ರೈತರ ಆತ್ಮಹತ್ಯೆ ತಡೆಯಲಾಗದ ಜಗತ್ತಿನ ಏಕೈಕ ದೇಶ ಭಾರತ
ಹೊಸದೆಹಲಿ : ೨೦೧೦ ರ ಮೊದಲ ಹತ್ತು ತಿಂಗಳ ಅವಧಿಯಲ್ಲಿ ಕೃಷಿ ಸಂಬಂಧಿ ತೊಂದರೆಗಳಿಂದಾಗಿ ಇಡೀ ದೇಶದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ ೨೭೮; ಅದರಲ್ಲಿ ಅಗ್ರ ಸ್ಥಾನ ಮಹಾರಾಷ್ಟ್ರದ್ದಾದರೆ, ಎರಡನೇ ಸ್ಥಾನ ಕರ್ನಾಟಕದ್ದು. ಹೀಗೆಂದು ಸಂಸತ್ತಿಗೆ ಕೃಷಿ ಮಂತ್ರಿ ಶರದ ಪವಾರರವರು ಲೋಕಸಭೆಯ ಪ್ರಶ್ನೋತ್ತರದ ವೇಳೆ ಲಿಖಿತವಾಗಿ ಉತ್ತರ ನೀಡಿದ್ದಾರೆ.
೨೦೦೯ ರ ಇಡೀ ವರ್ಷದಲ್ಲಿ ದೇಶದಲ್ಲಿ ೮೯೭ ರೈತರು ಆತ್ಮಹತ್ಯೆಗೆ ಶರಣಾಗಿದ್ದರು.ಅದರಲ್ಲಿ ಮಹಾರಾಷ್ಟ್ರ ದಲ್ಲಿ ೫೦೩ ಹಾಗೂ ಕರ್ನಾಟಕದಲ್ಲಿ ೧೧೪ ರೈತರು ಕೃಷಿ ಸಂಬಂಧಿ ಸಮಸ್ಯೆಗಳಿಂದ ಪ್ರಾಣ ಹರಣ ಮಾಡಿಕೊಂಡಿದ್ದರು.
೨೦೦೯ ರ ಇಡೀ ವರ್ಷದಲ್ಲಿ ದೇಶದಲ್ಲಿ ೮೯೭ ರೈತರು ಆತ್ಮಹತ್ಯೆಗೆ ಶರಣಾಗಿದ್ದರು.ಅದರಲ್ಲಿ ಮಹಾರಾಷ್ಟ್ರ ದಲ್ಲಿ ೫೦೩ ಹಾಗೂ ಕರ್ನಾಟಕದಲ್ಲಿ ೧೧೪ ರೈತರು ಕೃಷಿ ಸಂಬಂಧಿ ಸಮಸ್ಯೆಗಳಿಂದ ಪ್ರಾಣ ಹರಣ ಮಾಡಿಕೊಂಡಿದ್ದರು.
೨೦೧೦ ರ ಅಕ್ಟೋಬರ್ ತಿಂಗಳ ವರೆಗೆ ಆಂಧ್ರಪ್ರದೇಶದಲ್ಲಿ ಇಂತಹ ೧೮ ಘಟನೆಗಳು ನಡೆದಿವೆ. ಅದಕ್ಕೂ ಹಿಂದಿನ ವರ್ಷ, ಅಂದರೆ ೨೦೦೯ ರಲ್ಲಿ ೨೪೮ ರೈತರು ಆತ್ಮಹತ್ಯೆ ಮಾಡಿಕೊಂಡರು.
ರೈತರ ಆತ್ಮಹತ್ಯೆಗಳನ್ನು ತಡೆಯಲು ಕೇಂದ್ರಸರಕಾರ ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿನ ೩೧ ಜಿಲ್ಲೆ ಗಳು ಕೃಷಿ ಬಾಧಿತರ ಪರಿಹಾರಕ್ಕಾಗಿ ೨೦೦೬ ರಿಂದ ೧೯,೧೬೩.೯೧ ಕೋಟಿ ರೂಪಾಯಿಗಳನ್ನು ವಿವಿಧ ಪ್ಯಾಕೇಜಿಗಾಗಿ ಬಿಡುಗಡೆ ಮಾಡಿದೆ. (ಸಾವಿರಾರು ಕೋಟಿ ರೂಪಾಯಿ ಒದಗಿಸಿದರೂ ಪ್ರತಿ ವರ್ಷ ರೈತರು ಇಷ್ಟು ದೊಡ್ಡ ಪ್ರಮಾಣದಲ್ಲಿ ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ಇದರರ್ಥ ಈ ಹಣ ಅವರ ತನಕ ತಲುಪುತ್ತಿಲ್ಲ ಅಥವಾ ಈ ನಿಧಿಗಿಂತ ಹೆಚ್ಚು ಹಣದ ಆವಶ್ಯಕತೆ ಇದೆ. ರೈತರ ಸಮಸ್ಯೆಯನ್ನು ಸಂಪೂರ್ಣ ಬಿಡಿಸದ ರಾಜಕಾರಣಿಗಳು ಪ್ರಜಾಪ್ರಭುತ್ವವನ್ನು ನಿರರ್ಥಕಗೊಳಿಸುತ್ತಿದ್ದಾರೆ. - ಸಂಪಾದಕರು)
No comments:
Post a Comment