‘ಬ್ರಾಹ್ಮಣವರ್ಣವು ನಾಶದ ಹಂತದಲ್ಲಿರುವುದರಿಂದ ಧರ್ಮಾಚರಣೆಯ ಅಭಾವದಿಂದ ರಾಷ್ಟ್ರಕ್ಕೆ....

ಪ.ಪೂ. ಡಾಕ್ಟರರ ‘ಅನಾದಿ ಕಾಲದಿಂದ ನಡೆಯುತ್ತಿರುವ ಹಿಂದೂ ಧರ್ಮ....’ ಈ ಲೇಖನದ ಕುರಿತು ‘ಓರ್ವ ವಿದ್ವಾಂಸ’ರ ವಿಶ್ಲೇಷಣೆ !

‘ಬ್ರಾಹ್ಮಣವರ್ಣವು ನಾಶದ ಹಂತದಲ್ಲಿರುವುದರಿಂದ ಧರ್ಮಾಚರಣೆಯ ಅಭಾವದಿಂದ ರಾಷ್ಟ್ರಕ್ಕೆ ದುರ್ದೆಶೆ ಪ್ರಾಪ್ತಿಯಾಗಿರುವುದರಿಂದ ರಾಷ್ಟ್ರದ ಸ್ಥಿತಿ ಮರಣೋನ್ಮುಖವಾಯಿತು’ ಎಂದು ತೋರಿಸುವ ಪ.ಪೂ. ಡಾಕ್ಟರರ ಉದ್ಗಾರ!
 
೧. ಡಾ. ಆಠವಲೆ - ಬ್ರಾಹ್ಮಣ ವರ್ಣ ಮುಗಿಯುತ್ತಾ ಬಂದಿರುವುದರಿಂದ ಹಿಂದೂ ಧರ್ಮವನ್ನು ತಿಳಿದಿರುವವರ ಸಂಖ್ಯೆಯು ಅತ್ಯಲ್ಪ ಪ್ರಮಾಣದಲ್ಲಿ ಉಳಿದಿರುವುದರಿಂದ ಧರ್ಮಕ್ಕೆ ಗ್ರಹಣ ಹಿಡಿಯುವುದು ಹಾಗೂ ಅದರಿಂದ ರಾಷ್ಟ್ರದ ಸ್ಥಿತಿ ಮರಣೋನ್ಮುಖ ರೋಗಿಯಂತಾಗುವುದು : ಋಷಿ-ಮುನಿಗಳು ಹೇಳಿದ ಹಿಂದೂ ಧರ್ಮವು ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಮುಂದೆ ಬ್ರಾಹ್ಮಣರು ಅದನ್ನು ಸಾವಿರಾರು ವರ್ಷಗಳ ಕಾಲ ಉಳಿಸಿದರು. ಬ್ರಿಟೀಷರು ಭಾರತಕ್ಕೆ ಬಂದ ನಂತರ ಅವರು ಒಡೆದಾಳುವ ನೀತಿಗನುಸಾರ ವಿವಿಧ ಜಾತಿಗಳಲ್ಲಿ ದ್ವೇಷಭಾವವನ್ನು ನಿರ್ಮಾಣ ಮಾಡಿದರು. ಕೇವಲ ಬ್ರಾಹ್ಮಣರಿಂದಲೇ ಹಿಂದೂ ಧರ್ಮ ಉಳಿದಿರುವುದರಿಂದ ಇತರ ಜಾತಿಯವರನ್ನು ಅವರ ಮೇಲೆ ಆಕ್ರಮಣ ಮಾಡಲು ಪ್ರೋತ್ಸಾಹಿಸಿದರು. ಅದರಿಂದ ಬ್ರಾಹ್ಮಣ ವರ್ಣವು ಮುಗಿಯುತ್ತಾ ಬಂದಿತು ಹಾಗೂ ಅದರಿಂದಾಗಿ ಹಿಂದೂ ಧರ್ಮವನ್ನು ತಿಳಿದಿರುವವರು ಅತ್ಯಲ್ಪ ಪ್ರಮಾಣದಲ್ಲಿ ಉಳಿದಿರುವುದರಿಂದ ಧರ್ಮಕ್ಕೆ ಗ್ರಹಣ ಹಿಡಿದಿದೆ ಹಾಗೂ ಅದರಿಂದ ರಾಷ್ಟ್ರದ ಸ್ಥಿತಿ ಮರಣೋನ್ಮುಖ ರೋಗಿಯಂತಾಗಿದೆ. (ಆಷಾಢ ಕೃ. ೨, ಕಲಿಯುಗ ವರ್ಷ ೫೧೧೨ (೨೮.೭.೨೦೧೦))

೨. ‘ಓರ್ವ ವಿದ್ವಾಂಸ’ರ ವಿಶ್ಲೇಷಣೆ
೨ ಅ. ಧರ್ಮಕ್ಕೆ ಗ್ಲಾನಿ ಬಂದಿರುವುದರಿಂದ ರಾಷ್ಟ್ರಕ್ಕೂ ದುರ್ದೆಶೆ ಪ್ರಾಪ್ತಿಯಾಗುವ ಕಾರಣಗಳು ಹಾಗೂ ಈ ಪ್ರಕ್ರಿಯೆಯ ವೈಶಿಷ್ಟ್ಯಪೂರ್ಣ ಅಂಶಗಳು
೨ ಅ ೧. ಧರ್ಮಭ್ರಷ್ಟತೆಯಿಂದ ಸಮಾಜದಲ್ಲಿ ಸುಖಲೋಲುಪತೆಯ ಹಾವಳಿಯಾಗುವುದು :
ಧರ್ಮ ಉಳಿದರೆ ರಾಷ್ಟ್ರ ಉಳಿಯುತ್ತದೆ ಮತ್ತು ರಾಷ್ಟ್ರ ಉಳಿದರೆ ಮಾತ್ರ ಸಮಾಜ ಉಳಿಯುತ್ತದೆ. ಸಮಾಜದಲ್ಲಿ ಹರಡಿದ ಅನೈತಿಕತೆ, ಭ್ರಷ್ಟಾಚಾರ ಮತ್ತು ಸುಖಲೋಲುಪತೆಗೆ  ಮೂಲ ಕಾರಣ ಧರ್ಮಭ್ರಷ್ಟತೆಯೇ ಆಗಿದೆ.
೨ ಅ ೨. ದುರ್ಜನರು ಹಾಗೂ ಬುದ್ಧಿವಾದಿಗಳು ಧರ್ಮಕ್ಕೆ ಗ್ಲಾನಿ ತರಲು ಪ್ರಯತ್ನಿಸುವುದು : ದುರ್ಜನರು ಹಾಗೂ ಬುದ್ಧಿವಾದಿಗಳು ಪದೇ ಪದೇ ದೇವಸ್ಥಾನಗಳ ಮೇಲೆ, ಸಜ್ಜನರ ಮೇಲೆ, ಬ್ರಾಹ್ಮಣರ ಮೇಲೆ ಆಕ್ರಮಣ ಮಾಡಿ ಧರ್ಮಕ್ಕೆ ಗ್ಲಾನಿ ತರಲು ಪ್ರಯತ್ನಿಸಿದರು. ಭಾರತದ ಮೇಲೆ ಮೊಗಲರು ಹಾಗೂ ವಿದೇಶಿಯರಿಂದಾದ ಆಕ್ರಮಣವು ಸಮಾಜದ ಮೇಲೆ ಮಾತ್ರವಲ್ಲ, ಧರ್ಮದ ಮೇಲಿನ ಅಕ್ರಮಣವೇ ಆಗಿತ್ತು.
೨ ಅ ೩. ಇತರ ಪಂಥದವರು ಹಿಂದೂಗಳ ಧರ್ಮಬಲವನ್ನು ಕಡಿಮೆ ಮಾಡಲು ಪ್ರಯತ್ನಿಸುವುದು : ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಸ್ಥಾಪನೆ ಮಾಡಿ ಬುದ್ಧಿಭ್ರಷ್ಟವಾಗಿರುವ ಸಮಾಜವು ಬೇರೆ ಪಂಥವನ್ನು ನಿರ್ಮಾಣ ಮಾಡಿ ಹಿಂದೂ ಸಮಾಜದಲ್ಲಿ ಒಡಕನ್ನುಂಟು ಮಾಡಿತು. ಅದರಿಂದಾಗಿ ಒಂದು ರೀತಿ ಹಿಂದೂಗಳ ಒಗ್ಗಟ್ಟಿನ ಮೇಲೆಯೇ ಆಕ್ರಮಣವಾಗಿರುವುದರಿಂದ ಧರ್ಮಬಲವು ಕಡಿಮೆಯಾಗಲಾರಂಭಿಸಿತು.
೨ ಅ ೪. ಬುದ್ಧಿವಾದಿ ಜನರು ಆಧುನಿಕತೆಯ ಹೆಸರಿನಲ್ಲಿ ಧರ್ಮಭಗ್ನಗೊಳಿಸಲು ಆರಂಭಿಸಿರುವುದು : ಬುದ್ಧಿವಾದಿ ಜನರು ಆಧುನಿಕತೆಯ ಹೆಸರಿನಲ್ಲಿ ಧರ್ಮದ ವಿರುದ್ಧ ರಣಕಹಳೆಯನ್ನು ಊದಿದರು ಹಾಗೂ ಧರ್ಮಭಗ್ನಗೊಳಿಸಲು ಆರಂಭಿಸಿದರು. ಧರ್ಮಭಗ್ನವೆಂದರೆ ಪ್ರತಿಯೊಂದು ಆಚಾರ ಮತ್ತು ವಿಚಾರದಿಂದ ಧರ್ಮದ ಪಾವಿತ್ರವನ್ನು ನಾಶ ಮಾಡಲು ಪ್ರಯತ್ನಿಸಿ ಸಮಾಜದಲ್ಲಿ ರಜ- ತಮಾತ್ಮಕ ವಿಚಾರಸರಣಿಯ ಪ್ರಸಾರ ಮಾಡುವುದು.
೨ ಅ ೫. ಅಸುರೀ ಶಕ್ತಿಗಳು ಮೊತ್ತ ಮೊದಲು ಬ್ರಾಹ್ಮಣ ವರ್ಣವನ್ನು ಮುಗಿಸುವುದರ ಹಿಂದಿನ ಕಾರಣಗಳು
೨ ಅ ೫ ಅ. ಬ್ರಾಹ್ಮಣವರ್ಣದವರೇ ಧರ್ಮದ ತಾತ್ತ್ವಿಕ ಭಾಗವನ್ನು ಪುರಸ್ಕರಿ ಸುವವರಾಗಿದ್ದಾರೆ : ಆಸುರೀ ಧರ್ಮದ ಪ್ರಸಾರವನ್ನು ಮಾಡುವಾಗ ಪಾತಾಳದ ಶಕ್ತಿಗಳು ಮೊದಲಿಗೆ ಬ್ರಾಹ್ಮಣವರ್ಣವನ್ನು ಮುಗಿಸಲು ಆಯೋಜನೆ ಮಾಡಿದವು; ಏಕೆಂದರೆ ಕೇವಲ ಈ ವರ್ಣವೇ ಧರ್ಮದ ತಾತ್ತ್ವಿಕತೆಯ ಪುರಸ್ಕರ್ತವಾಗಿದೆ.
೨ ಅ ೫ ಆ. ಬ್ರಾಹ್ಮಣವರ್ಣವು ಧರ್ಮವಿಚಾರಗಳ ಸ್ತರದಲ್ಲಿ ಚೈತನ್ಯಯುಕ್ತ ಸಮಾಜವನ್ನು ರಚಿಸುವ ಪ್ರಯತ್ನ ಮಾಡುತ್ತಿರುವುದರಿಂದ ಅದನ್ನೇ ಮುಗಿಸಿ ಬಿಡುವ ಕೂಟನೀತಿಯನ್ನು ಮಾಂತ್ರಿಕರು ಆರಂಭಿಸಿದರು.
೨ ಅ ೫ ಇ. ಧರ್ಮದ ಚಿಂತನೆಯಿಂದ ಸಮಾಜದ ಮೇಲಾಗುವ ಪರಿಣಾಮ
೧. ಧರ್ಮದ ಚಿಂತನೆಯಿಂದ ಬುದ್ಧಿಯು ಸಾತ್ತ್ವಿಕವಾಗುತ್ತದೆ.
೨. ಸಾತ್ತ್ವಿಕ ಬುದ್ಧಿಯಿಂದ ಜನಿಸಿದ ವಿಚಾರಧಾರೆಯಿಂದ ಕೃತಿಗೆ ಸಹಾಯವಾಗುತ್ತಿತ್ತು; ಆದರೆ ಈಗ ಇವೆಲ್ಲ ಪ್ರಕ್ರಿಯೆಗಳು ಕ್ಷೀಣಿಸಿವೆ.
೨ ಅ ೫ ಉ. ಧರ್ಮದ ಮಹತ್ವ ಮತ್ತು ಧರ್ಮವೇ ಪ್ರಕೃತಿಯನ್ನು ನಿರ್ಮಿಸುತ್ತಿರುವ ಪ್ರಕ್ರಿಯೆಗಳು :
೧. ಆಚಾರದಿಂದ ಸಾತ್ತ್ವಿಕ ವಿಚಾರಗಳ ನಿರ್ಮಿತಿಯಾಗುತ್ತದೆ. ಆಚಾರದಿಂದ ಪ್ರಕೃತಿ ನಿರ್ಮಾಣವಾಗುತ್ತದೆ.
೨. ಸಾತ್ತ್ವಿಕ ವಿಚಾರದಿಂದ ಪ್ರಕೃತಿಯಲ್ಲಿ ತತ್ತ್ವಗಳು ತಿಳಿಯುತ್ತವೆ. ಇದನ್ನೇ ‘ಆತ್ಮತತ್ತ್ವ ವನ್ನು ತಿಳಿದುಕೊಳ್ಳುವುದು’ ಎನ್ನುತ್ತಾರೆ.
೩. ಬ್ರಾಹ್ಮಣವರ್ಣದ ಸಾಧನೆಯಿಂದ ವಾಯುಮಂಡಲದ ಶುದ್ಧಿಯಾಗಿ ಸಮಾಜ ದಲ್ಲಿನ ದುಷ್ಟಪ್ರವೃತ್ತಿಯು ನಾಶವಾಗಲು ಸಹಾಯವಾಗುವುದು ಹಾಗೂ ಅದರಿಂದಲೇ ಬ್ರಿಟೀಶರೂಪದ ಅಸುರರು ಬ್ರಾಹ್ಮಣವರ್ಣವನ್ನೇ ಮುಗಿಸಿ ಬಿಡಲು ಪ್ರಯತ್ನಿಸುವುದರ ಕಾರಣಗಳು 
೩ ಅ. ಸಮಾಜದಲ್ಲಿನ ದುಷ್ಟಪ್ರವೃತ್ತಿಯ ನಾಶವಾಗುವುದು
ಬ್ರಾಹ್ಮಣವರ್ಣವು ಧರ್ಮದಲ್ಲಿನ ಮಂತ್ರಶಕ್ತಿಯನ್ನು ಪುರಸ್ಕರಿಸುವುದರಿಂದ ಅವರಲ್ಲಿ ದೈವತಾಜನ್ಯ ತೇಜವು ವಾಸವಾಗಿ ರುತ್ತದೆ. ಇಂತಹ ದೈವತ್ವಜನ್ಯ ತೇಜವು ಇತರ ಜೀವದಲ್ಲಿನ ದುಷ್ಟಪ್ರವೃತ್ತಿಯನ್ನು ನಾಶ ಮಾಡಲು ಮುಂದಾಗಿರುತ್ತದೆ.
೩ ಆ. ಬ್ರಾಹ್ಮಣರೂಪಿ ಧರ್ಮತೇಜ ವನ್ನು ಉಚ್ಚಾಟಿಸಲು ಬ್ರಿಟೀಶರು ಪ್ರಯತ್ನಿ ಸುವುದು : ಬ್ರಾಹ್ಮಣವರ್ಣದ ಅಸ್ತಿತ್ವದಿಂದ ವಾಯುಮಂಡಲವು ಶುದ್ಧವಾಗುವುದರಿಂದ ಬ್ರಿಟೀಷರೂಪದ ಅಸುರರು ಈ ಧರ್ಮ ತೇಜವನ್ನೇ ಉಚ್ಚಾಟಿಸಿ ಭಾರತದಲ್ಲಿ ತಮ್ಮ ಕುಸಂಸ್ಕೃತಿಯನ್ನು ಉದಯಿಸಲು ಷಡ್ಯಂತ್ರ ರೂಪಿಸಿದರು.
೩ ಇ. ಧರ್ಮಭಗ್ನದಿಂದ ಮನಸ್ಸಿನ ವಿಚಾರಧಾರೆ ರಜ-ತಮಾತ್ಮಕವಾಗುವುದು : ಬುದ್ಧಿವಾದಿ ಜೀವಗಳು ಈ ಷಡ್ಯಂತ್ರಕ್ಕೊಳಗಾಗಿ ಅವರೂ ಹಿಂದೂಗಳ ಶ್ರದ್ಧಾಯುಕ್ತ ಪೂಜೆ-ಪುನಸ್ಕಾರಗಳ ವಿಡಂಬನೆ ಮಾಡಲು ಆರಂಭಿಸಿದರು. ಪ್ರತಿಯೊಂದು ಜೀವವೂ ಧರ್ಮಾಚರಣೆ ಮಾಡುವುದನ್ನು ಬಿಟ್ಟಿರುವುದರಿಂದ ಮನಸ್ಸಿನ ವಿಚಾರ ಧಾರೆಗಳು ರಜ-ತಮಾತ್ಮಕವಾಯಿತು. ಇದರಿಂದಲೇ ಅಸುರೀವೃತ್ತಿಯ ಉದಯವಾಯಿತು.
೩ ಈ. ವಿದೇಶಿ ಸುಖಲೋಲುಪತೆಯ ಪ್ರಸಾರವಾಗುವುದು : ಈ ಕುವಿಚಾರಗಳಿಂದ ಮುಂದಿನ ಪೀಳಿಗೆಯ ನಿರ್ಮಾಣವಾಗಿರುವುದರಿಂದ ಜನ್ಮದಿಂದಲೇ ಮನೆಮನೆಗಳಲ್ಲಿ ನೀಡಲ್ಪಡುತ್ತಿದ್ದ ಧರ್ಮ ತೇಜಯುಕ್ತ ಸಂಸ್ಕಾರಗಳ ಉಚ್ಚಾಟನೆಯಾಯಿತು. ಎಲ್ಲೆಡೆ ವಿದೇಶೀ ಸುಖಲೋಲುಪತೆಯ ಪ್ರಸಾರದಿಂದ ಬ್ರಾಹ್ಮಣವರ್ಣವು ನಾಶವಾಗಲು ಆರಂಭವಾಯಿತು.
೩ ಉ. ಪೌರೋಹಿತ್ಯದ ಶಿಕ್ಷಣ ಪಡೆಯಲು ನಾಚಿಕೆಯಾಗತೊಡಗಿದ್ದರಿಂದ ಮೂಲ ಧರ್ಮದ ಚೈತನ್ಯಸ್ರೋತದಲ್ಲಿನ ಹಿಂದೂತೇಜದ ಅಖಂಡತೆಯೇ ನಾಶವಾಗುವುದು : ಬ್ರಾಹ್ಮಣವರ್ಣದವರಿಗೆ ಗೇಲಿ  ಮಾಡಿದ ಕಾರಣ ಮುಂದಿನ ಪೀಳಿಗೆಗೆ ಪೌರೋಹಿತ್ಯದ ಶಿಕ್ಷಣ ಪಡೆಯಲೂ ನಾಚಿಕೆಯೆನಿಸತೊಡಗಿತು; ಅಂದರೆ ನಮ್ಮದೇ ಧರ್ಮದ ವಿಷಯದಲ್ಲಿ ನಾಚಿಕೆಯೆನಿಸಿದ್ದರಿಂದ ಮೂಲ ಧರ್ಮದ ಚೈತನ್ಯ ಸ್ರೋತದಲ್ಲಿನ ಹಿಂದೂ ತೇಜದ ಅಖಂಡತೆಯೇ ನಾಶವಾಗಲಾರಂಭಿಸಿತು. ಭೂಮಿಯತ್ತ ಬರುವ ಚೈತನ್ಯದ ಪ್ರವಾಹವು ತುಂಡಾದುದರಿಂದ, ಧರ್ಮಕ್ಕೆ ಹಾಗೂ ಆ ಮೂಲಕ ರಾಷ್ಟ್ರಕ್ಕೇ ದುರ್ದೆಶೆ ಪ್ರಾಪ್ತಿಯಾಯಿತು. ಇದರಿಂದ ರಾಷ್ಟ್ರದ ಸ್ಥಿತಿಯು ಚೈತನ್ಯದ ಅಭಾವದಿಂದ ಮರಣೋನ್ಮುಖವಾಯಿತು ಎಂದು ಪ.ಪೂ. ಡಾಕ್ಟರರು ಹೇಳಿದ್ದಾರೆ. ಇದರಿಂದಲೇ ಮುಂದಿನ ಕಾಲವು ವಿನಾಶದ್ದಾಗಿದೆ ಎಂಬುದು ಸಂಕೇತ ಸಿಗುತ್ತದೆ. (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ಆಶ್ವಯುಜ ಶುಕ್ಲ ೫, ಕಲಿಯುಗ ವರ್ಷ ೫೧೧೨ (೧೨.೧೦. ೨೦೧೦), ರಾತ್ರಿ ೮.೪೦)

No comments:

Post a Comment