ಹಿಂದೂ ಜನಜಾಗೃತಿ ಸಮಿತಿ ಕಾನೂನು ಮಾರ್ಗದಿಂದ ಮಾಡಿದ ವಿರೋಧದ ಫಲಿತಾಂಶ!
ಮುಂಬೈ: ದೆಹಲಿಯ ‘ದಿಲ್ಲಿ ಆರ್ಟ್ ಗ್ಯಾಲರಿ’ಯ ಸಭಾಗೃಹದಲ್ಲಿ ‘ಇಂಡಿಯಾ ಆರ್ಟ್ ಸಮ್ಮಿಟ್’ ಚಿತ್ರ ಗಳ ಪ್ರದರ್ಶನವನ್ನು ಆಯೋಜಿಸಿತ್ತು. ಈ ಪ್ರದರ್ಶನದಲ್ಲಿ ಹಿಂದೂದ್ವೇಷಿ ಚಿತ್ರಕಾರ ಮಕ್ಬುಲ ಫಿದಾ ಹುಸೇನರು ಚಿತ್ರಿಸಿದ ಹಿಂದೂ ದೇವತೆಗಳ ವಿಡಂಬನಾತ್ಮಕ ಚಿತ್ರಗಳನ್ನು ಇಡಲಾಗಿತ್ತು. ಇದನ್ನು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕಾನೂನು ಮಾರ್ಗದಿಂದ ವಿರೋಧಿಸಲಾಯಿತು. ಇದರ ಬಗ್ಗೆ ‘ಹಿಂದೂಜಾಗೃತಿ ಡಾಟ್ ಆರ್ಗ್’ ಈ ಸಂಕೇತಸ್ಥಳದಲ್ಲಿ ಮತ್ತು ‘ಸನಾತನ ಪ್ರಭಾತ’ದಲ್ಲಿ ವಾರ್ತೆಯನ್ನು ಪ್ರಕಟಿಸಲಾಗಿತ್ತು. ಆದ್ದರಿಂದ ಅನೇಕ ಧರ್ಮಾಭಿಮಾನಿ ಹಿಂದೂಗಳು ವಿ-ಅಂಚೆ ಮತ್ತು ದೂರವಾಣಿಯ ಮೂಲಕ ಈ ಚಿತ್ರಗಳನ್ನು ವಿರೋಧಿಸುವ ಚಳುವಳಿಯಲ್ಲಿ ಭಾಗವಹಿಸಿದರು. ಈ ವಿರೋಧದಿಂದ ‘ಇಂಡಿಯಾ ಆರ್ಟ್ ಸಮ್ಮಿಟ್’ ಈ ಚಿತ್ರಗಳನ್ನು ಇಡುವುದಿಲ್ಲವೆಂದು ನಿರ್ಧರಿಸಿತು. (ಒಂದು ಸಣ್ಣ ಹಿಂದೂ ಜನಜಾಗೃತಿ ಸಮಿತಿಯು ಈಶ್ವರನ ಅಧಿಷ್ಠಾನದಿಂದಲೇ ಧರ್ಮಹಾನಿಯನ್ನು ತಡೆಯುವಲ್ಲಿ ಯಶಸ್ವಿಯಾಗುತ್ತದೆ. ಇದರಿಂದ ಪಾಠ ಕಲಿತು ಇತರ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು ಸಾಧನೆ ಮಾಡುವರೇ? - ಸಂಪಾದಕರು)
‘ಧರ್ಮನಿರಪೇಕ್ಷ’ ಇದರ ಅರ್ಥ ‘ಧರ್ಮವಿರುದ್ಧ, ಧರ್ಮವಿರಹಿತ (ನಿಧರ್ಮಿ)’ ಎಂದಾಗಿದೆ’. (ಸಾವರಕರ ಟೈಮ್ಸ್, ಮೇ ೨೦೧೦)
‘ಧರ್ಮನಿರಪೇಕ್ಷ’ ಇದರ ಅರ್ಥ ‘ಧರ್ಮವಿರುದ್ಧ, ಧರ್ಮವಿರಹಿತ (ನಿಧರ್ಮಿ)’ ಎಂದಾಗಿದೆ’. (ಸಾವರಕರ ಟೈಮ್ಸ್, ಮೇ ೨೦೧೦)
No comments:
Post a Comment