ಪ್ರಸಾರ ಮತ್ತು ಲೆಕ್ಕಪತ್ರದೊಂದಿಗೆ ಸಮನ್ವಯ ಸಾಧಿಸಿರಿ!

ಪ್ರಸಾರ ಮತ್ತು ಲೆಕ್ಕಪತ್ರ ಇವರಲ್ಲಿ ಸಮನ್ವಯವಿರುವುದು ಆವಶ್ಯಕವಿದೆ. ಇವೆರಡೂ ಸಂಗತಿಗಳು ಒಂದು ನಾಣ್ಯದ ಎರಡು ಮುಖಗಳಾಗಿವೆ. ಇವೆರಡೂ ವ್ಯವಸ್ಥಿತವಾಗಿದ್ದರೆ, ಎಲ್ಲ ರೀತಿಯಿಂದಲೂ ಸಮಷ್ಟಿ ಸಾಧನೆಯಾಗುತ್ತದೆ. ಅದಕ್ಕಾಗಿ ಕೆಲವು ಜಿಲ್ಲೆಗಳಲ್ಲಿ ಪ್ರಸಾರ ಮತ್ತು ಲೆಕ್ಕಪತ್ರ ಇವುಗಳ ನಡುವಿನ ಸಮನ್ವಯದ ಅಭಾವದ ಬಗ್ಗೆ ಗಮನಕ್ಕೆ ಬಂದ ವಿಷಯಗಳನ್ನು ಮುಂದೆ ನೀಡುತ್ತಿದ್ದೇವೆ.
೧.ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಜಿಲ್ಲಾ ಸೇವಕರು ಮತ್ತು ಜಿಲ್ಲಾ ಲೆಕ್ಕಪತ್ರ ಸೇವಕರ ನಡುವೆ ಚರ್ಚೆಯಾಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಅದೇ ರೀತಿ ಇವರಿಬ್ಬರಲ್ಲಿ ಪ್ರತಿ ವಾರ ಸತ್ಸಂಗ ನಡೆಯುವುದು ಅಪೇಕ್ಷಿತವಿದೆ. ಆದರೆ ಸದ್ಯ ಅದೂ ನಡೆಯುತ್ತಿಲ್ಲ ಎಂಬುದು ಕಂಡು ಬರುತ್ತಿದೆ.
೨. ಜಿಲ್ಲೆಯ ಸತ್ಸಂಗದ ಸಂದೇಶವು ಬಹಳಷ್ಟು ಸಲ ಜಿಲ್ಲಾ ಲೆಕ್ಕ ವ್ಯವಸ್ಥಾಪನೆಯ ಸೇವಕರಿಗೆ ದೊರಕುವುದಿಲ್ಲ. ಆದುದರಿಂದ ಲೆಕ್ಕಪತ್ರದ ಅಂಶಗಳನ್ನು ಜಿಲ್ಲಾ ಸತ್ಸಂಗದಲ್ಲಿ ಗಾಂಭೀರ್ಯದಿಂದ ಮಂಡಿಸುವುದಿಲ್ಲ.
೩.ಬಾಕಿ ಇರುವ ನಿಯತಕಾಲಿಕೆಯ ವಸೂಲಿ, ಜಾಹೀರಾತಿನ ಬಾಕಿ ಇವು ೨-೩ ತಿಂಗಳಿಗಿಂತ ಹೆಚ್ಚು ಕಾಲ ವಿಳಂಬವಾಗಿರುತ್ತದೆ. ಇದರ ಬಗ್ಗೆ ಜಿಲ್ಲಾಸೇವಕರಿಗೆ ಅರಿವಿರುವುದಿಲ್ಲ. ಅದರಂತೆ ವಸೂಲಿ ಮಾಡುವ ಸಾಧಕರ ವಸೂಲಿಯ ಸೇವೆ ಪೂರ್ಣವಾದ ನಂತರ ಅವರನ್ನು ಇತರ ಸೇವೆಯಲ್ಲಿ ಸೇರಿಸಿಕೊಳ್ಳಬೇಕು.
೪.ಸಾಪ್ತಾಹಿಕ ಮತ್ತು ಮಾಸಿಕ ಇವುಗಳ ವರದಿ ಯೋಗ್ಯ ಸಮಯಕ್ಕೆ ಬಾರದಿರುವುದು, ನಿಯತಕಾಲಿಕೆಯ ಚಂದಾದಾರರಿಗೆ ಸರಿಯಾದ ಸಮಯಕ್ಕೆ ರಶೀದಿಯನ್ನು ಕೊಡದಿರುವುದು, ಚಂದಾದಾರರ ಪಟ್ಟಿಯು ಜಿಲ್ಲಾ ವಿತರಕರೊಂದಿಗೆ ಹೊಂದಾಣಿಕೆಯಾಗದಿರುವುದು.
೫.ಜಿಲ್ಲೆಯಲ್ಲಿ ವ್ಯವಸ್ಥಾಪನೆಯ ಅಂತರ್ಗತ ನಡೆದ ಗಂಭೀರ ತಪ್ಪುಗಳ ಬಗ್ಗೆ ತಕ್ಷಣ ಸಭೆ ನಡೆಯದಿರುವುದು, ಅದರ ಬಗ್ಗೆ ಸಂಬಂಧಿತ ಸಾಧಕರಿಗೆ ಅರಿವು ಮಾಡಿ ಕೊಡದಿರುವುದು. ಉದಾ. ಗ್ರಂಥ ಪ್ರದರ್ಶನದ ಸಮಯದಲ್ಲಿ ಕಾರ್ಯಪದ್ಧತಿಯ ಪಾಲನೆ ಮಾಡದಿರುವುದರಿಂದ ಲೆಕ್ಕಚಾರ ಹೊಂದಾಣಿಕೆಯಾಗಲು ಅಡಚಣೆಯಾಗುವುದು.
೬. ಸದ್ಯ ಜಿಲ್ಲೆಗಳಲ್ಲಿ ನಡೆಯುತ್ತಿರುವ ಚಿಕ್ಕ ಮತ್ತು ದೊಡ್ಡ ಉಪಕ್ರಮದ ನಂತರ ಅದರ ಬಗ್ಗೆ ವರದಿ ಕಳುಹಿಸುವುದು, ಲೆಕ್ಕಪತ್ರಕ್ಕೆ ಬೇಕಾಗುವ ಆವಶ್ಯಕತೆಗಳನ್ನು ಪೂರೈಸುವಲ್ಲಿ ಉದಾಸೀನತೆ ಕಂಡು ಬಂದಿದೆ. ಮೇಲೆ ನಮೂದಿಸಿದ ವಿಷಯಗಳನ್ನು ಪೂರ್ಣಗೊಳಿಸಲು ತುಂಬ ಸಲ ಬೆಂಬೆತ್ತಬೇಕಾಗುತ್ತದೆ. ಉದಾ. ಹಿಂದೂ ಧರ್ಮಜಾಗೃತಿ ಸಭೆಯಾದ ನಂತರ ವರದಿಯನ್ನು ಕಳುಹಿಸುವುದು.
೭. ಜಿಲ್ಲಾ ಸತ್ಸಂಗದಲ್ಲಿ ಸೂಚನೆಯನ್ನು ಗಂಭೀರವಾಗಿ ಓದುವುದಿಲ್ಲ ಹಾಗೂ ಅದರಲ್ಲಿನ ಅವಶ್ಯಕ ಅಂಶಗಳ್ಳು ಸಂಬಂಧಿತರಿಗೆ ತಲುಪುವುದಿಲ್ಲ.
೮. ಜಿಲ್ಲೆಯಲ್ಲಿನ ಲೆಕ್ಕಪತ್ರ ಸೇವಕರಿಗೆ ಸ್ವಭಾವದೋಷ ಸತ್ಸಂಗ, ಕೆಲವು ಮಹತ್ವದ ಕಾರ್ಯಕ್ರಮದ ಬಗ್ಗೆ ಸಂದೇಶ ಕಳುಹಿಸುವುದಿಲ್ಲ. ಅದರಿಂದಲೂ ಆ ಸಾಧಕರು ನಿರಾಶರಾಗುವ ಸಾಧ್ಯತೆ ಹೆಚ್ಚಿರುತ್ತದೆ.
೯. ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪನೆಯ ಸೇವಕರಿಗೆ ದೊಡ್ಡ ಕಾರ್ಯಕ್ರಮದ ಆಯೋಜನೆಯಲ್ಲಿ ಮುಖ್ಯ ಜವಾಬ್ದಾರಿ ನೀಡಲಾಗುತ್ತದೆ ಅಥವಾ ಸತ್ಸಂಗ ಮಹೋತ್ಸವದಲ್ಲಿ ಮಾರ್ಗದರ್ಶನ ಮಾಡಲು ಹೇಳಲಾಗುತ್ತದೆ.
ಜಿಲ್ಲಾ ಲೆಕ್ಕಪತ್ರ ವಿಭಾಗದ ಬಗೆಗಿನ ಮೇಲಿನ ಉದಾಸೀನತೆಯ ಬಗ್ಗೆ ಪ್ರತಿವಾರ ಜಿಲ್ಲಾಸೇವಕರು ಮತ್ತು ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪನೆಯ ಸೇವಕರು ಒಂದೆಡೆ ಬಂದು ಅಡಚಣೆಯನ್ನು ಬಗೆಹರಿಸುವುದು, ಅದರ ಬಗ್ಗೆ ಯೋಗ್ಯ ನಿರ್ಣಯ ತೆಗೆದುಕೊಳ್ಳುವುದು ಆವಶ್ಯಕವಾಗಿದೆ. ಜಿಲ್ಲಾ ಲೆಕ್ಕಪತ್ರ ವಿಭಾಗದ ಸಾಧಕರನ್ನು ಉಪಕ್ರಮದಲ್ಲಿ ಸೇರಿಸಿಕೊಳ್ಳುವಾಗ ಅವರಿಗಿದ್ದ ಸೇವೆಯು ಪೂರ್ಣವಾಗುತ್ತಿದೆಯಲ್ಲ, ಎಂಬುದರತ್ತ ಗಮನಹರಿಸುವುದು ಅವಶ್ಯವಾಗಿದೆ.
ಟಿಪ್ಪಣಿ : ಇನ್ನು ಮುಂದೆ ಇಂತಹ ತಪ್ಪುಗಳ ಬಗ್ಗೆ ಜಿಲ್ಲಾವಾರು ಮಾಹಿತಿಯನ್ನು ಮುದ್ರಿಸಲಾಗುವುದು.

No comments:

Post a Comment