ಕಾಸರಗೋಡಿನಲ್ಲಿ ಧರ್ಮಾಂಧನಿಂದ ವಿವಾಹಿತ
ಹಿಂದೂ ಮಹಿಳೆಯ ಮೇಲೆ ಬಲಾತ್ಕಾರ ವಾಸನಾಂಧ ಧರ್ಮಾಂಧರು
ಕಾಸರಗೋಡು : ವಿವಾಹಿತೆಯೋರ್ವಳು ಸ್ನಾನ ಮಾಡುತ್ತಿದ್ದ ವೇಳೆ ಆಕೆಗೆ ತಿಳಿಯದೆ ಆಕೆಯ ನಗ್ನ ಚಿತ್ರಗಳನ್ನು ತೆಗೆದು ಬಳಿಕ ಆಕೆಗೆ ಬೆದರಿಕೆಯೊಡ್ಡಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಯುವಕನೂ ಸೇರಿದಂತೆ ಮೂವರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ನಗರದ ತಳಂಗರೆಯ ಕೆ.ಕೆ. ಪುರದ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿರುವ ೨೩ ರ ಹರೆಯದ ವಿವಾಹಿತ ಮಹಿಳೆ ನೀಡಿದ ದೂರಿನಂತೆ ಆಲುವಾ ಪಡಿಂ ಇಬಾರ್ ನಿವಾಸಿ ಎ.ಕೆ. ಅಶ್ರಫ್ (೨೯), ಈತನ ಸಂಬಂಧಿಕರಾದ ಕಳಮಶ್ಶೇರಿ ಚೇರ ಮಲ್ಲೂರ್ ನಿವಾಸಿ ಮೊಯ್ದೀನ್ (೪೦), ಫಾತಿಮ (೪೪) ಎಂಬವರ ವಿರುದ್ಧ ನ್ಯಾಯಾಲಯದ ಆದೇಶದಂತೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಅಶ್ರಫ್ ಮತ್ತು ದೂರು ನೀಡಿದ ಮಹಿಳೆಯ ಪತಿ ಆಲುವಾದ ಕಂಪೆನಿಯೊಂದರಲ್ಲಿ ಜೊತೆಯಾಗಿ ದುಡಿಯುತ್ತಿದ್ದಾರೆ. ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಈ ಮಹಿಳೆ ಆಲುವಾಕ್ಕೆ ಹೋಗಿದ್ದರು. ಅಲ್ಲಿ ಅವರು ವಾಸ್ತವ್ಯವಿದ್ದ ಕೊಠಡಿಯ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಆಕೆಗೆ ತಿಳಿಯದಂತೆ ಅಶ್ರಫ್ ಆಕೆಯ ಚಿತ್ರಗಳನ್ನು ತೆಗೆದ ಬಳಿಕ ಆಕೆಗೆ ಬೆದರಿಕೆಯೊಡ್ಡಿ ಆಟೋರಿಕ್ಷಾದಲ್ಲಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.
No comments:
Post a Comment