ಕೇವಲ ನಿರಪೇಕ್ಷ ವೃತ್ತಿಯಿಂದ ಕಾರ್ಯ ಮಾಡುವ ಸಂತರೇ ಹೀಗೆ ಮಾತನಾಡಲು ಸಾಧ್ಯ! ಇಂತಹ ಸಂತರೇ ರಾಷ್ಟ್ರದ ನಿಜವಾದ ಆಶಾಸ್ಥಾನ !
ಕೊಲ್ಹಾಪೂರ : ದೇಶದ ೫೦ ಸಾವಿರ ಕೋಟಿ ಹಣವನ್ನು ತೆಗೆದುಕೊಂಡು ಪುಣೆಯ ಓರ್ವ ಮಹಾನುಭಾವನು ವಿದೇಶಕ್ಕೆ ಓಡಿ ಹೋದನು. ಅವನು ಬ್ಯಾಂಕಿನಲ್ಲಿದ್ದ ತನ್ನ ಖಾತೆಯಲ್ಲಿ ಹಣವನ್ನು ಇಟ್ಟಿರಲಿಲ್ಲ. ಹಾಗಾದರೆ ಎಲ್ಲಿಟ್ಟಿದ್ದನು ? ಅದರ ವಿಚಾರಣೆ ಮಾಡುವ ಮೊದಲು ಅವನಿಗೆ ಎಷ್ಟು ಸಮಯ ನೀಡಿದರೆಂದರೆ ಅವನು ತನ್ನ ಎಲ್ಲ ಹಣವನ್ನು ತೆಗೆದುಕೊಂಡು ಓಡಿ ಹೋದನು. ನಾನು ಅವನ ಹೆಸರನ್ನು ಹೇಳಲು ಇಚ್ಛಿಸುವುದಿಲ್ಲ. ದೇಶದ ಇಷ್ಟು ದೊಡ್ಡ ಮೊತ್ತವನ್ನು ಅಪಹರಿಸುವ ಈ ಜನರೆಂದರೆ ಇಂದಿನ ಹಿರಣ್ಯಕಶ್ಯಪರೇ ಆಗಿದ್ದಾರೆ.
ಈ ಭ್ರಷ್ಟಾಚಾರಿಗಳ ವಿರುದ್ಧ ಕ್ರಾಂತಿ ಮಾಡುವುದು ಆವಶ್ಯಕವಾಗಿದೆ. ಈ ಕ್ರಾಂತಿಯಲ್ಲಿ ಎಲ್ಲರೂ ಸಹಭಾಗಿಯಾಗುವುದು ಆವಶ್ಯಕವಾಗಿದೆ. ಹೀಗಾದರೆ ಮಾತ್ರ ಭಾರತಕ್ಕೆ ಹೊಸ ಸ್ವಾತಂತ್ರ ದೊರಕುವುದು ಎಂದು ‘ಆರ್ಟ್ ಆಫ್ ಲಿವಿಂಗ್’ ಇದರ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜೀ ಯವರು ಮಾರ್ಗದರ್ಶನ ಮಾಡಿದ್ದಾರೆ. ಅವರು ಇಲ್ಲಿನ ಶಿವಾಜಿ ವಿದ್ಯಾಪೀಠದ ಮೈದಾನದಲ್ಲಿ ಆಯೋಜಿಸಿದ ‘ಅಭಂಗನಾದ’ ಎಂಬ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು.
No comments:
Post a Comment