Showing posts with label ಕ್ರಿಕೆಟ್. Show all posts
Showing posts with label ಕ್ರಿಕೆಟ್. Show all posts

‘ಕ್ರಿಕೆಟ್’, ಒಂದು ರಾಷ್ಟ್ರಘಾತಕ ಆಟ!

ಇಂಗ್ಲೆಂಡಿನಲ್ಲಿ ೧೬ ನೇ ಶತಮಾನದಲ್ಲಿ ಜನಿಸಿದ ಈ ಕ್ರಿಕೆಟ್ ಆಟವು ಬ್ರಿಟೀಷರ ವಸಾಹತುವಾದಿ ವೃತ್ತಿಯಿಂದ ಜಗತ್ತಿನಾದ್ಯಂತ ಅವರ ನೆಲೆಯಿರುವಲ್ಲೆಲ್ಲ ಮತ್ತು ಭಾರತೀಯ ಉಪಖಂಡದಲ್ಲಿಯೂ ಅದರ ಪ್ರಸಾರವಾಯಿತು. ಇದೊಂದು ಆಂಗ್ಲರು ಭಾರತಕ್ಕೆ ‘ಸಂಪೂರ್ಣ ಭಾರತೀಯರನ್ನು ೧೫೦ ವರ್ಷಗಳ ಕಾಲ ಗುಲಾಮರಂತೆ ನಡೆಸಿಕೊಂಡಿದ್ದಕ್ಕೆ ಕೊಟ್ಟ ದೇಣಿಗೆಯಾಗಿದೆ.’ ಕ್ರಿಕೆಟ್ ಆಟ ಆಡುವುದೆಂದರೆ ಭಾರತೀಯರ ಮೇಲಿನ ಆಂಗ್ಲರ ಮಾನಸಿಕ ದಾಸ್ಯತ್ವದ ಲಕ್ಷಣವಾಗಿದೆ. ಭಾರತದಲ್ಲಿ ಈ ಆಟಕ್ಕೆ ಇತ್ತೀಚೆಗೆ ‘ಆತ್ಮಘಾತಕ’ ಜನಪ್ರಿಯತೆ ದೊರಕುತ್ತಿದೆ. ಕ್ರಿಕೆಟ್ ಜನಪ್ರಿಯತೆಗಾಗಿ ‘ಆತ್ಮಘಾತಕ’ವನ್ನು ಏಕೆ ಪ್ರಯೋಗಿಸಲಾಗಿದೆ ಎಂದರೆ ಅದರಿಂದ ಭಾರತೀಯರ ವೈಯಕ್ತಿಕ, ಕೌಟುಂಬಿಕ, ನೈತಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಮತ್ತು ರಾಷ್ಟ್ರೀಯ ಹಾನಿಯಾಗುತ್ತಿದೆ. ಫೆಬ್ರವರಿ ೧೯ ರಿಂದ ಆರಂಭವಾದ ವಿಶ್ವಕಪ್ ಕ್ರಿಕೆಟ್ ಸ್ಪರ್ಧೆಯ ನಿಮಿತ್ತ ಪ್ರಬೋಧನೆಯಾಗಲಿ ಎಂಬ ಉದ್ದೇಶದಿಂದ ಈ ಲೇಖನಮಾಲಿಕೆಯನ್ನು ಪ್ರಸ್ತುತ ಪಡಿಸುತ್ತಿದ್ದೇವೆ. - ಸನಾತನ ಸಂಸ್ಥೆ (ಮುಂದುವರಿದ ಭಾಗ)
೧ ಅ ೫. ಕ್ರಿಕೆಟ್‌ನಿಂದ ಯುವಕರಲ್ಲಿ ಮನೆ ಮಾಡಿರುವ ಬಡಾಯಿಕೊಚ್ಚಿ ಕೊಳ್ಳುವ ಸ್ವಭಾವ ! : ಸಾರ್ವಜನಿಕ ರಸ್ತೆಯಲ್ಲಿ ಕ್ರಿಕೆಟ್ ಆಟವನ್ನು ಆಡಿ ಆ ಪರಿಸರದಲ್ಲಿ ವಾಸಿಸುವವರಿಗೆ ಹಾಗೂ ಓಡಾಡುವವರಿಗೆ ತೊಂದರೆಯಾಗುವಂತೆ ವರ್ತಿಸುವ ಯುವಕರು ಕಂಡು ಬರುತ್ತಾರೆ. ಭಾನುವಾರ ಹಾಗೂ ರಜೆಯ ದಿನಗಳು ಬಂದರೆ ಈ ಯುವಕರ ತಂಡ ರಸ್ತೆಯ ಮೇಲಿರುತ್ತದೆ. ದಾರಿಯಲ್ಲಿ ಓಡಾಡುತ್ತಿರುವ ಜನರು, ವೃದ್ಧರು, ರೋಗಿಗಳು ನಾಗರಿಕರು, ಬಸುರಿ ಹೆಂಗಸರಿಗೆ ಹೀಗೆ ಎಲ್ಲರಿಗೂ ಇದರಿಂದ ಅಡಚಣೆಯೇ ಆಗುತ್ತದೆ. ಆ ಪರಿಸರದಲ್ಲಿ ವಾಸಿಸುವ ಜನರು ಈ ಆಟದಿಂದಾಗುವ ಪ್ರಚಂಡ ಗದ್ದಲ ಸಹಿಸಿಕೊಳ್ಳಬೇಕಾಗುತ್ತದೆ.
೧ ಅ ೫ ಅ. ರಸ್ತೆಯ ಮೇಲೆ ಕ್ರಿಕೆಟ್ ಆಡಲು ನಿರ್ಬಂಧ ಹೇರುವವರ ಮೇಲೆ ಪ್ರಾಣಘಾತಕ ಹಲ್ಲೆ ಮಾಡುವ ಯುವಕರು ! : ಪಂಜಾಬಿನ ಜಲಂಧರ್ ಜಿಲ್ಲೆಯ ಸಾತೋವಾಲೀ ಎಂಬ ಹಳ್ಳಿಯಲ್ಲಿರುವ ಧರ್ಮಶಾಲೆಯ ಪರಿಸರದಲ್ಲಿ ‘ಕ್ರಿಕೆಟ್ ಆಡಬೇಡಿ’ ಎಂದು ಧರ್ಮಶಾಲೆಯ ಅಧ್ಯಕ್ಷರಾದ ಕುಲದೀಪ್ ಕುಮಾರ್‌ರವರು ಯುವಕರಲ್ಲಿ ವಿನಂತಿಸಿದರು. ಅವರ ಇಂತಹ ಹೇಳಿಕೆ ಈ ಯುವಕರಿಗೆ ಹಿಡಿಸಲಿಲ್ಲ. ರಾತ್ರಿಯ ಸಮಯದಲ್ಲಿ ಕುಲದೀಪ್ ಕುಮಾರ್ ಇವರು ತಮ್ಮ ಸಹೋದರನೊಂದಿಗೆ ಹೊಲದಲ್ಲಿ ಬರುತ್ತಿರುವಾಗ ಓಂಪ್ರಕಾಶ್ ಸಿಂಗ್ ಹಾಗೂ ರಣಜಿತ ಸಿಂಗ್ ಎಂಬ ಯುವಕರು ಖಡ್ಗದಿಂದ ಹಲ್ಲೆ ನಡೆಸಿ ಅವರನ್ನು ಘಾಸಿಗೊಳಿಸಿದರು. ನಂತರ ಅವರು ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರೆಳೆದರು. (ದೈನಿಕ ಪುಢಾರೀ, ೧೭ ಜೂನ್ ೧೯೯೯)
೧ ಅ ೫ ಆ. ಮಹಾವಿದ್ಯಾಲಯದ ಪರಿಸರದಲ್ಲಿ ಬಿದ್ದಿರುವ ಚೆಂಡನ್ನು ತೆಗೆದು ಕೊಳ್ಳಲು ಹೋದವರಿಗೆ ಬೈದರೆಂದು ಶ್ರೀಮತಿ ನಾಥಿಬಾಯಿ ದಾಮೋದರ ಠಾಕರಸೀ ಮಹಾವಿದ್ಯಾಲಯದ ಉಪ ಕುಲಪತಿಯವರಿಗೆ ಕ್ರಿಕೆಟ್ ಆಡುವ ಯುವಕರು ಹೊಡೆಯುವುದು ! : ೩೧ ಡಿಸೆಂಬರ್ ೧೯೯೮ ರಂದು ಬೆಳಗ್ಗೆ ೧೧ ಗಂಟೆಗೆ ಕ್ರಿಕೆಟ್ ಆಡುವಾಗ ಯುವಕರು ಮುಂಬೈಯಲ್ಲಿನ ಸಾಂತಾಕ್ರೂಝ (ಪಶ್ಚಿಮ) ದಲ್ಲಿರುವ ಶ್ರೀಮತಿ ನಾಥೀಬಾಯಿ ದಾಮೋದರ ಠಾಕರಸೀ ಮಹಾವಿದ್ಯಾಲಯದಲ್ಲಿ ಬಿದ್ದ ಚೆಂಡನ್ನು ತರಲು ಮಹಾ ವಿದ್ಯಾಲಯದ ಪರಿಸರಕ್ಕೆ ನುಗ್ಗಿದರು. ಆಗ ಅವರಿಗೆ ಉಪಕುಲಪತಿಗಳಾದ ವಿನೋದ ದಹಾಟೆಯವರು ಬೈದರು. ಮಧ್ಯಾಹ್ನ ವೈದ್ಯರ ಬಳಿ ಹೋಗುವ ಸಲುವಾಗಿ ಪರಿಸರದಿಂದ ತಮ್ಮ ದ್ವಿಚಕ್ರವಾಹನದಲ್ಲಿ ಹೋಗುವಾಗ ಅವರ ಮೇಲೆ ಆಟವಾಡುವ ಬ್ಯಾಟ್, ‘ಸ್ಟಂಪ್’ ಇತ್ಯಾದಿಗಳನ್ನು ಬಳಸಿ ಶ್ರೀ. ದಹಾಟೆಯವರ ಮೇಲೆ ಹಲ್ಲೆ ಮಾಡಿದರು. ನರಳುತ್ತಾ ಬಿದ್ದಿದ್ದ ದಹಾಟೆಯವರನ್ನು ಪರಿ ಸರದಲ್ಲಿದ್ದ ಓರ್ವ ಮಹಿಳೆಯು ಆಸ್ಪತ್ರೆಗೆ ಸೇರಿಸಿದರು. (ದೈನಿಕ ಲೋಕಸತ್ತಾ, ೩ ಜನವರಿ ೧೯೯೯)     

ಕ್ರಿಕೆಟ್‌ನ ಮಾಯಾವೀ ಸ್ವರೂಪವನ್ನು ಬಹಿರಂಗಗೊಳಿಸುವ ಈಶ್ವರೀಜ್ಞಾನ!
೩ ಅ. ಮಾಂತ್ರಿಕರು ಖರ್ಚು ಮಾಡಬೇಕಾಗುವ ಶಕ್ತಿ
ಕ್ರಿಕೆಟ್‌ನಂತಹ ಮಾಯಾವೀ ಆಟವೆಂದರೆ ಒಂದು ರೀತಿಯ ತಿಲಿಸ್ಮವೇ ಆಗಿರುತ್ತದೆ. (‘ತಿಲಿಸ್ಮ’ ಎಂದರೆ ಉರ್ದು ಭಾಷೆಯಲ್ಲಿ ಇದಕ್ಕೆ ಪಂಜರ ಎನ್ನುತ್ತಾರೆ. ಪಾತಾಳದ ಮಾಂತ್ರಿಕರ ಮಾಯಾವೀ ಆಟದ ಪಂಜರ ‘ಮಾಯಾವೀ ಆಟದ ತಿಲಿಸ್ಮ ಎನ್ನಲಾಗಿದೆ.) ಇಂತಹ ತಿಲಿಸ್ಮವನ್ನು ನಿರ್ಮಿಸಲು ಮಾಂತ್ರಿಕರಿಗೆ ತಮ್ಮ ೨೦೦ ವರ್ಷಗಳ ಸಾಧನೆಯನ್ನು ಖರ್ಚು ಮಾಡಬೇಕಾಯಿತು.
೩ ಆ. ಕ್ರಿಕೆಟ್‌ನ ಬಗ್ಗೆ ಸೂಕ್ಷ್ಮಪ್ರಕ್ರಿಯೆ
ಭೂಮಿಯ ಮೇಲಿನ ವಾಯುಮಂಡಲದ ಕಂಪನ ಹಾಗೂ ಒತ್ತಡದಿಂದ ನಿರ್ಮಾಣವಾಗುವ ತೊಂದರೆದಾಯಕ ಲಹರಿಗಳಿಂದ ಶರೀರದಲ್ಲಿ ವಿಶಿಷ್ಟ ರೀತಿಯ ಕ್ರಿಯೆಗಳ ಮುಖಾಂತರ ಸಂಗೋಪನೆ ಮತ್ತು ಗ್ರಹಣವಾಗುತ್ತದೆ. ಈ ರೀತಿಯ ಅಧ್ಯಯನ ಮಾಡಿ ಭೂಮಿಯೊಂದಿಗೆ ಏಕೀಕೃತ ತೇಜತತ್ತ್ವಾತ್ಮಕ ರಜೋಗುಣಿ ಘರ್ಷಣಯುಕ್ತ ರೇಷೆಯ ಆಧಾರದಲ್ಲಿ ೧೧ ರೀತಿಯ ತಮೋಗುಣ ಹೆಚ್ಚಿಸುವ ಸೂಕ್ಷ್ಮ ಚಕ್ರಗಳ ಉತ್ಪತ್ತಿಯಾಗಿ ವೇಗದ ಆಧಾರದಲ್ಲಿ ಕ್ರಿಕೆಟ್‌ನಂತಹ ತಿಲಿಸ್ಮಾವನ್ನು ನಿರ್ಮಿಸಲಾಗಿದೆ.
೩ ಆ. ಕ್ರಿಕೆಟ್‌ನಂತಹ ಮಾಯಾವೀ ಆಟದ ವೈಶಿಷ್ಟ್ಯಗಳು
ಅ. ಕ್ರಿಕೆಟ್ ಇದು ಮಾಯಾವೀ ಆಟವಾಗಿರುವುದರಿಂದ ಈ ಆಟವು ಪ್ರಸಾರವಾಗುತ್ತಿರುವಾಗ (ದೂರದರ್ಶನ ಮತ್ತು ಆಕಾಶವಾಣಿಗಳಲ್ಲಿ) ಅದನ್ನು ದೃಶ್ಯಸ್ವರೂಪದಲ್ಲಿ ನೋಡುವ ಜೀವಗಳ ಮೇಲೆ ಶೇ. ೩೦ ರಷ್ಟು ಮತ್ತು ಕೇಳುವ ಜೀವಗಳ ಮೇಲೆ ಶೇ. ೧೦ ರಷ್ಟು ಕಪ್ಪು ಶಕ್ತಿಯ ದಟ್ಟವಾದ, ಜಿಗುಟಾದ ಮತ್ತು ಬಹಳ ಜಡವಾಗಿರುವ ಒಂದು ಅಡಿಯಷ್ಟು ದೊಡ್ಡ ಆವರಣವು ನಿರ್ಮಾಣವಾಗುತ್ತದೆ.
ಆ. ಎಲ್ಲಿ ಕ್ರಿಕೆಟ್ ಆಟವು ನಡೆಯುತ್ತಿರುತ್ತದೆಯೋ ಅಲ್ಲಿನ ತಮಕಣಗಳ ಪ್ರಾಬಲ್ಯವು ಶೇ. ೩೦ ರಷ್ಟು ಹೆಚ್ಚಾಗಿರುತ್ತದೆ.
ಇ. ಕ್ರಿಕೆಟ್‌ನಿಂದ ತೇಜತತ್ತ್ವಾತ್ಮಕ ರಜೋಗುಣಿ ಘರ್ಷಣಾಯುಕ್ತ ರೇಖೆಗಳು ನಿರ್ಮಾಣವಾಗುತ್ತವೆ ಮತ್ತು ಕ್ರಿಕೆಟ್ ಆಟವನ್ನು ನೋಡುವ ಜೀವಗಳ ಸಮೀಪವಿರುವ ೧೧ ಚಕ್ರಗಳ ಮೂಲಕ ಜೀವಗಳ ಪ್ರಾಣಶಕ್ತಿ ಮತ್ತು ವಿವಿಧ ಪ್ರಕಾರದ ಶಕ್ತಿಗಳನ್ನು ಹೀರಿ ಅವುಗಳನ್ನು ಮಾಂತ್ರಿಕರಿಗೆ ಪೂರೈಸಲಾಗುತ್ತದೆ.
ಈ. ಮೈದಾನದಲ್ಲಿ ಕ್ರಿಕೆಟ್ ಆಡುವ ಆಟಗಾರರರು ಪ್ರಕಟಾವಸ್ಥೆಯಲ್ಲಿರುತ್ತಾರೆ (ಮಾಂತ್ರಿಕರು ಪ್ರಕಟವಾಗಿರುತ್ತಾರೆ). ಆದರೆ ‘ಮಾಂತ್ರಿಕರ ಮಾಯಾವೀ ವರ್ತನೆಯಿಂದ ಅವರು ಪ್ರಕಟಾವಸ್ಥೆಯಲ್ಲಿದ್ದಾರೆ’ ಎಂಬುದನ್ನು ಗುರುತಿಸುವುದು ಬಹಳ ಕಠಿಣವಾಗಿರುತ್ತದೆ. - ಧರ್ಮತತ್ತ್ವ (ನಿಷಾದ ದೇಶಮುಖ ಇವರ ಮಾಧ್ಯಮದಿಂದ, ೩೦.೪.೨೦೦೬, ಮಧ್ಯಾಹ್ನ ೩.೦೫)

‘ಕ್ರಿಕೇಟ್’, ಒಂದು ರಾಷ್ಟ್ರಘಾತಕ ಆಟ!

ಇಂಗ್ಲೆಂಡಿನಲ್ಲಿ ೧೬ನೇ ಶತಮಾನದಲ್ಲಿ ಜನಿಸಿದ ಈ ಕ್ರಿಕೇಟ್ ಆಟವು ಬ್ರಿಟೀಷರ ವಸಾಹತುವಾದಿ ವೃತ್ತಿಯಿಂದ ಜಗತ್ತಿನಾದ್ಯಂತ ಅವರ ನೆಲೆಯಿರುವಲ್ಲೆಲ್ಲ ಮತ್ತು ಭಾರತೀಯ ಉಪಖಂಡದಲ್ಲಿಯೂ ಅದರ ಪ್ರಸಾರವಾಯಿತು. ಇದೊಂದು ಆಂಗ್ಲರು ಭಾರತಕ್ಕೆ ‘ಸಂಪೂರ್ಣ ಭಾರತೀಯರನ್ನು ೧೫೦ವರ್ಷಗಳ ಕಾಲ ಗುಲಾಮರಂತೆ ನಡೆಸಿಕೊಂಡದ್ದಕ್ಕೆ ಕೊಟ್ಟ ದೇಣಿಗೆಯಾಗಿದೆ.’ ರಾಷ್ಟ್ರೀಯ ಗೌರವದ ದೃಷ್ಟಿಕೋನದಿಂದ ಯಾವ ರೀತಿಯಲ್ಲಿ ಆಂಗ್ಲರು ನೀಡಿದ ಆಂಗ್ಲಭಾಷೆಯಲ್ಲಿ ಇಂದು ಭಾರತೀಯರು ಸಂಭಾಷಣೆ ಮಾಡುವುದು ಮಾನಸಿಕ ದಾಸ್ಯತ್ವವಾಗಿದೆಯೋ ಅದರಂತೆ ಕ್ರಿಕೇಟ್ ಆಟ ಆಡುವುದೆಂದರೆ ಭಾರತೀಯರ ಮೇಲಿನ ಆಂಗ್ಲರ ಮಾನಸಿಕ ದಾಸ್ಯತ್ವದ ಲಕ್ಷಣವಾಗಿದೆ. ಭಾರತದಲ್ಲಿ ಈ ಆಟಕ್ಕೆ ಇತ್ತೀಚೆಗೆ ‘ಆತ್ಮಘಾತಕ’ ಜನಪ್ರಿಯತೆ ದೊರಕುತ್ತಿದೆ. ಕ್ರಿಕೇಟ್ ಜನಪ್ರಿಯತೆಗಾಗಿ ‘ಆತ್ಮಘಾತಕ’ವನ್ನು ಏಕೆ ಪ್ರಯೋಗಿಸಲಾಗಿದೆ ಎಂದರೆ ಅದರಿಂದ ಭಾರತೀಯರ ವೈಯಕ್ತಿಕ, ಕೌಟುಂಬಿಕ, ನೈತಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಮತ್ತು ರಾಷ್ಟ್ರೀಯ ಹಾನಿಯಾಗುತ್ತಿದೆ. ಫೆಬ್ರವರಿ ೧೯ರಿಂದ ಆರಂಭವಾದ ವಿಶ್ವಕಪ್ ಕ್ರಿಕೇಟ್ ಸ್ಪರ್ಧೆಯ ನಿಮಿತ್ತ ಪ್ರಬೋಧನೆಯಾಗಲಿ ಎಂಬ ಉದ್ದೇಶದಿಂದ ಈ ಲೇಖನ ಮಾಲಿಕೆಯನ್ನು ಪ್ರಸ್ತುತ ಪಡಿಸುತ್ತಿದ್ದೇವೆ. - ಸನಾತನ ಸಂಸ್ಥೆ
೧. ಕ್ರಿಕೇಟ್‌ನಿಂದಾಗುವ ಎಲ್ಲ ಪ್ರಕಾರದ ಹಾನಿ!
ತತ್ತ್ವಜ್ಞಾನಿ ಲಾರ್ಡ್ ಬರ್ನಾರ್ಡ್ ಶಾರವರು, ‘ಇಬ್ಬರು ಆಡುವ, ಹನ್ನೊಂದು ಜನರು ಓಡುವ ಮತ್ತು ಲಕ್ಷಗಟ್ಟಲೆ ಮೂರ್ಖರು ನೋಡುವ ಆಟವೆಂದರೆ ‘ಕ್ರಿಕೇಟ್!’ ಎಂದಿದ್ದಾರೆ. ಆಟಗಾರರಿಗೆ ಲಕ್ಷ ಗಟ್ಟಲೆ ರೂಪಾಯಿಗಳ ಗೌರವಧನ ಹಾಗೂ ಪಂದ್ಯವನ್ನು ತೋರಿಸುವ ದೂರದರ್ಶನ ವಾಹಿನಿಗಳಿಗೆ ಕೋಟಿಗಟ್ಟಲೆ ರೂಪಾಯಿಗಳ ಜಾಹೀರಾತು ದೊರಕುವ ಈ ಆಟದಿಂದ ನಾವು ಏನು ಸಾಧಿಸುತ್ತೇವೆ?
೧ಅ.‘ಕ್ರಿಕೇಟ್’ನಿಂದಾಗುವ ಸಾಮಾಜಿಕ ಹಾನಿ!
೧ಅ೧.‘ಕ್ರಿಕೇಟ್’ ಅಂದರೆ ಆಂಗ್ಲರು ಭಾರತೀಯರ ಕೈಗೆ ನೀಡಿದ ಸಮಾಜ ವಿಘಾತಕ ದೀವಟಿಗೆ: ದಾಂಡು ‘ಬ್ಯಾಟ್’ ಮತ್ತು ಚೆಂಡು ಇವು ಆಂಗ್ಲರು ಹೋಗುತ್ತಾ ಭಾರತೀಯರಿಗೆ ನೀಡಿದ ಸಮಾಜವಿಘಾತಕ ದೀವಟಿಗೆಯಾಗಿದೆ. (ಶ್ರೀ.ನಾರಾಯಣ ಪ್ರಹ್ಲಾದ, ಆವಟಿ, ಪುಣೆ, ದೈನಿಕ ಮಹಾರಾಷ್ಟ್ರ ಟೈಮ್ಸ್, ೫.೧೧.೧೯೯೯)
೧ಅ೨. ‘ಕ್ರಿಕೇಟ್’ನಿಂದ ವ್ಯಕ್ತಿಗಾಗುವ ವಿವಿಧ ರೀತಿಯ ಹಾನಿಗಳು!:ಕ್ರಿಕೇಟ್ ಪಂದ್ಯವನ್ನು ಘೋಷಿಸುತ್ತಿದ್ದಂತೆ ವೃದ್ಧರಿಂದ ಚಿಕ್ಕ ಮಕ್ಕಳ ತನಕ ಎಲ್ಲರೂ ಉತ್ಸಾಹದಿಂದಿರುತ್ತಾರೆ; ಆದರೆ ಈ ಪಂದ್ಯದಿಂದ ನಿಜವಾಗಿ ಯಾರಿಗೆ ಲಾಭವಾಗುತ್ತದೆ? ಪಣಕಟ್ಟುವವರಿಗೋ, ದಿನವೊಂದಕ್ಕೆ ೩೦ ಸಾವಿರ ಗೌರವಧನ ಪಡೆಯುವ ಆಟಗಾರರಿಗೋ, ವಿಲ್ಸ್, ಪೆಪ್ಸಿ, ಕೋಕಾಕೋಲಾ ಇತ್ಯಾದಿ ಜಾಹೀರಾತು ಮಾಡುವ ಅಗರ್ಭ ಶ್ರೀಮಂತ  ವಿದೇಶ ಕಂಪನಿಗಳಿಗೋ ಅಥವಾ ಪಂದ್ಯ ಪುರಸ್ಕೃತ ಮಾಡುವ ಸಂಸ್ಥೆಗಳಿಗೋ? ಇತರರಿಗೆಲ್ಲ ಏನು ದೊರಕುತ್ತದೆಯೆಂದರೆ ಒಂದು ದಿನದ ‘ಲೇಟ್ ಮಾರ್ಕ್’, ಟಿಕೇಟಿಗಾಗಿ ಖರ್ಚು, ಪೂರ್ಣ ದಿನ ದೂರದರ್ಶನದ ಎದುರು ಬಿದ್ದುಕೊಳ್ಳುವುದು, ಪಂದ್ಯದ ಸಮಯದಲ್ಲಾಗುವ ಮಾನಸಿಕ ತೊಂದರೆ, ಅನಿಯಮಿತ ನಾಡಿಬಡಿತ, ಜಾಹೀರಾತಿನಿಂದಾಗಿ ಹೊಸ ‘ಫ್ಯಾಶನ್’ ಮಾಡುವ ಬಯಕೆ, ವಿದೇಶಿ ಸಂಸ್ಕೃತಿಯನ್ನು ಅನುಸರಿಸುವ ಇಚ್ಛೆ, ಜಾಹೀರಾತುಗಳಿಗೆ ಬಲಿಯಾಗಿ ಅನಾವಶ್ಯಕವಾಗಿ ಹೊಸ ವಸ್ತುಗಳ ಖರೀದಿ ಮತ್ತು ಖಾಲಿಯಾದ ಕಿಸೆ. (ಸಂಸ್ಕೃತಿ ದರ್ಶನ: ವೈದ್ಯ ಸುವಿನಯ ದಾಮಲೆ, ಅಥರ್ವ ಪ್ಲಾಝಾ, ಕುಡಾಳ, ಸಿಂಧುದುರ್ಗ ಜಿಲ್ಲೆ)
೧ಅ೩.‘ಕ್ರಿಕೇಟ್’ನಿಂದಾಗಿ ಸಮಾಜ ಮನದ ಮೇಲಾಗುವ ತಪ್ಪು ಪರಿಣಾಮ: ಜನತೆಯು ಈ ಆಟಗಾರರನ್ನು ಎಷ್ಟೆಂದು ತಲೆಯ ಮೇಲೆ ಕೂರಿಸುವುದು? ಭಾರತೀಯ ಕ್ರಿಕೇಟ್‌ಪಟುಗಳನ್ನು ಚಿಕ್ಕವರಿಂದ ಹಿಡಿದು ದೊಡ್ಡವರೆಲ್ಲರೂ ತಲೆಯ ಮೇಲೆ ಕೂರಿಸಿದ್ದಾರೆ.
ಯಾರಾದರೊಬ್ಬ ಕ್ರಿಕೇಟ್ ಪಟು ದೂರ ದರ್ಶನದ ಜಾಹೀರಾತಿನಲ್ಲಿ ಕಾಣಿಸಿ ಕೊಂಡರೆ ಸಾಕು ಮಹಾವಿದ್ಯಾಲಯದ ಯುವತಿಯರು ಹುಚ್ಚರಂತಾಗುತ್ತಾರೆ. ಪ್ರತ್ಯಕ್ಷ ಕಾಣಿಸಿಕೊಂಡರಂತೂ ಕೇಳಲೇ ಬೇಡಿ! ಅವನ ಹಸ್ತಾಕ್ಷರ/ ಸಹಿ ಪಡೆಯಲು ಮಿತಿಮೀರಿ ಶ್ರಮ ಪಡುತ್ತಾರೆ. ಅದಕ್ಕಾಗಿ ಅವರಿಗೆ ಎಷ್ಟೇ ಬಿಸಿಲಿನಲ್ಲಿ, ಮಳೆಯಲ್ಲಿ ಹೋಗಬೇಕಾದರೂ ತೊಂದರೆಯೆನಿಸುವುದಿಲ್ಲ; ಆದರೆ ತಂದೆ-ತಾಯಿಯರು ಏನಾದರೂ ಕೆಲಸ ಹೇಳಿದರೆ ಮಾತ್ರ ಅವರಿಗೆ ಸಮಯವಿರುವುದಿಲ್ಲ. (ಸಂಸ್ಕೃತಿ ದರ್ಶನ: ವೈದ್ಯ ಸುವಿನಯ ದಾಮಲೆ, ಅಥರ್ವ ಪ್ಲಾಝಾ, ಕುಡಾಳ, ಸಿಂಧುದುರ್ಗ ಜಿಲ್ಲೆ)
೧ಅ೪.‘ಕ್ರಿಕೇಟ್’ನಿಂದಾಗುವ ಅಕ್ಷಮ್ಯ ಸಾಮಾಜಿಕ ಹಾನಿ: ಕ್ರಿಕೇಟ್‌ನಿಂದ ಹೊಸ ಯುವ ಪೀಳಿಗೆಯು ನಿಷ್ಕ್ರಿಯವಾಗಿದೆ. ‘ಕ್ರಿಕೇಟ್’ ಹುಚ್ಚು ಬೇರೆ ಮತ್ತು ಅದಕ್ಕೆ ತುತ್ತಾಗಿರುವುದೇ ಬೇರೆ. ಕ್ರಿಕೇಟ್ ಸಂಭ್ರಮದಲ್ಲಿ ತಮ್ಮ ಜನಜೀವನ, ಸಾಮಾಜಿಕ ಜೀವನ ಮತ್ತು ಸಂಪೂರ್ಣ ದೇಶದ ವ್ಯವಹಾರ ಹಾಗೂ ಆರ್ಥಿಕವ್ಯವಸ್ಥೆಯೆಲ್ಲ ಹದಗೆಡುತ್ತದೆ. ದೂರದರ್ಶನದ ಕೇಬಲ ವಾಹಿನಿಗಳು ಮತ್ತು ‘ಕ್ರಿಕೇಟ್’ ನಿಂದ ನಾವು ನಮ್ಮ ಯುವ ಪೀಳಿಗೆಯನ್ನು ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ ದೃಷ್ಟಿಯಿಂದ ಕಳೆದುಕೊಂಡಿದ್ದೇವೆ. ತಂದೆ-ತಾಯಿಯಂದಿರು ಕೆಲಸಕ್ಕೆ ಹೋದ ನಂತರ ಮನೆಯಲ್ಲಿರುವ ಎಳೆಯ ಮಕ್ಕಳ ಮೇಲೆ ಆಂಗ್ಲ ವಾಹಿನಿಗಳು ಸಂಸ್ಕಾರ ಮಾಡುತ್ತವೆ. ಅದರ ನಂತರ ಹೊರಗೆ ಆಡಲು ಹೋಗುವುದೆಂದರೆ ಕ್ರಿಕೇಟ್ ಬಿಟ್ಟು ಇತರ ಯಾವುದೇ ಆಟವು ತಿಳಿಯುವುದಿಲ್ಲ. ಅದರಲ್ಲಿ ದೊಡ್ಡ ಸ್ವರದಿಂದ ಕೂಗುವುದು, ದಾಂಡು, ‘ವಿಕೇಟ್’ ಮತ್ತು ಚೆಂಡು ಅಪ್ಪಳಿಸಿ ಆಕ್ರೋಶ ವ್ಯಕ್ತ ಪಡಿಸುವುದು, ಹಿಂಸಕ ವೃತ್ತಿಯಿಂದ ಹೊಡೆದಾಟಕ್ಕಿಳಿಯುವುದು, ವಾಹನ ಮತ್ತು ಮನೆಯ ಗಾಜುಗಳನ್ನು ಒಡೆಯುವುದು, ಇತರರಿಗೆ ಚೆಂಡು ತಗಲಿ ಗಾಯವಾಗಬಹುದು ಎಂಬುದರ ಬಗ್ಗೆ ಗಮನವಿಲ್ಲದಿರುವುದು ಇತ್ಯಾದಿ ವಿಷಯಗಳು ಸತತವಾಗಿ ನಡೆಯುತ್ತಿರುತ್ತವೆ. ಸಾಯಂಕಾಲವಾಗುತ್ತಲೇ ಕಟ್ಟೆಯ ಮೇಲೆ ಗುಂಪು ಸೇರುವುದು, ಹೋಗಿ ಬರುವ ಜನರನ್ನು ಛೇಡಿಸುವುದು, ಅಶ್ಲೀಲ ಮಾತನಾಡುವುದು, ಶೀಟಿ ಊದುವುದು ಇತ್ಯಾದಿ ಪ್ರಕಾರಗಳು ನಡೆಯುತ್ತವೆ. ಮಕ್ಕಳು ಕೆಟ್ಟವರ ಸಹವಾಸದಲ್ಲಿ ಸೇರಿಕೊಂಡಿದ್ದಾರೆ, ಎಂಬುದು ಎಷ್ಟೋ ತಿಂಗಳುಗಳ ತನಕ ತಂದೆ-ತಾಯಿಗೆ ತಿಳಿಯುವುದಿಲ್ಲ ಮತ್ತು ಅದು ತಿಳಿಯುವಾಗ ಸಮಯ ಮೀರಿ ಹೋಗಿರುತ್ತದೆ. ಇದರಿಂದಲೇ ಪತಿ-ಪತ್ನಿ ಒತ್ತಡ, ಜವಾಬ್ದಾರಿಯನ್ನು ಪರಸ್ಪರರ ಮೇಲೆ ಹಾಕುವ ವೃತ್ತಿ, ಮನೆಯಲ್ಲೇ ಆಗುವ ಕಳ್ಳತನ ಇದರಿಂದ ಕೌಟುಂಬಿಕ ವಾತಾವರಣವು ಹದಗೆಡುತ್ತದೆ. - ವಸಂತ ನಾನವಟಕರ, ಸಾಂತಾಕ್ರುಝ, ಮುಂಬೈ. (ದೈನಿಕ ಮಹಾರಾಷ್ಟ್ರ ಟೈಮ್ಸ್, ೩೦.೧೧. ೧೯೯೮)