ದೀಪಪ್ರಜ್ವಲನೆ ಮಾಡುತ್ತಿರುವ ಶ್ರೀ. ರವೀಂದ್ರ ಕಾಮತ (ಎಡದಿಂದ) ಸೌ. ಸಂಗೀತಾ ಪ್ರಭು, ಶ್ರೀ. ಯು ಚಂದ್ರಶೇಖರ ಹೊಳ್ಳ |
ಕಿರಿಮಂಜೇಶ್ವರ : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಫೆಬ್ರವರಿ ೨೦ ರಂದು ಇಲ್ಲಿನ ಶ್ರೀ ಅಗಸ್ತೇಶ್ವರ ದೇವಸ್ಥಾನದ ವಠಾರದಲ್ಲಿ ಹಿಂದೂ ಧರ್ಮಜಾಗೃತಿ ಸಭೆಯು ನಡೆಯಿತು. ಈ ಸಮಯದಲ್ಲಿ ವ್ಯಾಸಪೀಠದ ಮೇಲೆ ಕುಂದಾಪುರ ತಾಲೂಕಿನ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ. ಚಂದ್ರಶೇಖರ ಹೊಳ್ಳ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ರವೀಂದ್ರ ಕಾಮತ ಮತ್ತು ಸನಾತನ ಸಂಸ್ಥೆಯ ಸೌ. ಸಂಗೀತಾ ಪ್ರಭು ಇವರು ಉಪಸ್ಥಿತರಿದ್ದರು. ಶ್ರೀ. ಯು. ಚಂದ್ರಶೇಖರ ಹೊಳ್ಳರವರು ಸನಾತನ ಸಂಸ್ಥೆ ನಿರ್ಮಿತ ‘ಅಗ್ನಿಹೋತ್ರ’ ಗ್ರಂಥವನ್ನು ಬಿಡುಗಡೆಗೊಳಿಸಿದರು. ಈ ಸಭೆಗೆ ೮೫೦ ಕ್ಕೂ ಹೆಚ್ಚು ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು.
ಶ್ರೀ. ಯು. ಚಂದ್ರಶೇಖರ ಹೊಳ್ಳರವರು ಮಾತನಾಡುತ್ತಾ, ‘ಸನಾತನ ಧರ್ಮದ ಬಗ್ಗೆ ನಮ್ಮ ತಿಳುವಳಿಕೆ ಹೆಚ್ಚಬೇಕು. ಇದಕ್ಕಾಗಿ ನಾವು ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು. ಹಿಂದೂಗಳ ಶ್ರೇಷ್ಠ ಪರಂಪರೆಯಲ್ಲಿ ಹಿರಿಯರು, ಗುರುವರ್ಯರಿಗೆ ಕೃತಜ್ಞತೆಯನ್ನು ಅರ್ಪಿಸುವ ಸಂಸ್ಕಾರವಿದೆ; ಆದರೆ ಪ್ರಸ್ತುತ ಇದು ಕ್ಷೀಣವಾಗುತ್ತಿದೆ. ಧರ್ಮಾಚರಣೆಯಿಂದ ಈ ಸಂಸ್ಕಾರ ಮೂಡುವುದು’ ಎಂದರು.ಗಮನಾರ್ಹ ಅಂಶಗಳು
ಹಿಂದೂ ಧರ್ಮಜಾಗೃತಿ ಸಭೆಗೆ ಬಂದ ಓರ್ವ ಧರ್ಮಾಭಿಮಾನಿಯು ಸಭೆಯಿಂದ ಪುನಃ ತನ್ನ ಊರಾದ ಮಸ್ಕಿಗೆ ಹೋಗಿ ಸಭೆಗೆಂದು ಊರಿನ ೩೦ ಜನರನ್ನು ವಾಹನದಲ್ಲಿ ಕರೆದುಕೊಂಡು ಬಂದರು.
No comments:
Post a Comment