಈಗ ನಡೆಯುವುದಿಲ್ಲ’ ಎಂದು ಹೇಳುವೆನು. (ಆಕಳಿನಲ್ಲಿ ೩೩ ಕೋಟಿ ದೇವತೆಗಳಿರುತ್ತಾರೆ, ಇದರ ಅಧ್ಯಾತ್ಮಶಾಸ್ತ್ರೀಯ ಅರ್ಥವು ಹೀಗಿದೆ. ‘ಆಕಳು ಎಷ್ಟು ಸಾತ್ತ್ವಿಕವಿರುತ್ತದೆಯೆಂದರೆ ೩೩ ಕೋಟಿ ದೇವತೆಗಳ ಸ್ಪಂದನಗಳು ಆಕಳಿನಲ್ಲಿ ಆಕರ್ಷಿತವಾಗುತ್ತವೆ’. ಇದು ಅಧ್ಯಾತ್ಮಶಾಸ್ತ್ರೀಯ ಪರಿಭಾಷೆಯಿದೆ ಮತ್ತು ಧಾರ್ಮಿಕ ವಿಷಯದಲ್ಲಿ ಅಧ್ಯಾತ್ಮ ಶಾಸ್ತ್ರೀಯ ಪರಿಭಾಷೆಯನ್ನೇ ಪರಿಗಣಿಸಬೇಕು. ವಿಜ್ಞಾನ, ಸಂಗೀತ ಇತ್ಯಾದಿ ವಿಷಯಗಳಲ್ಲಿ ತಮ್ಮದೇ ಪರಿಭಾಷೆಗಳಿರುತ್ತವೆ ಮತ್ತು ಆಯಾ ಕ್ಷೇತ್ರದಲ್ಲಿ ಅವುಗಳನ್ನೇ ಪರಿಗಣಿಸಲಾಗುತ್ತದೆ. - ಸಂಪಾದಕರು) ಹೊಸ ಪೀಳಿಗೆಯನ್ನು ರಾಷ್ಟ್ರರಚನೆಯ ಪ್ರವಾಹದಲ್ಲಿ ಸೇರಿಸಲು ಹೊಸ ಸಂದರ್ಭದ ವಿಚಾರ ನೀಡಲು ನಾವು ಕಡಿಮೆ ಬೀಳುತ್ತಿದ್ದೇವೆ ಎಂದು ಭಾಜಪದ ರಾಷ್ಟ್ರೀಯ ಅಧ್ಯಕ್ಷ ನಿತಿನ ಗಡಕರಿಯವರು ಹೇಳಿದ್ದಾರೆ. ಲೇಖಕ ಶ್ರೀ. ಮಹೇಶ ಶರ್ಮಾ ಇವರ ‘ಪಂಡಿತ ದೀನದಯಾಳ ಉಪಾಧ್ಯಾಯ ಮತ್ತು ನಿಯತಕಾಲಿಕೆ’ ಎಂಬ ಪುಸ್ತಕದ ಪ್ರಕಾಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಿತಿನ ಗಡಕರಿಯವರು ಮೇಲಿನ ಮಾತನ್ನು ಹೇಳಿದ್ದಾರೆ.
No comments:
Post a Comment