ಹುಬ್ಬಳ್ಳಿಯಲ್ಲಿ ದೇವಸ್ಥಾನಗಳ ತೆರವಿನ ವಿರುದ್ಧ ಹಿಂದೂಗಳ ಆಂದೋಲನ ಹಾಗೂ ದೇವಸ್ಥಾನದ ಪುನರ್ನಿರ್ಮಾಣ
ಭಾಜಪ ಸರಕಾರದ ಹಿಂದೂದ್ರೋಹ

ಯಂತ್ರದಿಂದ ದೇವಸ್ಥಾನವನ್ನು ಬೀಳಿಸುತ್ತಿರುವ ಸರಕಾರಿ ಅಧಿಕಾರಿ


‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’


‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’ 
ಇದರ ಬೆಂಗಳೂರು ಶಾಖೆಯ ಉದ್ಘಾಟನೆ
 






ಉಡುಪಿಯಲ್ಲಿ ಓರ್ವ ಕ್ರೈಸ್ತನಿಂದಾಗುತ್ತಿದ್ದ ದೇವತೆಗಳ ವಿಡಂಬನೆಯನ್ನು ತಡೆದ...

ಉಡುಪಿಯಲ್ಲಿ ಓರ್ವ ಕ್ರೈಸ್ತನಿಂದಾಗುತ್ತಿದ್ದ ದೇವತೆಗಳ ವಿಡಂಬನೆಯನ್ನು ತಡೆದ ಹಿಂದೂ ಧರ್ಮಾಭಿಮಾನಿ ಸೋಮಶೇಖರ!
ಉಡುಪಿ : ಇಲ್ಲಿನ ಪತ್ರಿಕೆಯೊಂದರ ಪ್ರಚಾರಾರ್ಥ ‘ನಗೆ ಹಬ್ಬ’ ಎಂಬ ಹಾಸ್ಯ ಕಾರ್ಯಕ್ರಮದಲ್ಲಿ ರಿಚರ್ಡ್ ಲುಯೀಸ್ ಎಂಬ ಕ್ರೈಸ್ತನು ಹಿಂದೂ ದೇವತೆಗಳ ವಿಡಂಬನೆಯನ್ನು ಮಾಡುತ್ತಿದ್ದನು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಧರ್ಮಾಭಿಮಾನಿ ಶ್ರೀ. ಸೋಮಶೇಖರರವರು ಈ ವಿಡಂಬನೆಯನ್ನು ತಡೆದರು. (ದೇವತೆಗಳ ವಿಡಂಬನೆಯನ್ನು ತಡೆಯುವ ಶ್ರೀ. ಸೋಮಶೇಖರರಿಗೆ ಅಭಿನಂದನೆಗಳು. ಇಂತಹ ಧರ್ಮಾಭಿಮಾನಿಗಳು ಎಲ್ಲೆಡೆ ನಿರ್ಮಾಣವಾದರೆ ದೇವತೆಗಳ ವಿಡಂಬನೆ ನಿಲ್ಲಲು ಸಮಯ ತಗಲಲಾರದು! - ಸಂಪಾದಕರು)

ಫೆಬ್ರವರಿ ೨೦ ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಲುಯೀಸ್‌ನು ದ್ರೌಪದಿ ವಸ್ತ್ರಾಪಹರಣ ಮತ್ತು ಶ್ರೀ ಗಣೇಶನ ವಿಡಂಬನೆ ಮಾಡುತ್ತಿದ್ದನು. ಈ ಸಮಯದಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಶ್ರೀ. ಸೋಮಶೇಖರರು ಎದ್ದು ನಿಂತು ಅದನ್ನು ವಿರೋಧಿಸಿದರು. ಅವರ ಧ್ವನಿ ಯಾರಿಗೂ ಸರಿಯಾಗಿ ಕೇಳಿಸದಿದ್ದುದರಿಂದ ಅವರು ವ್ಯಾಸಪೀಠದ ಹತ್ತಿರ ಹೋಗಿ ಲುಯೀಸ್ ನಿಗೆ ವಿರೋಧಿಸಿದರು. “ನಿನಗೆ ವಿಡಂಬನೆ ಮಾಡುವುದಿದ್ದರೆ ಯೇಸು ಮತ್ತು ಮೇರಿಯ ವಿಡಂಬನೆ ಮಾಡು. ನಮ್ಮ ದೇವತೆಗಳದ್ದು ಬೇಡ. ನೀನು ಈ ಮೊದಲೂ ಇಂತಹ ಕಾರ್ಯಕ್ರಮಗಳನ್ನು ಮಾಡಿದ್ದಿ. ದೂರದರ್ಶನದಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತೀಯಾ. ಅಲ್ಲಿ ನಾವೇನು ಮಾಡಲಾರೆವು. ಆದರೆ ಇವತ್ತು ನಿನ್ನನ್ನು ಪ್ರಶ್ನಿಸುವ ಅವಕಾಶ ಸಿಕ್ಕಿದೆ. ಇದೆಲ್ಲ ನಿಲ್ಲಿಸಿ ಹೊರಟು ಹೋಗು" ಎಂದರು.

ದಕ್ಷಿಣ ಭಾರತ ಸ್ತರದ ಸನಾತನ ಸಂಸ್ಥೆಯ ಶಿಬಿರ ಸಂಪನ್ನ

ಶಿಬಿರದ ಉದ್ಘಾಟನೆಯನ್ನು ದೀಪಪ್ರಜ್ವಲನೆಯ 
ಮೂಲಕ ಮಾಡುತ್ತಿರುವ ಸನಾತನದ ಸಂತ ಪೂ. ರಾಜೇಂದ್ರ ಶಿಂದೆ
ಮಂಗಳೂರು : ಇಲ್ಲಿನ ಧರ್ಮ ಜಾಗರಣ ಸಭಾಗೃಹದಲ್ಲಿ ಸನಾತನ ಸಂಸ್ಥೆಯ ೪ ದಿನಗಳ ಶಿಬಿರವು ನೆರವೇರಿತು. ಫೆಬ್ರವರಿ ೨೫ ರಂದು ಸನಾತನದ ಸಂತ ಪೂ. ರಾಜೇಂದ್ರ ಶಿಂದೆಯವರು ದೀಪ ಪ್ರಜ್ವಲಿಸಿ ಶಿಬಿರವನ್ನು ಉದ್ಘಾಟಿಸಿದರು. ಈ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ಆಂಧ್ರಪ್ರದೇಶ, ತಮಿಳುನಾಡು, ಕೇರಳದ ಸನಾತನದ ಸಾಧಕರು ಉಪಸ್ಥಿತರಿದ್ದರು.

ಪೂ. ರಾಜೇಂದ್ರ ಶಿಂದೆಯವರು ಶಿಬಿರದ ಉದ್ದೇಶವನ್ನು ಸ್ಪಷ್ಟಪಡಿಸುತ್ತಾ, ‘ನಾವು ಸ್ವಲ್ಪ ಪ್ರಮಾಣದಲ್ಲಿ ವ್ಯಷ್ಟಿ- ಸಮಷ್ಟಿ ಸಾಧನೆಯನ್ನು ಒಳ್ಳೆಯ ರೀತಿಯಲ್ಲಿ ಮಾಡುತ್ತಿದ್ದೇವೆ. ಅದರಲ್ಲಿ ಹೇಗೆ ಸಾತತ್ಯವಿಟ್ಟುಕೊಳ್ಳಬೇಕು ಎಂಬ ಬಗ್ಗೆ ಈ ಶಿಬಿರದಲ್ಲಿ ಚಿಂತನೆ ಮಾಡಲಾಗುವುದು. ಸಮಷ್ಟಿ ಸಾಧನೆಗಾಗಿ ಅಧ್ಯಯನ ಹಾಗೂ ಆಯೋಜನಾ ಕೌಶಲ್ಯವಿರುವುದು ಆವಶ್ಯಕವಾಗಿದೆ. ಅದನ್ನು ಬೆಳೆಸಲು ಕಲಿತುಕೊಳ್ಳೋಣ’ ಎಂದರು. ಈ ಸಮಯದಲ್ಲಿ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ಸನಾತನದ ವಿಶಾಖಪಟ್ಟಣಂನ ಸಾಧಕ ಶ್ರೀ.ವಿಷ್ಣುದಾಸ ಕೀರ್ತನೆಯವರನ್ನು ಸನಾತನದ ಸಂತ ಪೂ. ರಾಜೇಂದ್ರ ಶಿಂದೆಯವರು ಸತ್ಕರಿಸಿದರು. (ಶಿಬಿರದ ಸವಿಸ್ತಾರ ವಾರ್ತೆಯನ್ನು ಮುಂದಿನ ಸಂಚಿಕೆಯಲ್ಲಿ ಓದಿರಿ.)

ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ವಿಶಾಖಪಟ್ಟಣಂನ ...

ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ವಿಶಾಖಪಟ್ಟಣಂನ (ಆಂಧ್ರಪ್ರದೇಶ) ಸನಾತನದ ಸಾಧಕ ಶ್ರೀ. ವಿಷ್ಣುದಾಸ ಕೀರ್ತನೆ
ದಕ್ಷಿಣ ಭಾರತ ಶಿಬಿರದಲ್ಲಿ ಸತ್ಕಾರ
ಶ್ರೀ. ವಿಷ್ಣುದಾಸ ಕೀರ್ತನೆಕಾಕಾರನ್ನು ಸತ್ಕರಿಸುತ್ತಿರುವ ಪೂ. ರಾಜೇಂದ್ರ ಶಿಂದೆ

ಮಂಗಳೂರು : ೨೭.೨.೨೦೧೧ ರಂದು ಮಂಗಳೂರಿನಲ್ಲಾದ ದಕ್ಷಿಣ ಭಾರತದ ಶಿಬಿರದಲ್ಲಿ ಸನಾತನದ ಸಂತ ಪೂ. ರಾಜೇಂದ್ರ ಶಿಂದೆಯವರು ಶೇ. ೬೧ ಆಧ್ಯಾತ್ಮಿಕ ಮಟ್ಟ ತಲುಪಿದ ವಿಶಾಖಪಟ್ಟಣಂನ ಸನಾತನದ ಸಾಧಕ ಶ್ರೀ. ಕೀರ್ತನೆಕಾಕಾರವರನ್ನು ಸತ್ಕರಿಸಿದರು. ಕೀರ್ತನೆಕಾಕಾ ವಿಶಾಖಪಟ್ಟಣಂನಲ್ಲಿ ಪ್ರಸಾರದ ಸೇವೆ ಮಾಡುತ್ತಿದ್ದಾರೆ.