ಪಟಾಕಿಯಲ್ಲಿ ಕುರಾನಿನ ಪುಟಗಳು :

ಪೊಲೀಸರಿಂದ ತತ್ಪರತೆಯಿಂದ ಅಪರಾಧ ದಾಖಲು
ಪೊಲೀಸರು ಇಂತಹ ತತ್ಪರತೆಯನ್ನು ಹಿಂದೂಗಳ ಧಾರ್ಮಿಕಭಾವನೆಯ ಬಗ್ಗೆ ಎಂದಾದರೂ ತೋರಿಸಿದ್ದಾರೇನು ?
ಮುಂಬೈ : ಈದ್ ನಿಮಿತ್ತ ನಾಗದೇವಿ ರಸ್ತೆಯಿಂದ ಮೆರವಣಿಗೆ ಹೋಗುತ್ತಿರುವಾಗ ಮುಸಲ್ಮಾನರು ೧೨ ಸಾವಿರ ರೂಪಾಯಿಗಳ ಪಟಾಕಿ ಹಾರಿಸಿದರು. ಆ ಪಟಾಕಿಗಳ ಒಳಗಿನ ಹೊದಿಕೆಗಾಗಿ ಕುರಾನಿನ ಪುಟ ಗಳನ್ನು ಬಳಸಲಾಗಿದೆಯೆಂದು ಒಬ್ಬ ಮುಸಲ್ಮಾನನ ಗಮನಕ್ಕೆ ಬಂದಿತು. ಆ ಮುಸಲ್ಮಾನನು ಪಟಾಕಿ ಹಾರಿಸುವುದನ್ನು ನಿಲ್ಲಿಸಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿದನು.
ಪೊಲೀಸರು ಈ ಪಟಾಕಿಗಳನ್ನು ಮಾರಾಟ ಮಾಡುವ ಇಲ್ಲಿನ ಸಾಬೂವಾಲಾ ಪಟಾಕಿ ಸಾಮಗ್ರಿಗಳ ಮಾರಾಟಗಾರ ಹಾಗೂ ಜಯೇಶ ಫೈಯರ್ ವರ್ಕ್ಸ, ಚೆನ್ನೆ  ಇವರ ವಿರುದ್ಧ ಅಪರಾಧವನ್ನು ನೋಂದಾಯಿಸಿದರು. (ಇದು ಪೊಲೀಸರ ಕರ್ತವ್ಯ ತತ್ಪರತೆಯಲ್ಲ ಇದು ಈ ದೇಶದಲ್ಲಿ ಅಲ್ಪ ಸಂಖ್ಯಾತರ ಪ್ರಭಾವದ ಪರಿಣಾಮವಾಗಿದೆ. ಹಿಂದೂಗಳೇ, ನೀವು ಯಾವಾಗ ಇಂತಹ ಪ್ರಭಾವವನ್ನು ಈ ಭಾರತ ದೇಶದಲ್ಲಿ ನಿರ್ಮಿಸುವಿರಿ ? - ಸಂಪಾದಕರು)

No comments:

Post a Comment