ಪ.ಪೂ.ಡಾಕ್ಟರರು ‘ಎಲ್ಲರಿಗಾಗಿ ಉಪಾಯ’ ಇದರಲ್ಲಿ ನೀಡಿದ ಚಕ್ರಗಳ ಮೇಲೆ ಹಚ್ಚುವ ಶ್ರೀಕೃಷ್ಣನ ಚಿತ್ರಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ‘ಜನವರಿ’ಯಿಂದ ‘ಮೇ’ ಈ ಅವಧಿಯು ಸಾಧನೆಗಾಗಿ ಸಂಧಿಕಾಲವಾಗಿದೆ ಎಂದು ಅರಿವಾಗುವುದು ಹಾಗೂ ಕಾಲವನ್ನು ಮೊದಲೇ ತಿಳಿದುಕೊಳ್ಳುವ ಪ.ಪೂ.ಡಾಕ್ಟರರ ಅಲೌಕಿಕತೆಯು ಗಮನಕ್ಕೆ ಬರುವುದು
ಪ.ಪೂ.ಡಾಕ್ಟರರು ‘೨೦೧೧ರ ಜನವರಿ ೧೭ರಿಂದ ಮೇ’ ಈ ಕಾಲಾವಧಿ ಯಲ್ಲಿ ‘ಎಲ್ಲರಿಗಾಗಿ ಉಪಾಯ’ ಇದರಲ್ಲಿ ಕೇವಲ ಮೂರೇ ಚಕ್ರಗಳ ಮೇಲೆ ಶ್ರೀಕೃಷ್ಣನ ಚಿತ್ರಗಳನ್ನು ಹಚ್ಚಲು ಹೇಳಿದ್ದಾರೆ. ಇದರಿಂದ ಬ್ರಹ್ಮಾಂಡಮಂಡಲದ ಸ್ಥಿತಿ ಗಮನಕ್ಕೆ ಬರುತ್ತದೆ. ಈ ಕಾಲದಲ್ಲಿ ಚಕ್ರಗಳ ಮೇಲೆ ಹಚ್ಚುವ ಶ್ರೀಕೃಷ್ಣನ ಚಿತ್ರಗಳ ಪ್ರಮಾಣ ಕಡಿಮೆಯಿರುವುದರಿಂದ ‘ಬಾಹ್ಯ ವಾಯು ಮಂಡಲದಿಂದ ಸಾಧಕರ ಮೇಲಾಗುವ ಮಾಂತ್ರಿಕರ ಆಕ್ರಮಣಗಳ ಪ್ರಮಾಣವು ಇತರ ದಿನಗಳ ತುಲನೆಯಲ್ಲಿ ಕಡಿಮೆಯಿದೆ’, ಎಂಬುದು ತಿಳಿಯುತ್ತದೆ. ಇದರಿಂದ ‘೨೦೧೧ರ ಜನವರಿ ೧೭ರಿಂದ ಮೇ’ ಈ ೫ತಿಂಗಳು ಸಾಧನೆಗಾಗಿ ಸಂಧಿಕಾಲವಾಗಿದೆ ಎಂಬುದು ಗಮನಕ್ಕೆ ಬರುತ್ತದೆ.
ಪ.ಪೂ.ಡಾಕ್ಟರರಂತಹ ಕಾಲದ ಆಚೆಗೆ ಹೋಗಿರುವ ಪರಾತ್ಪರ ಗುರುಗಳು ಸನಾತನದ ಸಾಧಕರಿಗೆ ದೊರೆತಿರುವುದರಿಂದ ಮುಂಬರುವ ಕಾಲವು ಸಾಧನೆಗೆ ಅನುಕೂಲವಾಗಿದೆಯೇ ಇಲ್ಲವೇ ಎಂಬುದೂ ಸಾಧಕರಿಗೆ ಮೊದಲೇ ತಿಳಿಯುತ್ತದೆ, ಇದು ನಮ್ಮ ಪರಮಭಾಗ್ಯವೇ ಆಗಿದೆ. ಈ ಸಂಧಿಕಾಲದ ಲಾಭ ಪಡೆದು ತೀವ್ರ ಸಾಧನೆ ಮಾಡಿ ಶ್ರೀಕೃಷ್ಣನ ಕೃಪೆಯಿಂದ ಈಶ್ವರನ ಸಮೀಪ ಹೋಗಲು ಇನ್ನೂ ಹೆಚ್ಚು ಪ್ರಯತ್ನಿಸೋಣ, ಇದೇ ಈಶ್ವರನ ಚರಣಗಳಲ್ಲಿ ಪ್ರಾರ್ಥನೆ! -ಸೌ.ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಪುಷ್ಯ ಶುಕ್ಲ ೧೧, ಕಲಿಯುಗ ವರ್ಷ ೫೧೧೨ (೧೫.೧.೨೦೧೧)
ಸಂತರು ಹೇಳಿದ ಉಪಾಯದಲ್ಲಿ ಅವರ ಸಂಕಲ್ಪವೂ ಕಾರ್ಯನಿರತವಾಗಿರುತ್ತದೆ ಹಾಗೂ ಇತರರು ಹೇಳಿದ ಉಪಾಯದಲ್ಲಿ ಆ ಲಾಭವಿರುವುದಿಲ್ಲ:
ಸೂಕ್ಷ್ಮ ಪರೀಕ್ಷೆ ಮಾಡುವ ಅಥವಾ ಸೂಕ್ಷ್ಮದ ವಿಷಯಗಳು ತಿಳಿಯುವ ಸಾಧಕರು ಯಾವುದೇ ವಿಷಯದ ಸೂಕ್ಷ್ಮಪರೀಕ್ಷೆ ಮಾಡಿ ಅದಕ್ಕೆ ಉತ್ತರ ಹೇಳಿದಾಗ ಆ ಉತ್ತರವು ಸಂಕಲ್ಪದಂತೆ ಕಾರ್ಯ ಮಾಡಲಾರದು. ಆದರೆ ಯಾರಾದರೊಬ್ಬ ಸಂತರು ಯಾವುದೇ ವಿಷಯದ ಸೂಕ್ಷ್ಮ ಪರೀಕ್ಷೆ ಮಾಡಿ ಅದರ ಪರಿಣಾಮ ಹೇಳಿದಾಗ ಅಥವಾ ಉಪಾಯ ಹೇಳಿದಾಗ ಆ ಉತ್ತರವು ಅವರಲ್ಲಿನ ಚೈತನ್ಯ ದಿಂದ ಸಂಕಲ್ಪವೆಂದು ಕಾರ್ಯ ಮಾಡುತ್ತದೆ. ಇದರಿಂದ ಪ್ರತಿಯೊಂದು ವಿಷಯವನ್ನು ಸಂತರಲ್ಲಿ ವಿಚಾರಿಸುವುದರ ಮಹತ್ವವು ಗಮನಕ್ಕೆ ಬರುತ್ತದೆ. ಸಂತರು ನಮಗೆ ಉತ್ತರ ಮಾತ್ರವಲ್ಲ, ಅದಕ್ಕನುಸಾರ ಕೃತಿ ಮಾಡುವ ಆಧ್ಯಾತ್ಮಿಕ ಬಲವನ್ನೂ ನೀಡುತ್ತಾರೆ.
-ಸೌ.ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಪುಷ್ಯ ಶುಕ್ಲ ೧೧, ಕಲಿಯುಗ ವರ್ಷ ೫೧೧೨ (೧೫.೧.೨೦೧೧))
-ಸೌ.ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಪುಷ್ಯ ಶುಕ್ಲ ೧೧, ಕಲಿಯುಗ ವರ್ಷ ೫೧೧೨ (೧೫.೧.೨೦೧೧))
No comments:
Post a Comment