ಹಿಂದೂಗಳೇ, ನೈತಿಕತೆಯನ್ನು ನಾಶ ಮಾಡುವ ‘ವೆಲೆಂಟೈನ್ ಡೇ’ಯನ್ನು ವಿರೋಧಿಸಿರಿ!

ಎಲ್ಲ ಪಂಥದ ಜನರು ತಮ್ಮ ಪಂಥಗಳಿಗನುಸಾರ ಆಚರಣೆ ಮಾಡುತ್ತಿರುವಾಗ ಜಗತ್ತಿನ ಸರ್ವಶ್ರೇಷ್ಠ ಪರಂಪರೆಯನ್ನು ಹೊಂದಿದ ಹಿಂದೂ ಧರ್ಮೀಯರು ಮಾತ್ರ ಪಾಶ್ಚಾತ್ಯರ ಸಾಮಾನ್ಯ ಸಂಸ್ಕೃತಿಯನ್ನು ತಮ್ಮ ಸಂಸ್ಕೃತಿಯೆಂದು ತಿಳಿದುಕೊಳ್ಳುವ ಹುಚ್ಚುತನ ಮಾಡುತ್ತಿದ್ದಾರೆ. ಪಾಶ್ಚಾತ್ಯ ಜಗತ್ತಿನಲ್ಲಿ ೧೪ ಫೆಬ್ರವರಿಯು ‘ವೆಲೆಂಟೈನ್ ಡೇ’ ಎಂದು ಗುರುತಿಸಲ್ಪಡುತ್ತದೆ. ಈ ದಿನ ಯುವಕ-ಯುವತಿಯರು ಪ್ರೇಮದ ಪ್ರತೀಕವೆಂದು ಪರಸ್ಪರರಿಗೆ ಹೂವು ಮತ್ತು ಉಡುಗೊರೆಗಳನ್ನು ಕೊಡುತ್ತಾರೆ. ಈಗ ಈ ದುರಭ್ಯಾಸ ಭಾರತಕ್ಕೂ ತಗಲಿದೆ. ‘ವೆಲೆಂಟೈನ್ ಡೇ’ಯಂದು ಹೆಚ್ಚಾಗಿ ಯುವಕ-ಯುವತಿಯರಿಂದ ಅನೈತಿಕ ಕೃತ್ಯಗಳೂ ಘಟಿಸುತ್ತವೆ. ಆಚಾರ ವಿಚಾರಗಳ ಸುಸಂಸ್ಕೃತಿ ಹೊಂದಿರುವ ಭಾರತದಲ್ಲಿ ಯುವ ಪೀಳಿಗೆಯಿಂದಾಗುತ್ತಿರುವ ಇಂತಹ ಅಧಃಪತನವು ದೊಡ್ಡ ಸಾಮಾಜಿಕ ಸಮಸ್ಯೆಯಾಗಿದೆ.

ಕ್ರೈಸ್ತ ಸಂತ (?) ‘ವೆಲೆಂಟೈನ್’ನನ್ನು ಹಿಂದೂಗಳೇಕೆ ಸ್ಮರಿಸಬೇಕು?’
ಮೂರನೆಯ ಶತಮಾನದಲ್ಲಿ ರೋಮ್ ರಾಜನಾದ ಕ್ಲೌಡಿಯಸ್‌ನು (ದ್ವಿತೀಯ) ಯುವಕರು ವಿವಾಹವಾಗದೇ ಸೇನೆಯಲ್ಲಿ ಸೇರಬೇಕು ಎಂಬ ಆದೇಶ ಹೊರಡಿಸಿದ್ದನು. ಈ ಆದೇಶಕ್ಕೆ ಬಗ್ಗದೇ ‘ವೆಲೆಂಟೈನ್’ ಎಂಬ ಧರ್ಮ ಗುರುವು ಯುವಕ-ಯುವತಿಯರಿಗೆ ರಹಸ್ಯವಾಗಿ ವಿವಾಹ ಮಾಡಿಸಿದನು. ರಾಜನು ಅವರಿಗೆ ಸೆರೆಮನೆಗೆ ತಳ್ಳಿದನು ಮತ್ತು ಗಲ್ಲು ಶಿಕ್ಷೆಯನ್ನು ವಿಧಿಸಿದನು. ಸೆರೆಮನೆಯಲ್ಲಿ ಈ ತಥಾಕಥಿತ ಸಂತನು ಸೆರೆಮನೆಯ ಅಧಿಕಾರಿಯ ಪುತ್ರಿಯನ್ನು ಪ್ರೇಮಿಸತೊಡಗಿದನು. ಗಲ್ಲುಶಿಕ್ಷೆಯ ಹಿಂದಿನ ದಿನ ಅವನು ಆ ಯುವತಿಗೆ ‘ನಿನ್ನ ವೆಲೆಂಟೈನ್‌ನಿಂದ’ ಎಂದು ಬರೆದ ಪತ್ರವನ್ನು ಕಳುಹಿಸಿದನು. ಪಾದ್ರಿಯು ಸ್ತ್ರೀ ಮೋಹದಲ್ಲಿ ಸಿಲುಕಿಕೊಳ್ಳುವುದು ಪಾಪವಾಗಿದೆ. ಈ ಪಾಪವನ್ನು ಮಾಡಿದ ತಥಾಕಥಿತ ಸಂತನನ್ನು, ಪ್ರಾಣವನ್ನೂ ಒತ್ತೆಯಿಟ್ಟು ನೈತಿಕ ಮೌಲ್ಯಗಳನ್ನು ಜೋಪಾಸನೆ ಮಾಡುವ ಹಿಂದೂ ಬಹು ಸಂಖ್ಯಾತ ಭಾರತದ ಜನರೇಕೆ ಸ್ಮರಿಸಬೇಕು?
ಯಾವುದೇ ಆಧ್ಯಾತ್ಮಿಕ ಲಾಭವಾಗದ ‘ವೆಲೆಂಟೈನ್‌ಡೇ’!
೧.ಹಿಂದೂ ಧರ್ಮದಲ್ಲಿನ ಆಯಾಯ ಹಬ್ಬ ಮತ್ತು ಉತ್ಸವಗಳಂದು ಶಾಸ್ತ್ರಕ್ಕನುಸಾರ ಕೃತಿಗಳನ್ನು ಮಾಡಿದರೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ. ಆದರೆ ‘ವೆಲೆಂಟೈನ್ ಡೇ’ಯಂದು ಇಂತಹ ಯಾವುದೇ ಆಧ್ಯಾತ್ಮಿಕ ಲಾಭವಾಗುವುದಿಲ್ಲ.
೨.ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದ ಬಂದ ‘ವೆಲೆಂಟೈನ್ ಡೇ’ ಯಂತಹ ಹೆಚ್ಚಿನ ‘ಡೇ’ಗಳು ಭೋಗವಾದವನ್ನು ಅವಲಂಬಿಸಿರುತ್ತವೆ. ಅದರ ಅನುಕರಣೆ ಮಾಡಿದರೆ ಸಭ್ಯತೆ ಹಾಗೂ ನೈತಿಕತೆಯು ಅಧಃಪತನವಾಗಿ ವ್ಯಕ್ತಿಯ ವೃತ್ತಿಯು ರಾಜಸಿಕ-ತಾಮಸಿಕವಾಗುತ್ತದೆ. ಆದರೆ ಹಿಂದೂ ಸಂಸ್ಕೃತಿಯ ಸಂಸ್ಕಾರ, ಹಬ್ಬ, ಉತ್ಸವ, ವ್ರತಗಳು ಹಾಗೂ ಧಾರ್ಮಿಕ ಕೃತಿಗಳನ್ನು ಪ್ರತಿನಿತ್ಯ ಪಾಲಿಸಿದರೆ ವೃತ್ತಿಯು ಸಾತ್ತ್ವಿಕವಾಗಿ ಜೀವನವು ಸಂಯಮಿ, ಸುಖಿ ಹಾಗೂ ಸಮಾಧಾನಿಯಾಗುತ್ತದೆ.
‘ವೆಲೆಂಟೈನ್ ಡೇ’ ನಿಮಿತ್ತ ನಡೆಯುವ ವೈಚಾರಿಕ ಹಾಗೂ ಸಾಂಸ್ಕೃತಿಕ ಮತಾಂತರ!
‘ವೆಲೆಂಟೈನ್ ಡೇ’ ನಿಮಿತ್ತ ನಡೆಯುವ ಹಿಂದೂಗಳ ಆಘಾತಕಾರಿ ವೃತ್ತಿಯ ಲಾಭ ಪಡೆದು ಆಧುನಿಕ ಪ್ರಸಾರಮಾಧ್ಯಮಗಳು ಮತ್ತು ಶುಭಾಶಯ ಪತ್ರಗಳನ್ನು ಮಾರಾಟ ಮಾಡುವ ಕಂಪನಿಗಳು ತಮ್ಮ ಸ್ವಾರ್ಥಕ್ಕಾಗಿ ‘ವೆಲೆಂಟೈನ್ ಡೇ’ಯನ್ನು ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹಿಸುತ್ತವೆ. ಇದರಿಂದ ಒಂದು ರೀತಿಯಲ್ಲಿ ಹಿಂದೂಗಳ ವೈಚಾರಿಕ ಮತ್ತು ಸಾಂಸ್ಕೃತಿಕ ಮತಾಂತರವೇ ನಡೆಯುತ್ತಿದೆ.
ಸಂಸ್ಕೃತಿ ಪ್ರೇಮಿ ಹಾಗೂ ರಾಷ್ಟ್ರಪ್ರೇಮಿಗಳಿಗೊಂದು ಕರೆ!
೧.‘ವೆಲೆಂಟೈನ್ ಡೇ’ ಆಚರಣೆಯಾಗದಂತೆ ಮಹಾವಿದ್ಯಾಲಯಗಳ ಯುವಪೀಳಿಗೆಗೆ ಪ್ರಬೋಧನೆ ಮಾಡುವಂತೆ ಪ್ರಾಧ್ಯಾಪಕರು, ಉಪನ್ಯಾಸಕರು, ಸಂಚಾಲಕರು ಹಾಗೂ ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿಗಳಿಗೆ ಕರೆ ನೀಡಿರಿ. ಇದರೊಂದಿಗೆ ನಿಮ್ಮ ಸ್ನೇಹಿತರಲ್ಲಿಯೂ ಇದರ ಬಗ್ಗೆ ಜಾಗೃತಿ ಮೂಡಿಸಿರಿ!
೨.‘ವೆಲೆಂಟೈನ್ ಡೇ’ಯನ್ನು ಆಚರಿಸಲು ಮೂಕಸಮ್ಮತಿ ತೋರುವ ಮಹಾವಿದ್ಯಾಲಯಗಳಿಗೆ ದೂರವಾಣಿಯ ಮೂಲಕ, ಪ್ರತ್ಯಕ್ಷ ಭೇಟಿ ನೀಡಿ ಪ್ರಬೋಧನೆ ಮಾಡಿರಿ!
೩.ಸಂಸ್ಕೃತಿಯ ರಕ್ಷಣೆಗಾಗಿ ಸಂಸ್ಕೃತಿ ಪ್ರೇಮಿ ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಮುಂದೆ ಬರಬೇಕು!

No comments:

Post a Comment